ಭಾರತೀನಗರ: ನಿತ್ಯ ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯರಾಗಬೇಕು. ನಿರಂತರ ಕ್ರೀಡಾಭ್ಯಾಸದಿಂದ ಮಾನವನ ಬೌದ್ಧಿಕ ವಿಕಾಸದ ಜೊತೆ ಸಾಮಾಜಿಕ, ಆಧ್ಯಾತ್ಮಿಕ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಇಲ್ಲಿನ ಭಾರತೀಕಾಲೇಜಿನ ಭಾರತೀ ಕ್ರೀಡಾಂಗಣದಲ್ಲಿ ಡಾ.ಜಿಮಾದೇಗೌಡ ಪ್ರೀಮಿಯರ್ ಲೀಗ್ 2021ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕ್ರಿಕೆಟ್‌ನಲ್ಲಿ ಸೋಲು-ಗೆಲುವು ಇರುತ್ತದೆ. ಅದನ್ನೂ ಯಾರೂ ವೈಯುಕ್ತಿಕವಾಗಿತೆಗೆದುಕೊಳ್ಳಬಾರದು. ಮಂಡ್ಯ ಜಿಲ್ಲೆಯಲ್ಲಿ ಮೊದಲ ಭಾರಿಗೆ ಯೂಟ್ಯೂಬ್‌ನಲ್ಲಿ ಪಂದ್ಯಗಳ ನೇರ ಪ್ರಸಾರ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕ್ರೀಡಾ ಚಟುವಟಿಕೆಯಿಂದ ಮಾನವನ ಆರೋಗ್ಯ ಬಲವರ್ಧನೆಗೊಳ್ಳಲಿದೆ. ಬದುಕುವ ಆಯಸ್ಸಿನ ಪ್ರಮಾಣ ಹೆಚ್ಚಾಗಲಿದೆ. ಶಿಕ್ಷಣ ಮತ್ತು ಕ್ರೀಡೆ ಎನ್ನುವುದು ಎರಡುಕಣ್ಣುಗಳಿದ್ದಂತೆ. ಇವುಗಳನ್ನು ಸಮಪಾಲಿನಲ್ಲಿ ತೆಗೆದುಕೊಂಡುಹೋದಲ್ಲಿ ಉತ್ತಮ ವ್ಯಕ್ತಿತ್ವ, ಜೀವನ, ಹೊಸ ಉಲ್ಲಾಸದ ಬದುಕನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಒತ್ತಡದ ಜೀವನಕ್ಕೆ ಕ್ರೀಡೆ ಅವಶ್ಯ: ವಿಧಾನ ಪರಿಷತ್ ಮಾಜಿ ಸದಸ್ಯ ಮಧು.ಜಿ ಮಾದೇಗೌಡ ಮಾತನಾಡಿ, ಒತ್ತಡದ ಜೀವನಕ್ಕೆಕ್ರೀಡೆ ಅತ್ಯವಶ್ಯಕ. ಪ್ರಸ್ತುತ ಸ್ವಲ್ಪ ವಿರಾಮವಾಗಿ ಇದ್ದಾರೆ ಎಂದರೆ, ಅದು ಕ್ರೀಡೆಯಿಂದ. ವಿದ್ಯಾರ್ಥಿಗಳು ಓದಿನ ಜತೆಗೆ ಯಾವ ಕ್ರೀಡೆಯಲ್ಲಿ ಆಸಕ್ತಿ ಇರುತ್ತದೆ ಎಂಬುದನ್ನು ತಿಳಿದುಕೊಂಡು ಕ್ರೀಡೆಗೆ ಹೆಚ್ಚು ಆದ್ಯತೆ ನೀಡಿದರೆ, ನಮ್ಮಲ್ಲಿ ಸಾಧಕರು ಬೆಳೆಯುತ್ತಾರೆ ಎಂದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ಕೆಪಿಸಿಸಿ ಸದಸ್ಯ ಎಸ್. ಗುರುಚರಣ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಬಿ.ಬಸವರಾಜು, ಎ.ಎಸ್. ರಾಜೀವ್, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿಶಿವಲಿಂಗೇಗೌಡ, ಗ್ರಾಪಂ ಅಧ್ಯಕ್ಷ ರವಿಚಂದ್ರ, ಉಪನ್ಯಾಸಕ ಕೆ.ಎಚ್ .ಪ್ರಸನ್ನಕುಮಾರ್, ಡಿ.ಪಿ.ಪ್ರಮೋದ್ ಕುಮಾರ್ ಹಾಜರಿದ್ದರು.