ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಲಸಿಕೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಮೊದಲ ಹಂತದಲ್ಲಿ 13 ಸಾವಿರ ಕೋವಿಡ್ ವಾರಿಯರ್ಸ್‌ಗಳಿಗೆ ಲಸಿಕೆಯ ಪ್ರಥಮ ಆದ್ಯತೆಯ ಮೇಲೆ ನೀಡಲು ಪಟ್ಟಿ ಸಿದ್ಧವಾಗಿದೆ. ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಇಲಾಖೆ, ವೈದ್ಯಕೀಯ ಶಿಕ್ಷಣ, ಖಾಸಗಿ ಆಸ್ಪತ್ರೆ,ಆರೋಗ್ಯ ಶಿಕ್ಷಣಸಂಸ್ಥೆಗಳಾದ ನರ್ಸಿಂಗ್,ಪ್ಯಾರಾ ಮೆಡಿಕಲ್‌ವಿದ್ಯಾರ್ಥಿಗಳಮಾಹಿತಿಯನ್ನು ಸಂಗ್ರಹಿಸಲಾಗಿದೆ.
ಜಿಲ್ಲೆಯಲ್ಲಿ 161 ಸರ್ಕಾರಿ ಹಾಗೂ 438 ಖಾಸಗಿ ವೈದ್ಯಕೀಯ ಸಂಸ್ಥೆಗಳಿದ್ದು, ಅಲ್ಲಿನವೈದ್ಯರು, ಶುಶ್ರೂಷಕರು, ಸಿಬ್ಬಂದಿಗಳು, ಆಶಾ, ಅಂಗನವಾಡಿಕಾರ್ಯಕರ್ತೆಯರಜತೆಗೆಖಾಸಗಿ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿಗಳು ಹಾಗೂ ಸೋಂಕಿತರ ಪತ್ತೆ, ಚಿಕಿತ್ಸೆ ನೀಡುತ್ತಿರುವ ಹಾಗೂ ಕೋವಿಡ್-19ನಿಂದ ಕ್ಲಿಷ್ಟಕರ ಸಂದರ್ಭ ಎದುರಿಸುತ್ತಿರುವವರು ಪಟ್ಟಿಯಲ್ಲಿದ್ದಾರೆ.
1.60 ಲಕ್ಷ ಲಸಿಕೆ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್ ಘಟಕ: ಜಿಲ್ಲೆಗೆ ಬರಲಿರುವ ಕೋವಿಡ್ ಲಸಿಕೆ ಸಂಗ್ರಹಕ್ಕಾಗಿ ಕೋಲ್ಡ್ ಸ್ಟೋರೇಜ್ ಘಟಕವನ್ನುಸಜ್ಜುಗೊಳಿಸಿದೆ. ಡಿವಿಎಸ್ (ಜಿಲ್ಲಾ ವಾಕ್ಸಿನ್ ಸ್ಟೋರೇಜ್) ಇದ್ದು, ಇಲ್ಲಿ ನಾಲ್ಕು ಐಎಲ್‌ಆರ್ (ಐಸ್ ಲೈನ್x ರೆಫ್ರಿಜರೇಟರ್) ಇದೆ. ಇದರಲ್ಲಿ ಸುಮಾರು 1.60 ಲಕ್ಷ ಲಸಿಕೆಗಳನ್ನು ಸಂಗ್ರಹಿಸುವ ಸಾಮರ್ಥ್ಯವಿದೆ.ಇದರ ಜತೆಗೆ ಡೀಪ್ ಫ್ರೀಜರ್ ಹಾಗೂ ಐಸ್ ಪ್ಯಾಕ್‌ಗಳನ್ನು ಮಾಡಬಹುದಾಗಿದೆ. ಸರ್ಕಾರಿ ಸಂಸ್ಥೆಗಳಲ್ಲಿ 120 ಕೋಲ್ಡ್ ಚೈನ್‌ಪಾಯಿಂಟ್‌ಗಳು (ಸಿಸಿಪಿ) ಸಿದ್ಧವಿದ್ದು, ಇಲ್ಲೂ ಲಸಿಕೆಗಳನ್ನು ಸಂಗ್ರಹಿಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ. ಜತೆಗೆ, ಹೊಸದಾಗಿ 57 ಐಎಲ್‌ಆರ್ ಹಾಗೂ ಒಂದು ಡೀಪ್‌ಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಆರೋಗ್ಯ ಕೇಂದ್ರಗಳಲ್ಲೂ ವ್ಯವಸ್ಥೆ: ಕೋವಿಡ್ ಲಸಿಕೆ ಬಂದರೆ ಅದನ್ನು ಮೈನಸ್ ಡಿಗ್ರಿ ಉಷ್ಣಾಂಶದಲ್ಲಿಡಬೇಕು ಎಂಬುದು ತಿಳಿದಿರುವವಿಚಾರ. ಮೈನಸ್ ಏಳು ಅಥವಾ ಎಂಟು ಡಿಗ್ರಿ ಉಷ್ಣಾಂಶದಲ್ಲಿಡಬೇಕು ಎಂಬುದು ದೃಢವಾದರೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಇದಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ತಿಳಿಸಿದರು.
ಟಾಸ್ಕ್ ಪೋರ್ಸ್ ಸಮಿತಿ ಸಭೆ : ಕೋವಿಡ್-19 ಲಸಿಕೆ ಸಂಬಂಧ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಜಿಲ್ಲಾ ಮಟ್ಟದ ಟಾಸ್ಕ್ಪೋರ್ಸ್ ಸಮಿತಿಯ ಸಭೆ ನಡೆಸಿದ್ದು, ಅಧಿಕಾರಿಗಳಿಗೆ ಸಲಹೆ-ಸೂಚನೆಗಳನ್ನು ನೀಡಿದ್ದು,ಕೋವಿಡ್-19 ಲಸಿಕೆ ನೀಡುವ ಮೊದಲ ಹಂತದಕಾರ್ಯವನ್ನುಯಶಸ್ವಿಯಾಗಿ ನಿರ್ವಹಿಸಲು ಸೂಚಿಸಿದ್ದಾರೆ.
2ನೇ ಹಂತದಲ್ಲಿ ವಿವಿಧ ಇಲಾಖೆ : ಎರಡನೇ ಹಂತದಲ್ಲಿ ಪೊಲೀಸ್‌ಇಲಾಖೆ ಸೇರಿದಂತೆ ವಿವಿಧಇಲಾಖೆಗಳ ಅಧಿಕಾರಿ, ಸಿಬ್ಬಂದಿ ಗಳು ಸೇರಿದಂತೆ ಪತ್ರಕರ್ತರಿಗೆ ನೀಡಲು ಚರ್ಚೆ ನಡೆಸಲಾಗಿದೆ.
ಒಂದು ಲಕ್ಷ ಹಿರಿಯ ನಾಗರಿಕರ ಪಟ್ಟಿ ಸಿದ್ಧ : ಲಸಿಕೆ ಬಂದ ಬಳಿಕ ಕೋವಿಡ್ ವಾರಿಯರ್ಸ್ ಬಳಿಕ ಹಿರಿಯ ನಾಗರಿಕರು, ಅದರಲ್ಲೂ ವಿವಿಧ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಹಾಗೂ ಕೋವಿಡ್ ಸೋಂಕಿಗೆ ಒಳಗಾಗಿ ಕ್ಲಿಷ್ಟಕರ ಪರಿಸ್ಥಿತಿಯಲ್ಲಿರುವವರಿಗೆ ನೀಡಲು ಮುಂದಾಗಿದ್ದು, ಅಂತವರ ಒಂದು ಲಕ್ಷಮಂದಿಯ ಪಟ್ಟಿ ಸಿದ್ಧವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಲಸಿಕೆ ಸಂಗ್ರಹಕ್ಕೆ ಹಾಗೂ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಫಲಾನುಭವಿಗಳಿಗೆ ವ್ಯಾಕ್ಸಿನ್ ನೀಡಲು 600 ಮಂದಿಗೆ ಅಗತ್ಯ ತರಬೇತಿ ನೀಡಲಾಗಿದೆ.
–ಡಾ.ಎಚ್.ಪಿ.ಮಂಚೇಗೌಡ, ಡಿಎಚ್‌ಒ, ಮಂಡ್ಯ
-ಎಚ್.ಶಿವರಾಜು