Advertisement

“ಗೋ ಉತ್ಪನ್ನಗಳ ಬಳಕೆಯಿಂದ ಆರೋಗ್ಯವೃದ್ಧಿ’

09:52 PM Mar 11, 2020 | mahesh |

ಉಡುಪಿ: ಗೋವು ಪ್ರಕೃತಿಯ ಸಂಕೇತ. ಗೋವುಗಳ ಪ್ರತಿಯೊಂದು ಉತ್ಪನ್ನದಲ್ಲೂ ಔಷಧ ಗುಣಗಳಿವೆ. ಇಂದು ಮಾರುಕಟ್ಟೆಯಲ್ಲಿ ದೊರೆಯುವ ವಿದೇಶಿ ದಿನ ಉಪಯೋಗಿ ರಾಸಾಯನಿಕ ಉತ್ಪನ್ನಗಳಿಂದ ಆರೋಗ್ಯಕ್ಕೆ ಹಾನಿ ಹೆಚ್ಚು. ಇದರ ಬದಲು ದೇಶಿ ಗೋವುಗಳಿಂದ ತಯಾರಾಗುವ ದಿನ ಉಪಯೋಗಿ ಉತ್ಪನ್ನಗಳನ್ನು ಕೊಂಡುಕೊಳ್ಳುವ ಮೂಲಕ ಆರೋಗ್ಯ ಹಾಗೂ ಗೋವುಗಳ ಸಂರಕ್ಷಣೆಗೆ ಗಮನಹರಿಸುವಂತೆ ಆರೂರು ಪುಣ್ಯಕೋಟಿ ಗೋಶಾಲೆಯ ಭಕ್ತಿ ಭೂಷಣ ಆರೂರು ತಿಳಿಸಿದರು.

Advertisement

ಉಡುಪಿ ಜಿಲ್ಲಾ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ನಡೆದ “ಗೋವು ಮತ್ತು ನಮ್ಮ ಆರೋಗ್ಯ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದಿನ ಕಾಲಘಟ್ಟದಲ್ಲಿ ಜನರಲ್ಲಿ ಯಾವ ಕೆಲಸಕ್ಕೂ ಸಮಯವೇ ಇಲ್ಲ ಎಂಬ ಮನೋಭಾವದಲ್ಲಿ ಅನೇಕ ತರಹದ ರೋಗಗಳನ್ನು ಎದುರಿಸುತ್ತಿದ್ದಾರೆ. ಇಂದು ಜನರು ತಮ್ಮ ಶರೀರದ ಬಗ್ಗೆ ಧ್ಯಾನ ಕೊಡದಿರುವುದರಿಂದ ವೈದ್ಯರು ಇವರ ಮೇಲೆ ಧ್ಯಾನಕೊಡುವಂತಾಗಿದೆ ಎಂದರು.

ಹಿಂದೆ ಪ್ರತಿ ಮನೆಯಲ್ಲೂ ಗೋವುಗಳಿದ್ದವು. ಇಂದು ಗೋವುಗಳ ಶುದ್ಧ ಹಾಲು ಸಿಗುವುದೇ ಕಷ್ಟವಾಗಿದೆ. ಇಂದು ಪರಿಸರದಲ್ಲಿ ಶುದ್ಧ ನೀರು, ಗಾಳಿ, ಸೇರಿದಂತೆ ಆಹಾರ ಸಿಗು‌ವುದು ಕಷ್ಟಕರ ವಾಗಿದೆ. ಗೋಮಯದಲ್ಲಿ 24.11 ಆಮ್ಲಜನಕದ ಪ್ರಮಾಣ ಇರುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಗೋವುಗಳು ನೀಡುವ ಸಾವಯವ ಗೊಬ್ಬರಗಳಿಂದ ಆರೋಗ್ಯಕರ ತರಕಾರಿ ಮೊದಲಾದ ವ್ಯವಸಾಯಗಳನ್ನು ಮಾಡಲು ಸಾಧ್ಯವಿದೆ. ಹೆತ್ತವರು ಕೂಡ ಮಕ್ಕಳ ಭವಿಷ್ಯವನ್ನು ಕಾಗದದ ನೋಟುಗಳನ್ನು ಬ್ಯಾಂಕ್‌ಗಳ ಮೂಲಕ ಕೂಡಿಡುವ ಕೆಲಸಕ್ಕೆ ಮುಂದಾಗುತ್ತಿದ್ದಾರೆಯೇ ಹೊರತು ಸಂಪ್ರದಾಯಗಳನ್ನು, ಆರೋಗ್ಯಕರ ಜೀವನ ಶೈಲಿಗಳನ್ನು ನೀಡುವಲ್ಲಿ ವಿಫ‌ಲರಾಗಿದ್ದಾರೆ. ಕೋಲ್‌ಗೆಟ್‌ ಮೊದಲಾದ ವಿದೇಶೀ ಕಂಪೆನಿ ವರ್ಷಕ್ಕೆ 15 ಸಾವಿರ ಕೋಟಿ ರೂ. ಮಾಡುತ್ತಿದೆ. ಇಂದು ಕೆಲ ದೇಶದ ಸಾಧು ಸಂತರು ದೇಶೀ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದುದರಿಂದ ವಿದೇಶಿ ಕಂಪೆನಿಗಳ ಬಣ್ಣದ ಜಾಲವನ್ನು ನಿಯಂತ್ರಿಸಲು ಸಾಧ್ಯವಾಗಿದೆ.ದೇಶಿಯ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಮೂಲಕ ಹಿರಿಯರಿಂದ ವೈಜ್ಞಾನಿಕವಾಗಿ ಮನ್ನಣೆ ಪಡೆದಿರುವ ವಸ್ತುಗಳನ್ನು ಖರೀದಿಸುವಂತೆ ತಿಳಿಸಿದರು.

ಜಿಲ್ಲಾ ಸಂಘಚಾಲಕ ಡಾ| ನಾರಾಯಣ್‌ ಶೆಣೈ, ಜಿಲ್ಲಾ ಗೋ ಸೇವಾ ಪ್ರಮುಖ್‌ ಶ್ರೀನಿವಾಸ್‌ ಉಪ್ಪೂರು ಉಪಸ್ಥಿತರಿದ್ದರು. ಗಣೇಶ್‌ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next