Advertisement

ದಂತ ಪಂಕ್ತಿ ಸೌಲಭ್ಯ ಹೆಚ್ಚಿನ ಜನರು ಪಡೆಯಬೇಕು

04:21 PM Jul 17, 2022 | Team Udayavani |

ಚಾಮರಾಜನಗರ: ರಾಜ್ಯ ಸರ್ಕಾರದ ದಂತ ಭಾಗ್ಯ ಯೋಜನೆಯ ದಂತ ಪಂಕ್ತಿ ಸೌಲಭ್ಯ ವನ್ನು ಜಿಲ್ಲೆಯ ಹೆಚ್ಚಿನ ಜನರು ಪಡೆಯಬೇಕು ಎಂದು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯ ಡೀನ್‌ ಡಾ. ಸಂಜೀವ್‌ ಹೇಳಿದರು.

Advertisement

ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯ ಸಭಾಂಗಣದಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿ, ಎಸ್‌.ಪಿ.ಕೆ ಫಾರ್ಮಾ, ಹಾರ್ಟ್ ಫ‌ುಲ್‌ನೆಸ್‌ ಹಾಗೂ ತಾಲೂಕು ಔಷಧ ವ್ಯಾಪಾರಿ ಗಳ ಸಂಘದ ಸಹಯೋಗದಲ್ಲಿ ನಡೆದ ಉಚಿತ ದಂತ ಪಂಕ್ತಿ ವಿತರಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಜನರು ಆರೋಗ್ಯವಾಗಿರಲು ಪೌಷ್ಟಿಕ ಆಹಾರ ಅಗತ್ಯವಾಗಿದೆ. ಆದರೆ ಹಲ್ಲುಗಳಿಲ್ಲದವರು ಇದರಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಅಂತಹವರಿಗೆ ಅನುಕೂಲ ಮಾಡಿಕೊಡಲು ಸರ್ಕಾರವು 45 ವರ್ಷ ಮೇಲ್ಪಟ್ಟ ಬಿ.ಪಿ.ಎಲ್‌ ವರ್ಗಕ್ಕೆ ಸೇರಿದವರಿಗೆ ದಂತ ಭಾಗ್ಯ ಯೋಜನೆಯಡಿ ದಂತಪಂಕ್ತಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಸೌಲಭ್ಯ ಪಡೆದ ಫ‌ಲಾನುಭವಿಗಳು ಮತ್ತಷ್ಟುಹಲ್ಲಿಲ್ಲದ ಜನರು ಯೋಜನೆ ಪಡೆದುಕೊಳ್ಳಲು ಮಾದರಿಯಾಗಬೇಕು ಎಂದರು.

ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಬೇರೆ ಜಿಲ್ಲೆಗೆ ಹೋಗಬೇಕಾಗಿಲ್ಲ ಬಹುಪಾಲು ಸೌಲಭ್ಯಗಳು ನಮ್ಮ ಜಿಲ್ಲೆಯಲ್ಲೇ ದೊರೆಯುತ್ತಿವೆ. ಈ ನಿಟ್ಟಿನಲ್ಲಿ ದಂತಭಾಗ್ಯ ಯೋಜನೆಯು ಜಿಲ್ಲೆಯಲ್ಲಿ ಒಂದು ಯಶಸ್ವಿ ಮೈಲಿಗಲ್ಲಾಗಲಿದೆ. ಸರ್ಕಾರವು ಸಕಲ ವೈದ್ಯಕೀಯಸೌಲಭ್ಯವನ್ನು ಒದಗಿಸುವಲ್ಲಿ ಮುತುವರ್ಜಿ ವಹಿಸಿದೆ ಎಂದರು.

ರೆಡ್‌ಕ್ರಾಸ್‌ ಸೊಸೈಟಿಯ ಕಾರ್ಯದರ್ಶಿ ಡಾ. ಮಹೇಶ್‌ ಮಾತನಾಡಿ ದಂತಭಾಗ್ಯ ಯೋಜನೆಯು ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು, ಗಿರಿಜನರ ಹಾಡಿಗಳಿಗೆ ತಲುಪಿರುವುದು ಹೆಮ್ಮೆಯ ವಿಷಯವಾಗಿದೆ. ಕೃತಕ ದಂತಪಂಕ್ತಿ ತಯಾರಿಕೆಯಲ್ಲಿ ವಿಭಾಗದ ತಂತ್ರಜ್ಞರೂ ಕೂಡ ಚಟುವಟಿಕೆಯಿಂದ ತೊಡಗಿಸಿಕೊಂಡು ಯೋಜನೆಯ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ ಎಂದರು.

Advertisement

ಜಿಲ್ಲಾ ಸರ್ಜನ್‌ ಎಚ್‌.ಎಸ್‌. ಕೃಷ್ಣಪ್ರಸಾದ್‌ ಮಾತನಾಡಿ, ಆಹಾರ ಸೇವನೆ ಮಾಡಲು ಪ್ರಮುಖವಾಗಿ ಬೇಕಾಗಿರುವುದು ಹಲ್ಲು. ಹಲ್ಲಿನ ಆರೋಗ್ಯದ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯ ಜನತೆಗೆ ದಂತ ಸಮಸ್ಯೆ ನಿವಾರಿಸುವ ಸಲುವಾಗಿ ದಂತಪಂಕ್ತಿ ಲ್ಯಾಬ್‌ ಸದ್ಯದಲ್ಲೇ ಚಾಲನೆ ಆಗಲಿದೆ ಎಂದರು.

ದಂತ ಸೌಲಭ್ಯ ಪಡೆದುಕೊಂಡ ಫ‌ಲಾನುಭವಿ ಪುಟ್ಟಸೋಮಯ್ಯ ಮಾತನಾಡಿ ಬಡತನದಲ್ಲಿರುವವರು ಈ ಸೌಲಭ್ಯವನ್ನು ಖಾಸಗಿ ಆಸ್ಪತ್ರೆಯಲ್ಲಿ ಪಡೆಯಲು ಹೆಚ್ಚು ಹಣ ಖರ್ಚಾಗುತ್ತದೆ. ಸರ್ಕಾರವು ಇದನ್ನು ಉಚಿತವಾಗಿ ನೀಡುತ್ತಿರುವುದು ಬಡವರಿಗೆ ಅನುಕೂಲಕರವಾಗಿದೆ ಎಂದರು.

ಯೋಜನೆಯ ನೋಡಲ್‌ ಅಧಿಕಾರಿ ಡಾ. ಮಿತಾ ಶೆಟ್ಟಿ, ಬೆಂಗಳೂರಿನ ಅರ್‌.ವಿ ದಂತ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ರೋಷನ್‌, ಬಾಯಿ ಆರೋಗ್ಯ ಕಾರ್ಯಕ್ರಮದ ಮೈಸೂರು ವಿಭಾಗದ ನೋಡಲ್‌ ಅಧಿಕಾರಿ ಡಾ. ಸತ್ಯಪ್ರಕಾಶ್‌ ದೋಂಗಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next