Advertisement

ಚೆಂದುಳ್ಳಿಗೆ ಈರುಳ್ಳಿ

02:22 PM Jan 10, 2018 | |

“ಈರುಳ್ಳಿ ಬಜ್ಜಿ, ಬೋಂಡ, ಪಕೋಡ ಓಕೆ, ಆದ್ರೆ ಹಸಿ ಈರುಳ್ಳಿ ಬೇಡಪ್ಪಾ’ ಅಂತ ದೂರ ಓಡದಿರಿ. ಯಾಕೆ ಗೊತ್ತಾ, ಈರುಳ್ಳಿ ಬರೀ ಕಣ್ಣೀರು ತರಿಸಲ್ಲ, ಮುಖದಲ್ಲಿ ನಗುವನ್ನೂ ತರುತ್ತೆ. ಈರುಳ್ಳಿಯ ಪ್ರಯೋಜನಗಳೂ ಅನೇಕ. ಈರುಳ್ಳಿ ಮಹಾತ್ಮೆ ಏನಂತ ಇಲ್ಲಿದೆ ನೋಡಿ…

Advertisement

1. ಕಾಂತಿಯುತ ಚರ್ಮ
ಈರುಳ್ಳಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್‌, ಸಲರ್‌ ಮತ್ತು ವಿಟಮಿನ್ಸ್‌ಗಳು ಚರ್ಮಕ್ಕೆ ಒಳ್ಳೆಯದು. ಈರುಳ್ಳಿ ರಸವನ್ನು ಲೇಪಿಸುವುದರಿಂದ ಚರ್ಮದ ಕಾಂತಿ ಹೆಚ್ಚುತದೆ. ರಕ್ತದ ಕಲ್ಮಶಗಳನ್ನು ಶುದ್ಧೀಕರಿಸುವುದರಿಂದ ಚರ್ಮದ ಸಮಸ್ಯೆಗಳು ದೂರಾಗುತ್ತವೆ.

2. ಚರ್ಮದ ಸುಕ್ಕು ನಿವಾರಣೆ
30-40 ವರ್ಷಕ್ಕೆಲ್ಲಾ ಕೆಲವರ ಚರ್ಮ ಕಾಂತಿ ಕಳೆದುಕೊಂಡು, ಸುಕ್ಕು ಸುಕ್ಕಾಗುತ್ತದೆ. ಈರುಳ್ಳಿಯಲ್ಲಿನ ಆ್ಯಂಟಿಆಕ್ಸಿಡೆಂಟ್ಸ್‌ ಅಂಶ ಚರ್ಮ ನೆರಿಗೆ ಬೀಳುವುದನ್ನು ತಡೆಯುತ್ತದೆ. ಈರುಳ್ಳಿಯಲ್ಲಿರುವ ಎ, ಸಿ, ಇ ವಿಟಮಿನ್‌ ಕೂಡ ಚರ್ಮಕ್ಕೆ ಒಳ್ಳೆಯದು. 

4. ಬಿಳುಪಿನ ತ್ವಚೆಗೆ 
ಈರುಳ್ಳಿ ರಸಕ್ಕೆ, ಅರಿಶಿನ ಸೇರಿಸಿ ಹಚ್ಚಿದರೆ ಚರ್ಮದ ಕಲೆ, ಪ್ಯಾಚ್‌ ಮತ್ತು ಡಾರ್ಕ್‌ ಪಿಗ¾ಂಟೇಶನ್‌ಗಳು ನಿವಾರಣೆಯಾಗಿ, ಚರ್ಮಕ್ಕೆ ಬಿಳುಪು ಸಿಗುತ್ತದೆ. ಸೂಕ್ಷ್ಮ ಚರ್ಮದವರು ಈರುಳ್ಳಿ ರಸದ ಜೊತೆಗೆ ಕಡಲೆಹಿಟ್ಟು, ಕೆನೆ ಸೇರಿಸಿ ಹಚ್ಚಿ. 

3. ಮೊಡವೆ ಕಲೆ ನಿವಾರಣೆ
ಮೊಡವೆ, ಸುಟ್ಟಗಾಯದ ಕಲೆ ಮತ್ತು ಚರ್ಮದ ಅಲರ್ಜಿಗಳಿಗೆ ಈರುಳ್ಳಿ ರಸ ರಾಮಬಾಣ. ಈರುಳ್ಳಿ ರಸದ ಜೊತೆಗೆ ಆಲಿವ್‌ ಅಥವಾ ಆಲ್ಮಂಡ್‌ ಎಣ್ಣೆ ಸೇರಿಸಿ ಫೇಸ್‌ಪ್ಯಾಕ್‌ನಂತೆ ಮುಖಕ್ಕೆ ಹಚ್ಚಿ. 

Advertisement

4. ಸೊಂಪಾದ ಕೂದಲಿಗೆ
 ಈರುಳ್ಳಿಯಲ್ಲಿನ ಸಲರ್‌ ಅಂಶ, ತಲೆಗೆ ರಕ್ತ ಸಂಚಲನೆ ಸರಾಗವಾಗಿಸುತ್ತದೆ. ಅದರಿಂದ, ಉದುರಿದ ಕೂದಲು ಮರು ಹುಟ್ಟು ಪಡೆಯುತ್ತದೆ. ಈರುಳ್ಳಿ ರಸದ ಜೊತೆಗೆ ರೋಸ್‌ ವಾಟರ್‌ ಸೇರಿಸಿ ಮಸಾಜ್‌ ಮಾಡಿ ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ.  

5. ತಲೆಹೊಟ್ಟು ನಿವಾರಣೆ
ತಲೆಹೊಟ್ಟಿನ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುತ್ತಿರುವವರು ಅನೇಕ. ಅವರು ಮಾಡಬೇಕಾದ್ದಿಷ್ಟೆ, ಕೂದಲಿನ ಬುಡಕ್ಕೆ ಈರುಳ್ಳಿ ರಸ ಹಚ್ಚಿ, ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. 

6. ಕೂದಲ ನೆರೆ ತಡೆಯಲು
ಕಲುಷಿತ ನೀರು, ಪೌಷ್ಟಿಕಾಂಶ ಕೊರತೆ ಹೀಗೆ ಬೇರೆ ಬೇರೆ ಕಾರಣಗಳಿಂದ ಕೂದಲು ಬೇಗ ಬಿಳಿಯಾಗುತ್ತದೆ. ಆಗ ಕೃತಕ ಬಣ್ಣ ಹಚ್ಚುವುದರ ಬದಲು, ಈರುಳ್ಳಿ ರಸಕ್ಕೆ ಸಾಸಿವೆ ಎಣ್ಣೆ ಸೇರಿಸಿ ಹಚ್ಚಿ. ಕೂದಲಿಗೆ ನೈಸರ್ಗಿಕ ಶೈನ್‌ ಕೂಡ ಸಿಗುತ್ತದೆ. 

7. ತುಟಿಯ ಆರೋಗ್ಯ
ಕಪ್ಪಾದ ತುಟಿಗೆ ನೈಜ ಬಣ್ಣ ಸಿಗಲು, ಒಡೆದ ತುಟಿ ಗುಣವಾಗಲು ಈರುಳ್ಳಿ ಸಹಕಾರಿ. ಈರುಳ್ಳಿ ರಸದ ಜೊತೆಗೆ ವಿಟಮಿನ್‌ “ಇ” ಎಣ್ಣೆ ಸೇರಿಸಿ ದಿನಾ ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಹಚ್ಚಿ. 

8.ಕಣ್ಣಿನ ಆರೋಗ್ಯಕ್ಕೆ
ಎ, ಸಿ, ಇ ವಿಟಮಿನ್‌ ಅಧಿಕವಾಗಿರುವ ಈರುಳ್ಳಿ ಕಣ್ಣಿನ ಆರೋಗ್ಯಕ್ಕೆ  ಒಳ್ಳೆಯದು. ಈರುಳ್ಳಿಯಲ್ಲಿನ ಸಲ#ರ್‌ ಅಂಶ ಕೂಡ, ಕಣ್ಣನ್ನು ಹಲವಾರು ಸಮಸ್ಯೆಗಳಿಂದ ರಕ್ಷಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next