Advertisement

ಜನ ಮೆಚ್ಚುಗೆ ಪಡೆದ ಆರೋಗ್ಯ ಕೇಂದ್ರ

02:25 PM May 17, 2021 | Team Udayavani |

ನೆಲಮಂಗಲ: ಕೋವಿಡ್ ಮಹಾಮಾರಿಹೆಸರಲ್ಲಿ ಕೆಲವರು ಬೆಡ್‌ ಬ್ಲಾಕ್‌ ದಂಧೆಯಲ್ಲಿ ಹಣ ಮಾಡುತ್ತಿದ್ದರೆ ನಗರ ಸಮೀಪದ ಅಡಕಮಾರನಹಳ್ಳಿಯಲ್ಲಿ ಮುಂಗಾರು ಮಳೆ ಚಿತ್ರ ನಿರ್ಮಾಪಕ ಇ.ಕೃಷ್ಣಪ್ಪತಮ್ಮ ತಾಯಿ ಪುಟ್ಟನರಸಮ್ಮ ಅವರ ಹೆಸರಿನಲ್ಲಿ ಉಚಿತವಾಗಿ ಆಸ್ಪತ್ರೆ ಪ್ರಾರಂಭಿಸಿರುವುದು ಸುತ್ತಮುತ್ತಲ ಗ್ರಾಮಗಳ ಬಡವರಿಗೆ ಸಂಜೀವಿನಿ ದೊರೆತಂತಾಗಿದ್ದು ಲಾಕ್‌ಡೌನ್‌ ವೇಳೆ ವರದಾನವಾಗಿದೆ.

Advertisement

ಸೋಂಕಿತರಿಗೂ ಚಿಕಿತ್ಸೆ ಉಚಿತ:ಅಡಕಮಾರನಹಳ್ಳಿ ಮುಖ್ಯದ್ವಾರದಲ್ಲಿರುವಪುಟ್ಟ ನರಸಮ್ಮ ಉಚಿತ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಚಿಕಿತ್ಸೆ, ಚಿಕಿತ್ಸೆಗೆ ಅತ್ಯವಶ್ಯಕವಾದ ಪ್ರಯೋಗಾಲಯದ ಪರೀಕ್ಷೆ,ಅನಾರೋಗ್ಯ ನಿವಾರಣೆಗೆ ಔಷಧೋಪಚಾರ ಸೇರಿ ಕೋವಿಡ್‌ ಸೋಂಕಿತರಿಗೂಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

ಸೇವೆಗೆ ಸಾರ್ಥಕತೆ: ಉಚಿತ ಆರೊಗ್ಯಕೇಂದ್ರದ ತಜ್ಞ ವೈದ್ಯೆ ಡಾ. ಪ್ರಕೃತಿ ಮಾತನಾಡಿ, ನಾನು ವೈದ್ಯಕೀಯ ವಿಜ್ಞಾನವ್ಯಾಸಂಗ ಮಾಡಿದ್ದರಿಂದ ನನ್ನ ಶಿಕ್ಷಣಮೂಲೆಗುಂಪಾಗದೆ ಬಡಜನರಿಗೆಅನುಕೂಲವಾಗಲಿ ಎಂಬುವುದು ಮಾವನವರ ಒತ್ತಾಸೆಯಂತೆ ನಾನು ಉಚಿತ ಚಿಕಿತ್ಸೆ ನೀಡಲು ಮುಂದಾಗಿದ್ದೇನೆ.

ಸೇವೆನನಗೆ ಸದಾ ಸಾರ್ಥಕತೆ ನೀಡುತ್ತಿದೆ,ಆರೋಗ್ಯ ಕೇಂದ್ರದಲ್ಲಿ ಡಾ.ದಿವಾಕರ್‌ ,ಸಿಬ್ಬಂದಿ ರೋಗಿಗಳಿಗೆ ಉತ್ತಮವಾಗಿಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.

ವ್ಯರ್ಥವಾಗಲ್ಲ: ಗ್ರಾಮದ ಮುಖಂಡಎ.ಜಿ.ಶಿವಕುಮಾರ್‌ ಮಾತನಾಡಿ, ನಮ್ಮಚಿಕ್ಕಪ್ಪ ಇ.ಕೃಷ್ಣಪ್ಪ ಅವರು ನಮ್ಮ ಅಜ್ಜಿಅವರ ಹೆಸರಿನಲ್ಲಿ ಆಸ್ಪತ್ರೆ ಪ್ರಾರಂಭಿಸಿದ್ದಾರೆ.ಆರೋಗ್ಯ ಕೇಂದ್ರಕ್ಕೆ ಅವಶ್ಯಕವಾದಯಂತ್ರೋಪಕರಣ ವೈದ್ಯರ ತಂಡ ಮತ್ತುಚಿಕಿತ್ಸಗೆ ಬೇಕಾದ ಔಷಧಿಗಳನ್ನು ನಮ್ಮಕುಟುಂಬದಿಂದಲೇ ನೀಡಲಾಗುತ್ತಿದೆ.ಚಿಕಿತ್ಸೆಗೆ ಆಗಮಿಸುವ ಅನಾರೋಗ್ಯಪೀಡಿತರಿಂದಾಗಲಿ ಅಥವಾ ಸಾರ್ವಜನಿಕರಿಂದಾಗಲಿ ಹಣ ಸ್ವೀಕರಿಸದೆ ಪ್ರಯೋಗಾಲಯವೆಚ್ಚ ಸೇರಿ ಸಂಪೂರ್ಣವಾಗಿ ಉಚಿತಚಿಕಿತ್ಸೆ ನೀಡಲಾಗುತ್ತಿದೆ. ಸುತ್ತಮುತ್ತಲಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳುತ್ತಿರುವುದು ನಮ್ಮ ಶ್ರಮವ್ಯರ್ಥವಾಗುತ್ತಿಲ್ಲ ಎಂಬತೃಪ್ತಭಾವನೆಯಿದೆ ಎಂದು ತಿಳಿಸಿದರು.

Advertisement

ಕೊಟ್ರೇಶ್‌.ಆರ್‌

Advertisement

Udayavani is now on Telegram. Click here to join our channel and stay updated with the latest news.

Next