Advertisement

ಹದಿನೇಳು ಜನರ ಆರೋಗ್ಯ ತಪಾಸಣೆ

04:55 PM Mar 12, 2020 | Suhan S |

ಲಕ್ಷ್ಮೇಶ್ವರ: ವಿದೇಶ ಪ್ರವಾಸ ಮುಗಿಸಿ ಮರಳಿದ ಹದಿನೇಳು ಜನರ ತಂಡವನ್ನು ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಲಾಯಿತು.

Advertisement

ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರೇಮಕ್ಕ ಬಿಂಕದಕಟ್ಟಿ ಅವರ ನೇತೃತ್ವದಲ್ಲಿ ಪಟ್ಟಣದಿಂದ ಮಾ.2ರಂದು ತೆರಳಿದ್ದ ಹತ್ತೂಂಭತ್ತು ಜನರಿದ್ದ ತಂಡ ಮಲೇಷಿಯಾ, ಸಿಂಗಪುರ ಮತ್ತು ಇಂಡೋನೇಷಿಯಾಕ್ಕೆ ಪ್ರವಾಸ ಮುಗಿಸಿ ಮಾ.10ರಂದು ಬೆಂಗಳೂರಿಗೆ ಮರಳಿತ್ತು. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಎಲ್ಲರೂ ತಪಾಸಣೆಗೊಳಗಾಗಿದ್ದರು. ಆದರೆ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಕೊರೊನಾ ವೈರಸ್‌ ತಗುಲಿರುವುದು ದೃಢಪಟ್ಟಿದ್ದರಿಂದ ಸರ್ಕಾರ ಈ ವಿಷಯನ್ನು ಗಂಭೀರವಾಗಿ ಪರಿಗಣಿಸಿತ್ತು.

ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದೇಶದಿಂದ ಬಂದ ಎಲ್ಲರನ್ನೂ ಮತ್ತೂಮ್ಮೆ ಪರೀಕ್ಷಿಸಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಬೇಕು ಎಂದು ಗದಗ ಜಿಲ್ಲಾಡಳಿತ ಸೂಚಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾ ಧಿಕಾರಿ ಗಿರೀಶ ಮರಡ್ಡಿ ಅವರು, ಬುಧವಾರ ಯಲವಗಿ ನಿಲ್ದಾಣದಿಂದ 17 ಮಂದಿಯನ್ನು ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಕರೆತಂದು ವಿಶೇಷ ವಾರ್ಡ್‌ನಲ್ಲಿ ಪರೀಕ್ಷೆಗೊಳಪಡಿಸಿ ಯಾವುದೇ ಸೋಂಕು ಮತ್ತು ಅನಾರೋಗ್ಯ ಲಕ್ಷಣ ಕಂಡು ಬರದ ಹಿನ್ನೆಲೆಯಲ್ಲಿ ಮನೆಗೆ ಕಳುಹಿಸಿದ್ದಾರೆ. ಲಕ್ಷ್ಮೇಶ್ವರದಿಂದ 13 ಮಂದಿ ಮಹಿಳೆಯರು ಮತ್ತು ಆರು ಜನ ಪುರುಷರು ವಿದೇಶಕ್ಕೆ ತೆರಳಿದ್ದರು. ಈ ಪೈಕಿ ಇಬ್ಬರು ಮಹಿಳೆಯರು ಬೆಂಗಳೂರಿನ ಸಂಬಂಧಿ ಕರ ಮನೆಯಲ್ಲೇ ಉಳಿದಿದ್ದು, ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಪ್ರವಾಸಕ್ಕೆ ಹೋದ ಸಂದರ್ಭ ವಿದೇಶದಲ್ಲಿ ಎಲ್ಲಿಯೂ ನಮ್ಮನ್ನು ಪರೀಕ್ಷೆಗೊಳಪಡಿಸಿಲ್ಲ. ಬೆಂಗಳೂರಿಗೆ ವಾಪಸ್‌ ಬಂದಾಗ ವಿಮಾನ ನಿಲ್ದಾಣ ಮತ್ತು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲರನ್ನೂ ಪರೀಕ್ಷಿಸಲಾಗಿದೆ. ನಮ್ಮ ತಂಡದ ಎಲ್ಲರೂ ಆರೋಗ್ಯದಿಂದ ಇದ್ದೇವೆ. ಈ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. -ಪ್ರೇಮಕ್ಕ ಬಿಂಕದಕಟ್ಟಿ, ವಿದೇಶದಿಂದ ವಾಪಸ್ಸಾದವರು.

Advertisement

Udayavani is now on Telegram. Click here to join our channel and stay updated with the latest news.

Next