Advertisement
ಪಿಸಿಒಡಿ ಮತ್ತು ಬೊಜ್ಜು
Related Articles
Advertisement
ಗರ್ಭಧಾರಣೆಯ ಸಂದರ್ಭ ಪೌಷ್ಟಿಕಾಂಶ ಕೊರತೆ
ಇದರಿಂದ ತಾಯಿಗೆ ರಕ್ತಹೀನತೆ ಉಂಟಾಗಿ ಗರ್ಭಕೋಶದಲ್ಲಿರುವ ಭ್ರೂಣದ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಆದ್ದರಿಂದ ಮಹಿಳೆ ಗರ್ಭಧರಿಸಿದ ಸಂದರ್ಭದಲಿಲ ಉತ್ತಮ ಪೌಷ್ಟಿಕಾಂಶ ಮಟ್ಟ ಕಾಪಾಡಿಕೊಳ್ಳುವುದು ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ.
ಗರ್ಭಧಾರಣೆಯ ಸಂದರ್ಭದಲ್ಲಿ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು
ಇತ್ತೀಚೆಗಿನ ದಿನಗಳಲ್ಲಿ ಇದು ಬಹಳ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಪ್ರಧಾನ ಕಾರಣ ಎಂದರೆ ತಾಯಿಯ ಮುಂದುವರಿದ ವಯಸ್ಸು (35 ವರ್ಷಗಳ ಬಳಿಕ ತಾಯಿಯಾಗುವುದು) ಮತ್ತು ಒತ್ತಡಯುಕ್ತ ಜೀವನಶೈಲಿ. ವಿಶೇಷವಾಗಿ ಉದ್ಯೋಗಿ ಮಹಿಳೆಯರಲ್ಲಿ ಈ ತೊಂದರೆ ಹೆಚ್ಚು.
ಪ್ರಸೂತಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು
ಹೆರಿಗೆಯಾದ ಬಳಿಕ ತೀವ್ರ ರಕ್ತಸ್ರಾವ ಇದಕ್ಕೆ ಒಂದು ಉದಾಹರಣೆ. ಇದು ಪ್ರಾಣಾಪಾಯಕ್ಕೆ ಕಾರಣವಾಗಬಹುದಾದ ಸಮಸ್ಯೆ. ಹೀಗಾಗಿ ಇದಕ್ಕೆ ಉತ್ತಮ ಆಸ್ಪತ್ರೆಯಲ್ಲಿ ಪರಿಣತ ವೈದ್ಯರಿಂದ ಚಿಕಿತ್ಸೆ ನೀಡಬೇಕು.
ಪೆಲ್ವಿಕ್ ಸೋಂಕುಗಳು
ಜನನಾಂಗದ ಮೂಲಕ ಬಿಳುಪು ಹೋಗುವ ಸಮಸ್ಯೆಯುಳ್ಳ ಮಹಿಳೆಯರಿಗೆ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಸರಿಯಾಗಿ ಚಿಕಿತ್ಸೆ ನೀಡದೆ ಹೋದರೆ ಮೂತ್ರಾಂಗ ವ್ಯೂಹ ಮತ್ತು ಪೆಲ್ವಿಕ್ ಉರಿಯೂತ ಕಾಯಿಲೆ ಪದೇಪದೆ ಉಂಟಾಗಬಹುದು. ಆದ್ದರಿಂದ ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.
ಗರ್ಭಕೋಶ ಮತ್ತು ಅಂಡಾಶಯಗಳಲ್ಲಿ ಗಡ್ಡೆಗಳು
ಸಾಮಾನ್ಯವಾಗಿ ಕಾಣಿಸಿಕೊಳ್ಳುವಂಥದ್ದು ಗರ್ಭಕೋಶದ ಫೈಬ್ರಾಯ್ಡ ಹಾಗೂ ಕೆಲವು ಮಹಿಳೆಯರಲ್ಲಿ ಕ್ಯಾನ್ಸರ್‌ಕಾರಕವಲ್ಲದ ಅಂಡಾಶಯದ ಗಡ್ಡೆಗಳು. ಸಾಮಾನ್ಯವಾಗಿ ಇವು ಋತುಸ್ರಾವದ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವ ಮತ್ತು ಹೆಚ್ಚು ನೋವಿನ ಜತೆಗೆ ಸಂಬಂಧ ಹೊಂದಿರುತ್ತದೆ. ಇದನ್ನು ಶೀಘ್ರವಾಗಿ ತಪಾಸಣೆಗೆ ಒಳಪಡಿಸಬೇಕು ಮತ್ತು ಅಗತ್ಯಬಿದ್ದಲ್ಲಿ ಶಸ್ತ್ರಚಿಕಿತ್ಸೆ ನೀಡಬೇಕು.
ಋತುಚಕ್ರ ಬಂಧದ ಬಳಿಕದ ಸಮಸ್ಯೆಗಳು
ಋತುಚಕ್ರ ನಿಲ್ಲುವ ವಯಸ್ಸಿನಲ್ಲಿ ಈ ಸಮಸ್ಯೆಗಳು ತಲೆದೋರುತ್ತವೆ. ಸಾಮಾನ್ಯವಾಗಿ ಮೈ ಬೆವರುವುದು, ಮೈಕೈನೋವು, ನಿದ್ದೆಯ ಕೊರತೆ ಮತ್ತು ಬೇಗನೆ ಸಿಟ್ಟಿಗೇಳುವುದು ಇತ್ಯಾದಿ ಇರುತ್ತವೆ. ಇಂತಹ ಮಹಿಳೆಯರಿಗೆ ಆಪ್ತಸಮಾಲೋಚನೆ ಮತ್ತು ಪೂರಕ ಚಿಕಿತ್ಸೆ ಅಗತ್ಯವಾಗಿರುತ್ತದೆ.
ಅಪಾಯಕಾರಿ ಬೆಳವಣಿಗೆಗಳು
ಸ್ತನದ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್‌ನಂತಸ ಸಮಸ್ಯೆಗಳು ಹಿರಿಯ ವಯಸ್ಸಿನಲ್ಲಿ ತಲೆದೋರಬಹುದಾಗಿದೆ. ಆದ್ದರಿಂದ ಎಲ್ಲ ಮಹಿಳೆಯರೂ 40 ವರ್ಷ ವಯಸ್ಸಿನ ಬಳಿಕ ಇವುಗಳಿಗೆ ಸಂಬಂಧಿಸಿದ ತಪಾಸಣೆಗಳನ್ನು ಮಾಡಿಸಿ ಕೊಳ್ಳಬೇಕು ಮತ್ತು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
-ಡಾ| ಸಮೀನಾ ಕನ್ಸಲ್ಟಂಟ್, ಒಬ್‌ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು