Advertisement

ನೆಮ್ಮದಿಯ ಜೀವನಕ್ಕಾಗಿ ಆರೋಗ್ಯ ವಿಮೆ

09:08 PM Jan 26, 2020 | Sriram |

ಹಣದುಬ್ಬರದ ಈ ದಿನಗಳಲ್ಲಿ ವೈದ್ಯಕೀ ಯ ಚಿಕಿತ್ಸೆ ದುಬಾರಿಯಾಗುತ್ತಿದ್ದು, ಜನಸಾ ಮಾನ್ಯರಿಗೆ ಕೈಗೆಟುಕದಂತಾಗಿದೆ. ಸೀಮಿತ ಆದಾಯ ವರ್ಗದ ನಾಗರಿಕರಿಗೆ ಇದರಿಂದ ಸಮಸ್ಯೆಯಾಗುತ್ತಿದೆ.

Advertisement

ಆಸ್ಪತ್ರೆ ಖರ್ಚು ಆ ಕುಟುಂಬದ ಹಣ ಕಾಸಿನ ಪರಿಸ್ಥಿತಿಯನ್ನು ಏರುಪೇರು ಮಾಡಿಬಿಡುತ್ತದೆ. ಹೀಗಾಗಿ 30 ವರ್ಷಕ್ಕೆ ಬರುವಷ್ಟರಲ್ಲಿ ಆರೋಗ್ಯ ವಿಮೆ ಹೊಂದಿದ್ದರೆ ಎಲ್ಲ ರೀತಿಯಲ್ಲೂ ಅನು ಕೂಲ. ಈ ಹಿನ್ನೆಲೆಯಲ್ಲಿ ಆರೋಗ್ಯ ವಿಮೆ ಮಾಡಿಸುವಾಗ ಪಾಲಿಸಬೇಕಾದ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಕಡಿಮೆ ಪ್ರೀಮಿಯಂ
ವಯಸ್ಸು ಚಿಕ್ಕದಿದ್ದು, ವ್ಯಕ್ತಿ ಆರೋಗ್ಯ ವಾಗಿದ್ದಲ್ಲಿ ಕಡಿಮೆ ಪ್ರೀಮಿಯಂಗೆ ಒಳ್ಳೆಯ “ಹೆಲ್ತ್‌ ಇನ್ಶೂರೆನ್ಸ್‌’ ದೊರೆಯುತ್ತದೆ. ವಯಸ್ಸಿಗೆ ಅನುಗುಣವಾಗಿ ಪ್ರೀಮಿ ಯಂ ಜಾಸ್ತಿಯಾಗುತ್ತದೆ. ಆದರೆ ಸಣ್ಣ ವಯಸ್ಸಿನಲ್ಲಿ ವಿಮೆ ಮಾಡಿದ್ದರೆ ಅನು ಕೂಲ ಹೆಚ್ಚು.

ಇನ್ಶೂರೆನ್ಸ್ ನಿರಾಕರಣೆ
ವಯಸ್ಸಾದಂತೆ ಕಾಯಿಲೆಗಳು ಜಾಸ್ತಿ. ಆಗ ವಿಮೆಯ ವ್ಯಾಪ್ತಿಯೂ (ಕವರೇಜ್‌) ಹಿಗ್ಗುತ್ತದೆ. ಕವರೇಜ್‌ ಹೆಚ್ಚಾದಂತೆ ಪ್ರೀಮಿ ಯಂ ಮೊತ್ತ ಕೂಡ ಹೆಚ್ಚುತ್ತದೆ. ಹಲವು ಸಂದರ್ಭ ಇನ್ಶೂರೆನ್ಸ್ ಕಂಪನಿಯು ವಯಸ್ಸಾದ ವ್ಯಕ್ತಿಗಳಿಗೆ ಪಾಲಿಸಿ ನೀಡಲು ನಿರಾಕರಿಸಬಹುದು. ಇಂತಹ ಸನ್ನಿವೇಶ ಎದು ರಾಗದಂತೆ ಸಣ್ಣ ವಯಸ್ಸಿನಲ್ಲೇ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಉತ್ತಮ.

ರಿನೀವಲ್‌ ನಿರಾಕರಣೆ ಸಾಧ್ಯವಿಲ್ಲ
ಸಣ್ಣ ವಯಸ್ಸಿನಲ್ಲೇ ಇನ್ಶೂರೆನ್ಸ್ ಮಾಡಿಸಿಕೊಂಡು ಪ್ರತಿ ವರ್ಷ ಅದನ್ನು ರಿನೀವಲ್‌ ಮಾಡಿಸುತ್ತಿರ ಬೇಕು. ವಯ ಸ್ಸಾದ ಸಂದರ್ಭ ಆ ವಿಮೆ ರಿನೀವಲ್‌ ಅನ್ನು ಕಂಪನಿ ನಿರಾಕರಿ ಸುವಂತಿಲ್ಲ.

Advertisement

ವೈಯಕ್ತಿಕ ಇನ್ಶೂರೆನ್ಸ್ ಇರಲಿ
ಇತ್ತೀಚೆಗೆ ಬಹುತೇಕ ಕಂಪೆನಿಗಳು ಹೆಲ್ತ್‌ ಇನ್ಶೂರೆನ್ಸ್ ಪಾಲಿಸಿಯನ್ನು ಕುಟುಂಬದವರಿಗೂ ವಿಸ್ತರಿಸಿವೆ. ಆದರೆ ಆ ಕವರೇಜ್‌ ಮೊತ್ತ ಸಾಕಾಗುವುದಿಲ್ಲ. ಹೆಚ್ಚುವರಿಯಾಗಿ ವೈಯಕ್ತಿಕ ಹೆಲ್ತ್‌ ಇನ್ಶೂರೆನ್ಸ್ ಪಾಲಿಸಿ ಮಾಡಿಸಿಕೊಳ್ಳುವುದು ಉತ್ತಮ. ಕೆಲಸಕ್ಕಾಗಿ ಒಂದೆರಡು ವರ್ಷಕ್ಕೆ ಒಂದು ಕಂಪೆನಿಯಿಂದ ಮತ್ತೂಂದು ಕಂಪೆನಿ ಬದಲಾಯಿಸುವುದು ಸಾಮಾನ್ಯ. ಇಂತಹ ಸಂದರ್ಭ ವೈಯಕ್ತಿಕ ಹೆಲ್ತ್‌ ಇನ್ಶೂರೆನ್ಸ್ ಅಗತ್ಯ.

ಹೆಚ್ಚುತ್ತಿರುವ ಕಾಯಿಲೆ
ಯಾಂತ್ರಿಕ ಜೀವನಶೈಲಿಯಿಂದಾಗಿ ಸಣ್ಣ ವಯಸ್ಸಿನಲ್ಲೇ ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಾಣಿಸಿ ಕೊಳ್ಳುತ್ತವೆ. ಹೀಗಾಗಿ ಹೆಲ್ತ್‌ ಇನ್ಶೂರೆನ್ಸ್ ಅತ್ಯಗತ್ಯ.

ಆರ್ಥಿಕ ಯೋಜನೆ ಅಗತ್ಯ
ಮನೆಯಲ್ಲಿ ಯಾರಿಗಾದರೂ ಅನಾ ರೋಗ್ಯ ಉಂಟಾದರೆ ಆ ಮನೆಯ ಆರ್ಥಿಕ ಆರೋಗ್ಯವೂ ಹದಗೆ ಡುತ್ತದೆ. ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ರಬೇಕು, ಬೇರೆ ಬೇರೆ ಕಡೆ ನಿಶ್ಚಿತತೆಯಿಂದ ಹಣ ಹೂಡಿಕೆ ಮಾಡಬೇಕು ಎಂಬ ಕನಸು ಕೈಗೂಡಲು ಹೆಲ್ತ್‌ ಇನ್ಶೂರೆನ್ಸ್ ಬೇಕೇಬೇಕು.

ಅಗತ್ಯ ಇರುತ್ತದೆ
ಹೆಲ್ತ್‌ ಇನ್ಶೂರೆನ್ಸ್ ನಿಮಗೆ ಸಣ್ಣ ವಯಸ್ಸಿನಲ್ಲೇ ಅಗತ್ಯವಿರದೇ ಇರಬಹುದು. ಆದರೆ, ಸಣ್ಣ ವಯಸ್ಸಿನಲ್ಲೇ ಇನ್ಶೂರೆನ್ಸ್ ಪಡೆದಾಗ ವೇಯಿrಂಗ್‌ ಪಿರಿಯಡ್‌ ಸೇರಿದಂತೆ ಇತರೆ ನಿಬಂಧನೆಗಳನ್ನು ನೀವು ಬೇಗ ಪೂರೈಸುತ್ತೀರಿ. ಹೀಗಾಗಿ ವಯಸ್ಸಾದ ಕಾಲದಲ್ಲಿ ನಿಮಗೆ ಅಡೆತಡೆಯಿಲ್ಲದೇ ವೈದ್ಯಕೀಯ ಸೇವೆ ದೊರೆಯುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next