Advertisement

ಆರೋಗ್ಯ ನಿಧಿ 15 ಲಕ್ಷ ರೂ.ಗೇರಿಸಲು ಆಗ್ರಹ

05:11 PM May 02, 2022 | Team Udayavani |

ಯಾದಗಿರಿ: ಆರೋಗ್ಯ ನಿಧಿಯಡಿ ಪತ್ರಕರ್ತರಿಗೆ ಅನುದಾನ ಹೆಚ್ಚಿಗೆ ಮೀಸಲಿಡುವಂತೆ ಆಗ್ರಹಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ಮತ್ತು ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

Advertisement

ಕಳೆದ ವರ್ಷ 5 ಲಕ್ಷ ರೂ. ಅನುದಾನ ಮೀಸಲು ಇಡಲಾಗಿತ್ತು. ಇದನ್ನು ಅರ್ಹ ಪತ್ರಕರ್ತರು ಸದ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಮುಂಬರುವ ಬಜೆಟ್‌ನಲ್ಲಿ 15 ಲಕ್ಷ ರೂ. ಅನುದಾನ ನೀಡುವ ಮೂಲಕ ಅನುಕೂಲ ಮಾಡಿಕೊಡುವಂತೆ ಅಧ್ಯಕ್ಷರಿಗೆ ಮನವರಿಕೆ ಮಾಡಿ ಕೊಡಲಾಯಿತು. ನಿತ್ಯ ಪತ್ರಕರ್ತರು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಹಲವಾರು ರೀತಿಯಲ್ಲಿ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಸೂಕ್ತವಾದ ಚಿಕಿತ್ಸೆ ಪಡೆದುಕೊಳ್ಳಲು ಆರ್ಥಿಕ ನೆರವು ನೀಡುವುದು ಅಗತ್ಯವಿದೆ. ಹೀಗಾಗಿಯೇ ನಗರಸಭೆಯಿಂದ ಹೆಚ್ಚಿಗೆ ಆರ್ಥಿಕ ನೆರವು ನೀಡಿದರೆ ಪ್ರಯೋಜನ ವಾಗುತ್ತದೆ ಎಂದು ತಿಳಿಸಲಾಯಿತು.

ಜಿಲ್ಲಾ ಕೇಂದ್ರದ ವರದಿಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಳೆದ ವರ್ಷ ನಿಗದಿ ಮಾಡಿದ ಬಜೆಟ್‌ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಲಾಗಿದೆ. ನಗರಸಭೆ ಯಿಂದ ನೀಡಿದ ಅನುದಾನದಿಂದಾಗಿ ಸಾಕಷ್ಟು ಅನುಕೂಲವಾಗಿದೆ. ಅದನ್ನು ಈ ವರ್ಷವೂ ಮುಂದುವರೆಯಿಸುವ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಲಾಯಿತು.

ಜಿಲ್ಲೆಯಲ್ಲಿ ಸಾಕಷ್ಟು ಪತ್ರಕರ್ತರು ಇದ್ದಾರೆ. ಕೆಲವರಿಗೆ ಆರ್ಥಿಕ ಸಮಸ್ಯೆ ಕೂಡ ಇದೆ. ಇಂತಹ ಸಮಯದಲ್ಲಿ ಆರೋಗ್ಯ ಕೈಕೊಟ್ಟರೆ ಸಮರ್ಪಕವಾದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯಲು ಆಗುವುದಿಲ್ಲ. ಕೊರೊನಾ ಆವರಿಸಿಕೊಂಡು ಬಹುತೇಕ ಪತ್ರಕರ್ತರು ತೊಂದರೆಯಲ್ಲಿ ಇದ್ದಾರೆ. ಹೀಗಾಗಿಯೇ ನಗರಸಭೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಮನವಿ ಆಲಿಸಿದ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ಮತ್ತು ಪೌರಾಯುಕ್ತ ಶರಣಪ್ಪ, ಬಜೆಟ್‌ನಲ್ಲಿ ಸೂಕ್ತ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

Advertisement

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್‌, ಪ್ರಧಾನ ಕಾರ್ಯದರ್ಶಿ ದಿನೇಶ ವಿ.ಸಿ., ಉಪಾಧ್ಯಕ್ಷ ರಾಜು ನಲ್ಲಿಕರ್‌, ಖಜಾಂಚಿ ಕುಮಾರಸ್ವಾಮಿ ಕಲಾಲ್‌, ಕಾರ್ಯದರ್ಶಿ ಸಾಜೀದ್‌, ಲಕ್ಷ್ಮೀಕಾಂತ ಕುಲಕರ್ಣಿ, ಪ್ರವೀಣಕುಮಾರ, ಸಿದ್ದಪ್ಪ ಲಿಂಗೇರಿ, ನಾಗಪ್ಪ ಮಾಲಿಪಾಟೀಲ್‌, ಅಮೀನ್‌ ಹೊಸೂರು, ಪರಶುರಾಮ, ಈರಯ್ಯ, ಬೀರಲಿಂಗಪ್ಪ ಕಿಲ್ಲನಕೇರಾ, ಶರಬು ನಾಟೇಕರ್‌ ಸೇರಿದಂತೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next