Advertisement

ಬಿಜೆಪಿಯಿಂದ ಮಾತ್ರ ಭ್ರಷ್ಟಾಚಾರ ಮುಕ್ತ ಸರ್ಕಾರ

04:37 PM Feb 26, 2023 | Team Udayavani |

ಚಿಕ್ಕಬಳ್ಳಾಪುರ: ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷವೂ ಭ್ರಷ್ಟಾಚಾರಮುಕ್ತ ಆಡಳಿತವನ್ನು ನೀಡಿದೆ ಮುಂದೆಯೂ ಜನರ ಆಶೀರ್ವಾದ ದಿಂದ ಬಿಜೆಪಿ ಪಕ್ಷವೂ ಪಾರದರ್ಶಕ ಮತ್ತು ಭ್ರಷ್ಟಚಾರ ಮುಕ್ತ ಆಡಳಿತವನ್ನು ಮುಂದುವರಿಸಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್‌ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದ ಸರ್‌ ಎಂ.ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಯೂನಿವರ್ಸಲ್‌ ಕ್ರಿಕೆಟ್‌ ಕ್ಲಬ್‌ನಿಂದ ಆಯೋಜಿಸಿರುವ ಕ್ರಿಕೆಟ್‌ ಪಂದ್ಯಾವಳಿಯನ್ನು ಉದ್ಘಾಟಿಸಿ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಕೇಂದ್ರದಲ್ಲಿ ವಾಜಪೇಯಿ ಬಳಿಕ ಪ್ರಧಾನಿ ಮೋದಿ ಇಡೀ ವಿಶ್ವವೇ ಭಾರತದತ್ತ ಮುಖ ಮಾಡುವಂಥ ಸಾಧನೆಯನ್ನು ಮಾಡಿದ್ದಾರೆ. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಎಲ್ಲಾ ವರ್ಗ ಗಳ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿ ಪರಿಣಾಮಕಾರಿ ಅನುಷ್ಠಾನಗೊಳಿಸಿದೆ ಇದನ್ನು ಸಹಿಸದ ವಿರೋಧಪಕ್ಷಗಳು ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಕಾಲ ಹರಣ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ರಾಜ್ಯ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ವಿರೋಧಪಕ್ಷಗಳು ಆಧಾರ ರಹಿತ ಆರೋಪಗಳು ಮಾಡುವ ಮೂಲಕ ಹಿಟ್‌ ಅಂಡ್‌ ರನ್‌ ನೀತಿಯನ್ನು ಅನುಸರಿಸುತ್ತಿದ್ದಾರೆ. ಭ್ರಷ್ಟಚಾರದ ಬಗ್ಗೆ ಸಾಕ್ಷ್ಯಾಧಾರಗಳನ್ನು ಒದಗಿಸಲು ಅವರಿಗೆ ಸಾಧ್ಯವಾಗಿಲ್ಲ. ಕೇವಲ ಆರೋಪಗಳಿಗೆ ಸೀಮಿತವಾಗಿದ್ದಾರೆ ಎಂದರು.

ಬಿಜೆಪಿ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಅವರ ಹೇಳಿಕೆಯನ್ನು ಟೀಕಿಸಿರುವ ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ಚುನಾವಣೆಗಳನ್ನು ಪ್ರಾಮಾಣಿಕರಾಗಿ ಮಾಡಿದ್ದಾರೆ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಬೇಕಿದೆ. ರಾಜಕೀಯ ವ್ಯವಸ್ಥೆಯ ಬಗ್ಗೆ ಜನರಲ್ಲಿ ಗೌರವ ಹೆಚ್ಚಿಸುವ ಕೆಲಸವನ್ನು ಎಲ್ಲರು ಸೇರಿ ಮಾಡಬೇಕು ತಾವೇ ಪರಿಶುದ್ಧರು ಎಂದು ಬಿಂಬಿಸಿಕೊಳ್ಳುವುದು ಸೂಕ್ತಅಲ್ಲ ಎಂದರು.

2 ಬಾರಿ ಮುಖ್ಯಮಂತ್ರಿ ಯಾಗಿ ಕಾರ್ಯನಿರ್ವಹಿಸಲು ಆಕಾಶಪಡೆದಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಂಚ ರತ್ನ ಯೋಜನೆಗಳು ಯಾಕೆ ಜಾರಿಗೊಳಿಸಲಿಲ್ಲ ಎಂದು ಎಚ್‌ಡಿಕೆಗೆ ಟಾಂಗ್‌ ನೀಡಿದರು.

Advertisement

ಜಿಪಂ ಮಾಜಿ ಅಧ್ಯಕ್ಷ ಪಿ.ಎನ್‌. ಕೇಶವರೆಡ್ಡಿ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಕೆ.ವಿ. ನಾಗರಾಜ್‌, ನಗರಸಭೆಯ ಅಧ್ಯಕ್ಷ ಡಿ.ಎಸ್‌.ಆನಂದ್‌ರೆಡ್ಡಿ(ಬಾಬು), ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ನಗರ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಮಂಚನಬೆಲೆ ಶ್ರೀಧರ್‌, ಸ್ವಾತಿ ಮಂಜುನಾಥ್‌, ಸತೀಶ್‌, ಯತೀಶ್‌, ಕ್ರಿಕೆಟ್‌ ಟೂರ್ನಿಯ ಆಯೋಜಕರಾದ ಶಿವಕುಮಾರ್‌, ಪ್ರಭಾಕರ್‌, ಸುರೇಶ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next