Advertisement
ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಮಾದರಿಯಲ್ಲಿಯೇ ಯೋಜನೆ ಇರಲಿದೆ. ಹಾಲಿ ಇರುವ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವಿಮೆ ನೀಡಲಾಗುತ್ತದೆ ಮತ್ತು 50 ಕೋಟಿ ಮಂದಿಗೆ ಇದರಿಂದ ನೆರವಾಗಿದೆ. ಕೇಂದ್ರ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ “ನ್ಯೂಸ್18′ ವರದಿ ಮಾಡಿರುವ ಪ್ರಕಾರ ಆರೋಗ್ಯ ವಿಮೆಯಿಂದ ವಂಚಿತರಾಗಿರುವವರಿಗೆ”ಪಿಎಂಜೆಎವೈ ಕ್ಲೋನ್ ಕವರ್’ ಅನ್ನು ಜಾರಿಗೊಳಿಸಲು ಇರಾದೆಯಲ್ಲಿದೆ ಕೇಂದ್ರ ಸರ್ಕಾರ.
Related Articles
Advertisement
ಸರ್ಕಾರ ಈಗಾಗಲೇ ಗುರುತಿಸಿರುವ 21 ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿ ಯೋಜನೆ ಜಾರಿ ಮಾಡಲಾಗುತ್ತದೆ. ಮ್ಯಾಕ್ಸ್ ಬೂಪಾ ಆರೋಗ್ಯ ವಿಮಾ ಕಂಪನಿ ಲಿ., ರಾಯಲ್ ಸುಂದರಂ ಜನರಲ್ ಇನುರೆನ್ಸ್ ಕಂಪನಿ ಸೇರಿ ಅನೇಕ ಪ್ರಮುಖ ಕಂಪನಿಗಳ ಹೆಸರಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಿಮೆ ಲೆಕ್ಕಾಚಾರ: ಪಿಎಂಜೆಎವೈ – 50 ಕೋಟಿ ರಾಜ್ಯ ಸರ್ಕಾರದ ವಿಮೆಗಳನ್ನು ಹೊಂದಿರುವವರು – 3 ಕೋಟಿ ಇಸಿಎಚ್‌ಎಸ್/ಇಎಸ್‌ಸಿಐ/ಸಿಜಿಎಚ್‌ಎಸ್ – 15-17 ಕೋಟಿ ಖಾಸಗಿ ಸಂಸ್ಥೆಗಳ ಆರೋಗ್ಯ ವಿಮೆ- 14 ಕೋಟಿ ಬಾಕಿ ಉಳಿದವರು – 40 ಕೋಟಿ