Advertisement

ಆರೋಗ್ಯ ಕಾಪಾಡುವ ಬಟಾಣಿ

09:35 AM Jun 25, 2019 | mahesh |

ನಾವು ತಿನ್ನುವ ಪ್ರತಿಯೊಂದು ಆಹಾರದಲ್ಲೂ ಕೆಲವೊಂದು ಪೌಷ್ಟಿಕಾಂಶಗಳಿರುತ್ತವೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಆಹಾರ ಸೇವನೆಯಲ್ಲಿ ಇತಿಮಿತಿಗಳಿದ್ದರೆ ಉತ್ತಮ. ಸಾಮಾನ್ಯವಾಗಿ ದಿನನಿತ್ಯದ ಆಹಾರಗಳಲ್ಲಿ ಹಸಿರು ಬಟಾಣಿಯ ಬಳಕೆ ಹೆಚ್ಚಾಗಿ ಮಾಡುತ್ತೇವೆ. ಆದರೆ ಅದು ಎಷ್ಟು ಪೌಷ್ಟಿಕಾಂಶಯುಕ್ತ ಆಹಾರ, ಅದರ ಪ್ರಯೋಜನ, ಅಪಾಯಗಳೇನು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.

Advertisement

ಇದು ಹೆಚ್ಚು ಫೈಬರ್‌ ಅಂಶವನ್ನು ಹೊಂದಿದೆ. ಅಲ್ಲದೇ ಅಪಾರ ರೋಗ ನಿರೋಧಕ ಶಕ್ತಿಯನ್ನೂ ಒಳಗೊಂಡಿದೆ. ಹೃದಯ ಸಂಬಂಧಿ ಕಾಯಿಲೆ, ಕಾನ್ಸರ್‌ ಬಾರದಂತೆ ಇದು ತಡೆಗಟ್ಟುತ್ತದೆ.

ಹೇಗೆ ಸೇವಿಸಬಹುದು?
ಕೊಯ್ಲಿನ ಸಂದರ್ಭದಲ್ಲೇ ಬಟಾಣಿಯ ಸೇವನೆ ಉತ್ತಮ. ಆಲೂಗಡ್ಡೆ, ಕ್ಯಾರೆಟ್, ಬೀನ್ಸ್‌ ಜತೆ ಸೇರಿಸಿ ಅಥವಾ ಗ್ರೀನ್‌ ಸಲಾಡ್‌ಗೆ ಹಾಕಿ ಇದರ ಸೇವನೆ ಮಾಡಬಹುದು. ಹಸಿರು ಬಟಾಣೆ ಸೂಪ್‌ ಮಾಡಿ ಕುಡಿದರೆ ಇನ್ನೂ ಉತ್ತಮ.

ಅಪಾಯಗಳು
ಬಟಾಣಿಯ ಹೆಚ್ಚು ವಿಟಮಿನ್‌ ಹೊಂದಿರುವುದರಿಂದ ಅತಿಯಾದ ಸೇವನೆಯು ದೇಹದಲ್ಲಿ ಕ್ಯಾಲ್ಸಿಯಂನ ಅಂಶವನ್ನು ಕಡಿಮೆಗೊಳಿಸುವ ಸಾಧ್ಯತೆಯಿದೆ.

ಪೌಷ್ಟಿಕಾಂಶಗಳು
ಹಸಿರು ಬಟಾಣಿಯಲ್ಲಿ ಕ್ಯಾಲೋರಿ ಅಂಶ ಕಡಿಮೆ. ದಿನಕ್ಕೆ ಸೇವಿಸುವ 170 ಗ್ರಾಮ್‌ ಬಟಾಣಿಯಲ್ಲಿ ಕ್ಯಾಲೋರಿ 62, ಕಾಬ್ರ್ಸ್ 11 ಗ್ರಾಂ, ಫೈಬರ್‌ 4 ಗ್ರಾಂ, ಪ್ರೊಟೀನ್‌ 4 ಗ್ರಾಂ, ವಿಟಮಿನ್‌ ಎ ಶೇ. 34, ವಿಟಮಿನ್‌ ಕೆ ಶೇ. 24, ವಿಟಮಿನ್‌ ಸಿ ಶೇ. 13, ಕಬ್ಬಿಣಾಂಶ ಶೇ. 7 ಇರುತ್ತದೆ. ಹೆಚ್ಚು ಪ್ರೊಟೀನ್‌ ಹೊಂದಿದೆ.
ಪ್ರಯೋಜನಗಳು
1 ಕಡಿಮೆ ಫ್ಯಾಟ್ ಮತ್ತು ಕ್ಯಾಲೋರಿ ಹೊಂದಿರುವುದರಿಂದ ಇದು ತೂಕ ಇಳಿಕೆಗೆ ಸಹಕಾರಿ. ಸಾಮಾನ್ಯವಾಗಿ ಡಯೆಟ್ ಮಾಡುವವರಿಗೆ ಹೆಚ್ಚು ಪ್ರಯೋಜನಕಾರಿ.

2 ಸಣ್ಣ ಗಾತ್ರದ ಹಸಿರು ಬಟಾಣಿಯಲ್ಲಿರುವ ಪಾಲಿಫ‌ನಲ್ ಅಂಶ ಕ್ಯಾನ್ಸರ್‌ಗೆ ರಾಮಬಾಣ.

Advertisement

3 ಇದು ಅತಿ ಹೆಚ್ಚು ರೊಗ ನಿರೋಧಕ ಶಕ್ತಿ ಹೊಂದಿದೆ. ಇದರಲ್ಲಿನ ಕಬ್ಬಿಣಾಂಶ, ಕ್ಯಾಲ್ಸಿಯಂ, ತಾಮ್ರದ ಅಂಶಗಳು ರೋಗನಿರೋಧಕ ಶಕ್ತಿಯಾಗಿ ಕೆಲಸ ಮಾಡುತ್ತದೆ.

4 ಚರ್ಮದ ರಕ್ಷಣೆಗೆ ಹಸಿರು ಬಟಾಣಿ ಸಹಾಯಕ.

5 ಹಸಿರು ಬಟಾಣಿಯು ದೃಷ್ಟಿ ಸಮಸ್ಯೆಯನ್ನು ನಿವಾರಿಸುವ ಶಕ್ತಿ ಹೊಂದಿದೆ.

•••ರಂಜಿನಿ

Advertisement

Udayavani is now on Telegram. Click here to join our channel and stay updated with the latest news.

Next