Advertisement

ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಆರೋಗ್ಯ ಮುಖ್ಯ

12:24 PM Aug 06, 2018 | |

ವಿಜಯಪುರ: ದೈಹಿಕ, ಮಾನಸಿಕವಾಗಿ ಆರೋಗ್ಯವಾಗಿದ್ದಲ್ಲಿ ಸಮಗ್ರ ವ್ಯಕ್ತಿತ್ವ ವಿಕಸನ ಸಾಧ್ಯ. ಆರೋಗ್ಯದ ಬಗೆಗೆ ಮೂಲಭೂತ ದೃಷ್ಟಿಕೋನಗಳು ಬದಲಾಗಬೇಕಿದೆ ಎಂದು ಅಕ್ಕಮಹಾದೇವಿ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಸಬಿಹಾ ಭೂಮಿಗೌಡ ಹೇಳಿದರು.

Advertisement

ನಗರದ ಬಿಎಲ…ಡಿಇ ಸಂಸ್ಥೆಯ ಎಸ….ಬಿ. ಕಲಾ ಹಾಗೂ ಕೆ.ಸಿ.ಪಿ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ
ಶೈಕÒ‌ಣಿಕ ವರ್ಷದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾನಸಿಕವಾಗಿ ಆರೋಗ್ಯವಂತರಾಗಲು ಯೋಗ, ವ್ಯಾಯಾಮ, ಉತ್ತಮ ಪರಿಸರ ಪಾತ್ರ ಪ್ರಮುಖ ಎಂದರು.

ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಸಮಾಜದ ಓರೆ-ಕೋರೆ ತಿದ್ದುವರೂವಾರಿಗಳು, ನೇತಾರರು ವಿದ್ಯಾರ್ಥಿಗಳು.
ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಮ್ಮ ಪಾತ್ರ ಪ್ರಮುಖ. ಸಮಾಜದ ರಾಜಕೀಯ ವರ್ತಮಾನ ತಿಳಿಸುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖ. ಕ್ರೀಡೆ ಸಾಹಿತ್ಯ ವ್ಯಕ್ತಿತ್ವ ವಿಕಸನವನ್ನು ಗುರುತಿಸುವ ಹೆದ್ದಾರಿಯಾಗಿವೆ. 
ಇಂದಿನ ದಿನಗಳಲ್ಲಿ ಮೊಬೈಲ್‌ ಎಂಬ ಜಾಲವನ್ನು ಆಧುನಿಕ ಅನಿಷ್ಠಗಳನ್ನು ಹರಡಲು ಬಳಸಿಕೊಳ್ಳುತ್ತಿದ್ದಾರೆ ಎಂದು
ವಿಷಾದಿಸಿದರು.

ಅಮೃತಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯ ಡಾ| ಕೆ.ಪೂಜಾರಿ, ಪ್ರೋ| ಜಿ.ಆರ್‌. ಅಂಬಲಿ, ಎಸ್‌.ಬಿ. ಪಾಟೀಲ. ಯು.ಎಸ್‌. ಪೂಜಾರಿ, ಡಾ| ಎಸ….ಟಿ. ಮೇರವಾಡೆ, ವಿದ್ಯಾರ್ಥಿ ಪ್ರತಿನಿಧಿ ಕುಂಚರಾಣಿ ತೇಲಿ, ಜ್ಯೋತಿ ಕೋರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next