Advertisement

ಬೇಸಗೆಯಲ್ಲಿ ಆಹಾರ, ಆರೋಗ್ಯದ ‌ಬಗ್ಗೆ ಇರಲಿ ಕಾಳಜಿ

04:15 PM Mar 30, 2021 | Team Udayavani |

ಹೊರಗೆ ಬಿಸಿಲಿನ ಧಗೆ ಹೆಚ್ಚುತ್ತಿದ್ದಂತೆ ದೇಹದ ಉಷ್ಣತೆಯೂ ಅಧಿಕವಾಗುತ್ತಿದೆ. ಇದರಿಂದ ಉರಿ ಮೂತ್ರ, ಮೈಯಲ್ಲಿ ಬೊಬ್ಬೆ ಏಳುವುದು ಸಾಮಾನ್ಯ. ಅಲ್ಲದೇ ದೇಹದ ಉಷ್ಣತೆ ಸರಿಯಾಗಿಲ್ಲದೇ ಇದ್ದರೆ ಪಿತ್ತ ಸಮಸ್ಯೆ ಅಧಿಕವಾಗುವುದು. ಹೀಗಾಗಿ ಬೇಸಗೆಯಲ್ಲಿ ದೇಹದ ತಾಪಮಾನವನ್ನು ಸಮತೋಲನದಲ್ಲಿ ಇರಿಸಿಕೊಳ್ಳುವುದು ಬಹುಮುಖ್ಯ. ಇದಕ್ಕಾಗಿ ಆಹಾರ ಕ್ರಮ, ನಿರಂತರ ವ್ಯಾಯಾಮದ ಜತೆಗೆ ಒಂದಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಲೇ ಬೇಕು.

Advertisement

ಸೊಪ್ಪು, ಹಣ್ಣು, ತರಕಾರಿಗಳ ಸೇವನೆಗೆ ಆದ್ಯತೆ ನೀಡುವುದರ ಜತೆಗೆ ಸಾಕಷ್ಟು ನೀರು ಕುಡಿಯುವುದರಿಂದ ದೇಹವನ್ನು ತಂಪಾಗಿರಿಸಿಕೊಳ್ಳಬಹುದು. ಬೇಸಗೆಯಲ್ಲಿ ಕಲ್ಲಂಗಡಿ, ಪಿಯರ್ಸ್‌, ಸೇಬು, ಪ್ಲಮ್‌, ಬೆರಿ, ಬ್ರೊಕೋಲಿ, ಮೊಳಕೆ ಬರಿಸಿದ ಕಾಳುಗಳು ನಿತ್ಯದ ಆಹಾರದಲ್ಲಿರಲಿ.

ದೇಹದ ಉಷ್ಣತೆ ಹೆಚ್ಚಿಸುವ ಅದರಲ್ಲೂ ಹುಳಿ ಆಹಾರ ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ಸಿಟ್ರಸ್‌ ಹಣ್ಣುಗಳು, ಹುಳಿಯಾದ ಟೊಮೆಟೋ, ಬೆಳ್ಳುಳ್ಳಿ, ಮೆಣಸು, ಚೀಸ್‌, ಚಿಕನ್‌ ಮೊದಲಾದವುಗಳ ಸೇವನೆ ಮಿತ ಪ್ರಮಾಣದಲ್ಲಿರಲಿ. ಬೇಸಗೆಗೆ ಸಲಾಡ್‌ ಅತ್ಯುತ್ತಮ ಆಹಾರ. ಮಜ್ಜಿಗೆ ಸೇವನೆ ಅತ್ಯುತ್ತಮ.

ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಬೇಸಗೆಯಲ್ಲಿ ಅತ್ಯಗತ್ಯ. ಜತೆಗೆ ಮೈಗೆ ತೆಂಗಿನ ಎಣ್ಣೆ ಹಚ್ಚಿ ಸ್ನಾನ ಮಾಡು ವುದು ಒಳ್ಳೆಯದು. ಮುಂಜಾನೆ ಅಥವಾ ಸಂಜೆ ವೇಳೆ ವ್ಯಾಯಾಮ ಮಾಡಬಹುದು. ಬಿಸಿಲಿಗೆ ಹೋಗುವುದನ್ನು ಆದಷ್ಟು ತಪ್ಪಿಸಿ. ಹೆಚ್ಚು ತಣ್ಣನೆಯ ನೀರು ಕುಡಿಯುವುದು ಅದೇ ರೀತಿ ಹೆಚ್ಚು ಬಿಸಿ ನೀರು ಕುಡಿಯುವುದು ಬೇಸಗೆಯಲ್ಲಿ ಒಳ್ಳೆಯದಲ್ಲ. ಐಸ್‌ ಹಾಕಿದ ಪಾನೀಯಗಳ ಸೇವನೆಯನ್ನು ತ್ಯಜಿಸುವುದು ಅತ್ಯುತ್ತಮ.

Advertisement

Udayavani is now on Telegram. Click here to join our channel and stay updated with the latest news.

Next