Advertisement

ಪಕ್ಷದ ಭರವಸೆಯಂತೆ ಮುನಿರತ್ನಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ : ಡಾ.ಕೆ. ಸುಧಾಕರ್‌

05:01 PM Sep 29, 2020 | sudhir |

ಬೆಂಗಳೂರು: ಪಕ್ಷದ ಭರವಸೆಯಂತೆ ಮುನಿರತ್ನ ಅವರಿಗೇ ಟಿಕೆಟ್‌ ಸಿಗುವ ವಿಶ್ವಾಸವಿದ್ದು, ಯಾವುದೇ ಪ್ರತಿರೋಧವಿಲ್ಲದೇ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದರು.

Advertisement

ಅಧಿಕೃತ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರ ಅವರು, ಮುನಿರತ್ನ ಅವರು ಶಾಸಕ‌ ಸ್ಥಾನ ತ್ಯಜಿಸಿ ಸರಕಾರ ರಚನೆಗಾಗಿ ಕೊಡುಗೆ ನೀಡಿದ್ದಾರೆ. ಆ ವೇಳೆ ನೀಡಿದ ಭರವಸೆಯಂತೆ ಹಿರಿಯ ನಾಯಕರು ಖಂಡಿತ ನ್ಯಾಯುತವಾದ ತೀರ್ಮಾನ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಉಪ ಚುನಾವಣೆಯಲ್ಲಿ ಗೆದ್ದ ನಮ್ಮೆಲ್ಲರಿಗೂ ಭರವಸೆಯಂತೆ ನಡೆದುಕೊಂಡಿದ್ದಾರೆ. ಹೀಗಾಗಿ ಮುನಿರತ್ನ ಅವರಿಗೂ ಸಹ ಈ ಬಾರಿ ಯಾವುದೇ ಅನ್ಯಾಯವಾಗುವುದಿಲ್ಲ. ಯಾರಿಗೆ ಆದ್ಯತೆ ನೀಡಬೇಕು ಎಂಬುದು ಪಕ್ಷದ‌ ನಾಯಕರಿಗೆ ತಿಳಿದಿದೆ ಎಂದು ಹೇಳಿದರು.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಅವರೇ ನಮ್ಮ‌ನಾಯಕರು:
ಪಕ್ಷದ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ‌ ನಾಯಕರು ಸದೃಢರಾಗಿದ್ದಾರೆ, ನಾಯಕತ್ವ ಬದಲಾವಣೆ ಹೇಳಿಕೆಯ ಊಹಾಪೋಹಗಳಿಗೆ ಕಿವಿಗೊಡಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗಷ್ಟೆ ಅಗಲಿದ ಸುರೇಶ್ ಅಂಗಡಿ ಅವರನ್ನು ರಾಜಕೀಯವಾಗಿ ಎಳೆ ತರುವುದು ಸರಿಯಲ್ಲ. ಅವರ ಕುಟುಂಬಸ್ಥರು ಈ ನೋವಿನಿಂದ ಇನ್ನೂ ಹೊರಬಂದಿಲ್ಲ, ಹೀಗಿರುವಾಗ ಅವರ ಹೆಸರನ್ನು ರಾಜಕೀಯವಾಗಿ ಬಳಸಬೇಡಿ. ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು‌ ನೀಡಿದ ಸಚಿವರು, ಉಪಚುನಾವಣೆಯಲ್ಲೂ ನಾವೆ ಗೆಲ್ಲುತ್ತೇವೆ, ಮುಂದಿನ‌ 10 ವರ್ಷ ಕಾಂಗ್ರೆಸ್‌‌ ಪಕ್ಷವನ್ನು ವಿರೋಧ ಪಕ್ಷದಲ್ಲೇ ಕೂರಿಸುತ್ತೇವೆ ಎಂದು ಯಡಿಯೂರಪ್ಪ ಅವರು ದಿಟ್ಟ ಉತ್ತರ ನೀಡಿದ್ದರೂ ನಾಯಕತ್ವ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ನೀಡುವರೆ ಎಂದರು.

Advertisement

ಇದನ್ನೂ ಓದಿ:ಬಿಹಾರ: ಚುನಾವಣೆಗೂ ಮುನ್ನ ಮೈತ್ರಿಪಕ್ಷದಲ್ಲಿ ಒಡಕು, ನಿತೀಶ್ ವಿರುದ್ಧ LJP ಅಭ್ಯರ್ಥಿ?

ಡಿಜಿಟಲ್ ಮೂಲಕ ರಾಜಕೀಯ ಪ್ರಚಾರ:
ಉಪಚುನಾವಣೆಗಿಂತ ಕೊರೋನ ನಿಯಂತ್ರಣ ಅವಶ್ಯವಾದ್ದರಿಂದ ಉಪಚುನಾವಣೆ ಪ್ರಚಾರದ ವೇಳೆ ಎಲ್ಲಾ ಪಕ್ಷಗಳು ಜಾಗೃತಿ ವಹಿಸಿ, ಡಿಜಿಟಲ್‌ ಮೂಲಕ‌ ಪ್ರಚಾರ ನಡೆಸಿದರೆ ಉತ್ತಮ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next