Advertisement

ಆರು ತಿಂಗಳಿಗೊಮೆ ರಕ್ತ ದಾನದಿಂದ ಆರೋಗ್ಯ ವೃದ್ಧಿ

03:32 PM Sep 22, 2019 | Suhan S |

ಕನಕಪುರ: ಪ್ರತಿಯೊಬ್ಬರು ಪ್ರತಿ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಉತ್ತಮ ಆರೋಗ್ಯ ವೃದ್ಧಿಯಾಗುತ್ತದೆ. ಜೊತೆಗೆ ಇನ್ನೊಂದು ಜೀವ ಉಳಿಸುವ ಕಾರ್ಯಕ್ಕೆ ಯುವಜನತೆ ಮುಂದಾಗಬೇಕು ಎಂದು ಲಯನ್ಸ್‌ ಟ್ರೀ ಪ್ಲಾಟಿಂಗ್‌ ರೂರಲ್‌ ಜಿಲ್ಲಾಧ್ಯಕ್ಷ ಮರಸಪ್ಪ ರವಿ ತಿಳಿಸಿದರು.

Advertisement

ನಗರದ ಆರ್‌ಇಎಸ್‌ ಶಿಕ್ಷಣ ಸಂಸ್ಥೆಯ ರೂರಲ್‌ ಪದವಿ ಕಾಲೇಜು ಆವರಣದಲ್ಲಿ ಎನ್‌ಎಸ್‌ಎಸ್‌ ಮತ್ತು ಎನ್‌ಸಿಸಿ, ಅರ್ಬನ್‌ ಕೋ ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ ಹಾಗೂ ಸರ್‌ಎಂ. ವಿಶ್ವೇಶ್ವರಾಯ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಆಶ್ರಯದಲ್ಲಿ ಲಯನ್ಸ್‌ ಮತ್ತು ಲಿಯೋ ಕ್ಲಬ್‌ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು, ಶಿಕ್ಷಕರು, ಆರ್‌ ಇಎಸ್‌ ಶಿಕ್ಷಣ ಸಂಸ್ಥೆಯ ನೌಕರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ರಕ್ತದಾನ ಮಾಡಿದರು. ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರ್‌ಇಎಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಯನ್ಸ್‌ ಜಿÇÉಾ ರಾಜ್ಯಪಾಲರಾದ ಜಿ.ಎಸ್‌. ರಮೇಶ್‌ ಅತಿಥಿಗಳಾಗಿ ಭಾಗವಹಿಸಿದ್ದರು.

ಶಿಬಿರದಲ್ಲಿ ಲಯನ್ಸ್‌ ಜಿಲ್ಲಾ ಅಧ್ಯಕ್ಷ ರವಿ ಪಾಲ್‌, ಚಂದ್ರಶೇಖರ್‌, ಲಿಯೋ ಅಧ್ಯಕ್ಷ ದರ್ಶನ್‌, ಮಹೇಶ್‌ ಗೌಡ, ಆರ್‌ಇಎಸ್‌ ಶಿಕ್ಷಣ ಸಂಸ್ಥೆಯ ಉಪ ಅಧ್ಯಕ್ಷ ಶಿವಕುಮಾರ್‌, ಕಾರ್ಯದರ್ಶಿ ರಮೇಶ್‌, ಲಯನ್ಸ್‌ ವೆಟರ್ನರಿ ಕ್ಯಾಂಪ್‌ ನಿಂಗ ರಾಜಯ್ಯ, ಎಂ.ಕೃಷ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next