ತೀರ್ಥಹಳ್ಳಿ: ಸೆ.17 ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ, ಸೆ.25 ದಿನದಯಾಳ್ ಉಪಾಧ್ಯಾಯರ ಜನ್ಮದಿನ, ಅ.2 ರಂದು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮದಿನ ಈ ಎಲ್ಲಾ ಕಾರ್ಯಕ್ರಮದ ಅಂಗವಾಗಿ ಸೆ 17 ರಿಂದ ಅ.2 ರವರೆಗೆ ಸೇವಾ ಪಾಕ್ಷಿಕವನ್ನು ಯುವ ಮೋರ್ಚಾ ವತಿಯಿಂದ ಆಚರಿಸಲಾಗುತ್ತದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಬಾಳೆಬೈಲು ರಾಘವೇಂದ್ರ ತಿಳಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು ಪ್ರಧಾನಿ ನರೇಂದ್ರ ಜನ್ಮದಿನ ಸೆ.17 ರಂದು ಹಾಗೂ ನಾವೆಲ್ಲರೂ ಅವರ ಹುಟ್ಟುಹಬ್ಬವನ್ನು “ಸೇವಾ ಪಾಕ್ಷಿಕ”ಅಡಿಯಲ್ಲಿ ಹದಿನೈದು ದಿನಗಳ ಕಾಲ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸಿ ಅವುಗಳ ಮೂಲಕ ಪ್ರಧಾನಿಗಳ ದೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸಲಿದ್ದೇವೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರವರ ಸೂಚನೆಯಂತೆ “ಸೇವಾ ಪಾಕ್ಷಿಕ ” ವನ್ನು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 02 ರವರೆಗೆ ವಿವಿಧ ಸೇವಾ ಕಾರ್ಯಗಳ ಮೂಲಕ ಈ ಎಲ್ಲಾ ಆಯೋಜನೆಯನ್ನು ನಡೆಸಲಾಗುತ್ತಿದೆ ಎಂದರು.
ಯುವಮೋರ್ಚಾದಿಂದ ಕಾರ್ಯಕ್ರಮಗಳು ಏನೇನು ?
ಸೆ.17 ರಂದು ಆರೋಗ್ಯ ತಪಾಸಣೆ, ಅಂಗಗಳ ಜೋಡಣೆ, ಲಸಿಕಾ ಅಭಿಯಾನ, ರಕ್ತದಾನ ಶಿಬಿರ ನೆಡೆಯಲಿದೆ. ಸೆ.22 ರಿಂದ 26 ರವರೆಗೆ ಅಮೃತ ಸರೋವರ ಅರಳಿ ಸಸಿ ನೆಡುವ ಕಾರ್ಯಕ್ರಮ ನೆಡೆಯಲಿದೆ. ಸೆ.24 ಪ್ರತಿ ಬೂತ್ ಮಟ್ಟದಲ್ಲಿ ಕಮಲೋತ್ಸವ, ದೀನ್ ದಯಾಳ್ ಜಿ ಸ್ಮರಣೆ, ಮನ್ ಕೀ ಬಾತ್, ಕೇಸರಿ ಟೋಪಿ ಧರಿಸಿ ಪಕ್ಷದ ಧ್ವಜಾರೋಹಣ, ಸೆ.25 ರಿಂದ 28 ರವರೆಗೆ ಒಬಿಸಿ ಮತ್ತು ಎಸ್ ಸಿ ಮೋರ್ಚಾ ನೇತೃತ್ವದಲ್ಲಿ ಫಲನುಭವಿಗಳ ಸಮಾವೇಶ, ಸೆ.29 ರಂದು ಮಹಿಳಾ ಮೋರ್ಚಾ ನೇತೃತ್ವದಲ್ಲಿ ಅಂಗನವಾಡಿ ಸೇವಾ ದಿವಸ್ ಮತ್ತು ಪತ್ರ ಬರಹ, ಸೆ.30 ರಂದು ಎಸ್ ಟಿ ತಾಂಡಾ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ, ಅ. 2 ರಂದು ಮಹಾತ್ಮಾ ಗಾಂಧಿ ಜಯಂತಿ, ಖಾದಿ ಉತ್ಸವ ನೆಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ನವೀನ್ ಹೆದ್ದೂರು, ಪ್ರಶಾಂತ್ ಕುಕ್ಕೆ, ಪದ್ಮಿನಿ, ಋಷಿಕೇಶ್ ಪೈ, ಹಸಿರುಮನೆ ನಂದನ್, ಮಧುರಾಜ್ ಹೆಗ್ಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.