Advertisement
ಕೊರೊನಾಕ್ಕೂ ಮೊದಲು ದೇಶದಲ್ಲಿ ಸಾಂಕ್ರಾಮಿಕ ರೋಗಗಳ ಪರೀಕ್ಷೆಗೆ ಇದ್ದದ್ದು ಒಂದೇ ಪ್ರಯೋಗಾಲಯ. ಇದೀಗ ದೇಶದಲ್ಲಿ ಪ್ರಯೋಗಾಲಯಗಳ ಸಂಖ್ಯೆ ಸುಮಾರು 2,500 ಆಗಿದೆ. ಕೊರೊನಾ ಸೋಂಕು ಆವರಿಸುವ ಮುನ್ನವೂ ದೇಶದ ಆಸ್ಪತ್ರೆಗಳ ಶಸ್ತ್ರಚಿಕಿತ್ಸೆ ವೇಳೆ ಪಿಪಿಇ ಕಿಟ್ ಧರಿಸಲಾ ಗುತ್ತಿತ್ತು. ಆದರೆ ದೇಶದಲ್ಲಿ ಒಂದೇ ಒಂದು ಪಿಪಿಇ ಕಿಟ್ ಉತ್ಪಾದನೆ ಆಗುತ್ತಿರಲಿಲ್ಲ ಎಂದರೆ ನಂಬಲೇಬೇಕು. ಆದರೆ ಕೊರೊ ನಾ ಸೋಂಕು ತಡೆಯಲು ಮುಖ್ಯವಾಗಿ ಆರೋಗ್ಯ ಸಿಬ್ಬಂದಿಗೆ ಅತ್ಯವಶ್ಯಕವಾದ ಪಿಪಿಇ ಕಿಟ್ ತಯಾರಿಗೆ ಕೇಂದ್ರ ಸರಕಾರ ಕರೆ ನೀಡಿದ್ದೇ ತಡ ದೇಶಾದ್ಯಂತ ಉದ್ದಿಮೆದಾರರು ಓಗೊಟ್ಟರು. ಇದೀಗ 600ಕ್ಕೂ ಹೆಚ್ಚು ದೇಶಿ ಕಂಪೆನಿಗಳು ಪ್ರತಿನಿತ್ಯ 5 ಲಕ್ಷ ಪಿಪಿಇ ಕಿಟ್ ಉತ್ಪಾದನೆ ಮಾಡು ತ್ತಿವೆ.ಈಗ ಭಾರತ ವಿಶ್ವದಲ್ಲೇ 2ನೇ ಅತಿದೊಡ್ಡ ಪಿಪಿಇ ಕಿಟ್ ಉತ್ಪಾದಕ ದೇಶ. ದೇಶದಲ್ಲಿ ಒಂದೂ ರೆಮಿಡಿಸಿವಿರ್ ಉತ್ಪಾದನೆ ಆಗುತ್ತಿರಲಿಲ್ಲ, ಈಗ ಪ್ರತಿನಿತ್ಯ 2.06 ಲಕ್ಷ ವಯಲ್ ಉತ್ಪಾದನೆ ಆಗುತ್ತಿದೆ.
Related Articles
Advertisement
ಲಸಿಕೆ ರಾಜಕೀಯ: ಈ ಹಿಂದೆ ಅನೇಕ ಸೋಂಕು ಬಂದಾಗ ಭಾರತಕ್ಕೆ ಲಸಿಕೆ ಲಭಿಸಿದ್ದು ತಡವಾಗಿ. ರೋಟಾ ವೈರಸ್‌ಗೆ ವಿಶ್ವದಲ್ಲಿ 1998ರಲ್ಲಿ ಲಸಿಕೆ ಲಭಿಸಿತು, ಭಾರತೀಯರಿಗೆ ಈ ಲಸಿಕೆ ಸಿಕ್ಕಿದ್ದು 2005ರಲ್ಲಿ. ಜಪಾ ನೀಸ್ ಎನ್ಸೆಫೆಲೈಟಿಸ್‌ಗೆ ವಿಶ್ವದಲ್ಲಿ 1930ರಲ್ಲೇ ಲಸಿಕೆ ಸಿಕ್ಕಿದ್ದರೂ ಭಾರತ ದಲ್ಲಿ ಲಭಿಸಿದ್ದು 2013ರಲ್ಲಿ. ಪೋಲಿ ಯೋಗೆ ವಿಶ್ವದಲ್ಲೇ 1955ರಲ್ಲೇ ಲಸಿಕೆ ಸಿಕ್ಕರೂ ಭಾರತದಲ್ಲಿ ಕೈಗೆಟುಕಿದ್ದು 1978ರಲ್ಲಿ. ಟೆಟಾನಸ್‌ಗೆ ವಿಶ್ವದಲ್ಲಿ 1928ರಲ್ಲಿ ಲಸಿಕೆ ಸಿಕ್ಕರೆ ಭಾರತದಲ್ಲಿ 1978ರಲ್ಲಿ ಸಿಕ್ಕಿತು. ಆದರೆ ಈ ಎಲ್ಲ ಹಿನ್ನಡೆಯನ್ನು ಕೋವಿಡ್ ವಿಚಾರದಲ್ಲಿ ಭಾರತ ಸರಿ ಪಡಿಸಿದೆ. ಇಷ್ಟೆಲ್ಲ ಇದ್ದರೂ ಪ್ರತಿಪಕ್ಷಗಳು ಎನ್ನಿಸಿಕೊಂಡವರು ನಡೆದು ಕೊಂಡ ಬಗೆ ಹೇಗಿತ್ತು?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ರ ಬಜೆಟ್‌ನಲ್ಲಿ ಕೋವಿಡ್ ಲಸಿಕೆಗೆ 35 ಸಾವಿರ ಕೋಟಿ ರೂ. ಮೀಸಲಿಟ್ಟರು. ಏಕೆಂದರೆ ಲಸಿಕೆಯೊಂದೇ ಭಾರತೀಯರನ್ನು ರಕ್ಷಿಸಬಹುದು ಎಂದು ಸರಕಾರಕ್ಕೆ ತಿಳಿದಿತ್ತು. ಪ್ರಪಂಚದ ಎಲ್ಲ ವಿಚಾರವೂ ಗೊತ್ತು ಎಂದು ಬೀಗುವ ವಕೀಲ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದು ಏನು? ಕೊರೊ ನಾ ಸೋಂಕು ತನ್ನಿಂತಾನೇ ಸಾಯುತ್ತಿರುವ ಸಂದರ್ಭದಲ್ಲಿ, ಪರೀಕ್ಷೆ ನಡೆಯದ ವ್ಯಾಕ್ಸಿನ್‌ಗಾಗಿ ಖಾಸಗಿ ವ್ಯಾಖೀÕನ್ ಕಂಪೆನಿಗಳಿಗೆ 35 ಸಾವಿರ ಕೋಟಿ ರೂ. ಘೋಷಣೆ ಮಾಡಿ¨ªಾರೆ. ಈ ಹಣವನ್ನು, ಕೆಲಸ ಕಳೆದುಕೊಂಡ ಬಡ ಕಾರ್ಮಿಕರಿಗೆ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯಾಗಿ ನೀಡಲಾಗುತ್ತಿರಲಿಲ್ಲವೇ ಎಂದು ಹೇಳಿದ್ದರು. ಕಾಂಗ್ರೆಸ್‌ನ ರಾಹುಲ್ ಗಾಂಧಿ, ಲಸಿಕೆ ಅಭಿವೃಧಿªಪಡಿಸಿದ ವಿಜ್ಞಾನಿಗಳಿಗೆ ಹಾಗೂ ಸಂಸ್ಥೆಗೆ ಒಮ್ಮೆಯೂ ಅಭಿನಂದಿಸಲಿಲ್ಲ. ಬದಲಿಗೆ, ಅದರಲ್ಲಿ ಸರಕಾರದ ಹೆಸರೇಕಿಲ್ಲ? ಎಂಬ ಅತ್ಯಂತ ಅನವಶ್ಯಕ ಪ್ರಶ್ನೆ ಎತ್ತಿದರು. ಕಾಂಗ್ರೆಸ್ ಸಂಸದ ಶಶಿ ತರೂರ್, ಇನ್ನೂ ಯಶಸ್ವಿ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸದ ಕೋವ್ಯಾ ಕ್ಸಿನ್ ಬಳಕೆಗೆ ಒಪ್ಪಿಗೆ ನೀಡಿದ್ದು ಅಪಾಯಕಾರಿ ಎಂದರು. ಅನಂತರ ಇದೇ ಶಶಿ ತರೂರ್, ದೇಶದ ನಾರಿಕರಿಗೆ ಸಾಕಷ್ಟು ಲಸಿಕೆಯನ್ನು ಈ ಸರಕಾರ ನೀಡುತ್ತಿಲ್ಲ ಎಂದರು. ಪ್ರಾರಂಭದಲ್ಲಿ ತೆಗಳಿದವರೇ ಇಂದು ಸರತಿ ಯಲ್ಲಿ ನಿಂತು ಲಸಿಕೆ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶ ದಂತಹ ದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅಖೀಲೇಶ್ ಯಾದವ್, ಕೊವ್ಯಾಕ್ಸಿನನ್ನು ಬಿಜೆಪಿ ವ್ಯಾಕ್ಸಿನ್ ಎಂದರು.
ಇನ್ನು, ಕಳೆದ 70 ವರ್ಷದಲ್ಲಿ ದೇಶದ ಆರೋಗ್ಯ ವ್ಯವಸ್ಥೆಗೆ ಸರಕಾರಗಳು ನೀಡಿದ ಕೊಡುಗೆ ಬಗ್ಗೆ ಏಪ್ರಿಲ್ 30ರಂದು ಸುಪ್ರೀಂಕೋರ್ಟ್ ಮಾತೇ ಉದಾಹರಣೆ. ಕಳೆದ 70 ವರ್ಷದಲ್ಲಿ ನಮಗೆ ಲಭಿಸಿದ ಆರೋಗ್ಯ ಮೂಲಸೌಕರ್ಯ, ಈಗಿನ ಸಂದರ್ಭವನ್ನು ಎದುರಿಸಲು ಸಾಲುತ್ತಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ದೇಶದಲ್ಲಿ ಆರೋಗ್ಯ ಮೂಲಸೌಕರ್ಯಕ್ಕೆ ಯಾವ್ಯಾವ ಸರಕಾರಗಳು ಏನೇನು ಮಾಡಿವೆ ಎನ್ನುವುದನ್ನು ಒಂದು ಉದಾಹರಣೆ ಮೂಲಕ ನೋಡೋಣ. 1952ರಲ್ಲಿ ದೆಹಲಿಯಲ್ಲಿ ಒಂದು ಏಮ್ಸ್ (ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಮಾಡಲಾಯಿತು, ಅದು ಜವಾರಲಾಲ್ ನೆಹರೂ ಪ್ರಧಾನಿಯಾಗಿದ್ದ ಸಮಯ. ಅನಂತರ 2003ರವರೆಗೆ ಅಂದರೆ 51 ವರ್ಷದಲ್ಲಿ ದೇಶದಲ್ಲಿ ಇನ್ನೊಂದು ಏಮ್ಸ್ ಮಾಡಲು ಆಗಲಿಲ್ಲ. 2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರದ ಅವಧಿಯಲ್ಲಿ ಭೋಪಾಲ್, ಭುವನೇಶ್ವರ, ಜೋಧಪುರ, ಪಟನಾ, ರಾಯು³ರ ಹಾಗೂ ಹೃಷಿಕೇಶದಲ್ಲಿ ಏಮ್ಸ್‌ಗೆ ಅನುಮತಿ ನೀಡಲಾಯಿತು. 2014ರವರೆಗೆ ಸತತ ಎರಡು ಅವಧಿಗೆ ಅಂದರೆ 10 ವರ್ಷ ದೇಶದ ಪ್ರಧಾನಿ ಯಾಗಿದ್ದ ಮನಮೋಹನ ಸಿಂಗ್ ಅಧಿಕಾರಾವಧಿಯಲ್ಲಿ, ಅಂದರೆ ಪರೋಕ್ಷವಾಗಿ ಸೋನಿಯಾ ಗಾಂಧಿಯವರ ಆಡಳಿತದಲ್ಲಿ ಸ್ಥಾಪನೆಯಾಗಿದ್ದು ಒಂದೇ ಏಮ್ಸ್. 2009ರಲ್ಲಿ ಏಮ್ಸ್ ಸ್ಥಾಪನೆಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿತು, ಅದೂ ಸಹ ಸೋನಿಯಾಗಾಂಧಿಯವರ ಲೋಕಸಭಾ ಕ್ಷೇತ್ರ ರಾಯ್‌ಬರೇಲಿಯಲ್ಲಿ. ಅನಂತರ 2014ರಲ್ಲಿ ಪ್ರಧಾನಿ ಮೋದಿಯವರ ನೇತೃತ್ವದ ಸರಕಾರ ಬಂದ ಅನಂತರ ದೇಶ ದಲ್ಲಿ ಏಮ್ಸ್ ಶಕೆ ಆರಂಭವಾಯಿತು. ಕೇವಲ ಏಳು ವರ್ಷ ದಲ್ಲಿ 14 ಏಮ್ಸ್ ಸ್ಥಾಪನೆಗೆ ಮುಂದಡಿ ಇಡಲಾಗಿದೆ.ವಾಜಪೇಯಿ ಆಡಳಿತದಲ್ಲಿ ಮಂಜೂರಾಗಿದ್ದ ಅನೇಕ ಏಮ್ಸ್‌ಗಳು ಹಂತಹಂತವಾಗಿ ಅಭಿವೃದ್ಧಿಯಾಗಿ ಯುಪಿಎ ಅವಧಿಯಲ್ಲಿ ಕಾರ್ಯ ಆರಂಭಿಸಿದವು. ಆದರೆ ಕಾಂಗ್ರೆಸ್ ಮಂಜೂರು ಮಾಡಿದ್ದ ಏಕೈಕ ಏಮ್ಸ್ ಕೆಲಸ ಆರಂಭಿಸಿದ್ದು 2018ರಲ್ಲಿ ಮೋದಿ ಆಡಳಿತ ಬಂದ ನಂತರವೇ.
– ಡಾ|ಎಂ.ಆರ್.ವೆಂಕಟೇಶ್, ಬಿಎಂಟಿಸಿ ಉಪಾಧ್ಯಕ್ಷರು