Advertisement

ಕಂದಮ್ಮಗಳ ಆರೋಗ್ಯ ಕಾಳಜಿ ಅಗತ್ಯ

03:13 PM Dec 12, 2021 | Team Udayavani |

ಗದಗ: ನವಜಾತ ಶಿಶು ಹಾಗೂ ನಂತರದ ಬೆಳವಣಿಗೆಯಲ್ಲಿ ಮಗುವನ್ನು ಪಾಲಕ, ಪೋಷಕರು ಅತ್ಯಂತ ಕಾಳಜಿಯಿಂದ ಸಂರಕ್ಷಿಸುವುದು ಅಗತ್ಯವಿದೆ ಎಂದು ಜಿಮ್ಸ್‌ ಆಸ್ಪತ್ರೆಯಮಕ್ಕಳ ತಜ್ಞ ಡಾ|ಶಿವನಗೌಡ ಜೋಳದರಾಶಿ ಅಭಿಪ್ರಾಯಪಟ್ಟರು.

Advertisement

ಬೆಟಗೇರಿಯ ಸೇವಾಭಾರತಿ ಟ್ರಸ್ಟ್‌ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪರಿತ್ಯಕ್ತ ಹಾಗೂ ಅನಾಥ ಮಕ್ಕಳ ಪೋಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಂಸ್ಥೆಯ ಆಯಾಗಳಿಗೆ ಮಕ್ಕಳ ಪೋಷಣೆ ಕುರಿತು ತರಬೇತಿ ನೀಡಿ ಮಾತನಾಡಿದರು.

ಮಗು ಮತ್ತು ಮಗುವಿನ ಆರೈಕೆಯಲ್ಲಿ ತೊಡಗಿದವರು ಮೊಟ್ಟ ಮೊದಲು ಸ್ವಚ್ಛತೆಗೆ ಗಮನ ಕೊಡಬೇಕು. ನವಜಾತ ಮತ್ತು ಚಿಕ್ಕ ಮಕ್ಕಳನ್ನು ಸ್ನಾನ ಮಾಡಿಸುವ, ಎಣ್ಣೆ ಮಸಾಜ್‌ಮಾಡಿಸುವ, ಹಾಲು-ಗಂಜಿ ಕುಡಿಸುವ ವಿಧಾನಗಳ ಹಂತಗಳನ್ನು ವಿವರಿಸಿ, ಮಗುವಿಗೆಸಕಾಲಕ್ಕೆ ವ್ಯಾಕ್ಸಿನ್‌, ಚುಚ್ಚುಮದ್ದು ಹಾಕಿಸುವುದು ಕಡ್ಡಾಯವೆಂಬುದನ್ನು ಮನವರಿಕೆ ಮಾಡಿದರು.

ಮಗು ಕೆಮ್ಮು, ನೆಗಡಿ ಇತರೆ ವ್ಯಾಧಿಗಳಿಂದ ಬಳಲುತ್ತಿದ್ದರೆ ತಕ್ಷಣ ಚಿಕ್ಕ ಮಕ್ಕಳ ತಜ್ಞ ವೈದ್ಯರಲ್ಲಿ ತಪಾಸಣೆ ಮಾಡಿಸಬೇಕು. ಅವರ ಮಾರ್ಗದರ್ಶನ ಅನುಸರಿಸಬೇಕು. ಇಲ್ಲವಾದಲ್ಲಿ ಮಗುವಿನ ಆರೋಗ್ಯದಲ್ಲಿ ತೀವ್ರ ವ್ಯತ್ಯಾಸಗಳಾಗುವ ಸಾಧ್ಯತೆಗಳಿರುತ್ತವೆ. ಈ ಹಂತದಲ್ಲಿ ಮಗುವಿನಪ್ರಾಣಕ್ಕೂ ತೊಂದರೆಯಾಗಬಹುದು. ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅದರಲ್ಲೂ6 ತಿಂಗಳಿಂದ 1 ವರ್ಷದವರೆಗೆ ಮಗುವಿನ ಬಗ್ಗೆ ವಿಶೇಷ ಜಾಗೃತಿ ವಹಿಸಬೇಕೆಂದರು.

ಸೌಖ್ಯದಾ ಆಸ್ಪತ್ರೆಯ ಡಾ|ಅರುಣಾ ಮಾಲಿ, ಡಾ|ತೇಜಸ್ವಿನಿ, ಡಾ|ಶ್ವೇತಾ ಪಾಟೀಲ ಅವರು ಸಹ ಆಯಾಗಳಿಗೆ ಮಾರ್ಗದರ್ಶನ, ಸಲಹೆ ಸೂಚನೆ ನೀಡಿದರು.

Advertisement

ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ದತ್ತು ಸ್ವೀಕಾರ ಸಂಸ್ಥೆಯ ಆಯಾಗಳಾದ ನೀಲವ್ವ ರೊಟ್ಟಿ,ಸುಶೀಲಾ ಬಡಿಗೇರ, ಸುವರ್ಣಾ ಬಾರಕೇರ, ಸರೋಜಾ ಕುಂದಗೋಳ, ಬಸವ್ವ ಶಾವಿ, ಸುಂದರಾಬಾಯಿ ಅರವಟಗಿ, ಪಾರವ್ವ ಹಿರೇಮಠ, ಲಕ್ಷ್ಮವ್ವ ರೊಟ್ಟಿ ಅವರಿಗೆ ಸೌಖ್ಯದಾ ಆಸ್ಪತ್ರೆಯಿಂದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಸೌಖ್ಯದಾ ಆಸ್ಪತ್ರೆ ಸಿಬ್ಬಂದಿ ಶಿವಾನಂದ ಮುಳಗುಂದ, ಪ್ರಶಾಂತ, ವೀಣಾ, ರಾಜೇಶ, ಬಸವಂತಪ್ಪ ಕೆಂಚರಡ್ಡಿ, ಅಮರೇಶಪ್ಪ ಜೋಳದರಾಶಿ, ಶಾರದಮ್ಮ ಜೋಳದರಾಶಿ, ಸಂಸ್ಥೆ ಕಾರ್ಯದರ್ಶಿ ಸುಭಾಸ ಬಬಲಾದಿ, ಸದಸ್ಯರಾದ ಲಲಿತಾಬಾಯಿ ಮೇರವಾಡೆ, ನಾಗವೇಣಿ ಕಟ್ಟಿಮನಿ, ಶ್ರೀಧರ ಉಡುಪಿ, ರಾಜೇಶ ಖಟವಟೆ, ರಾಜು ಕಾರ್ಕಳ ಉಪಸ್ಥಿತರಿದ್ದರು.

ಸೇವಾ ಭಾರತಿ ಟ್ರಸ್ಟ್‌ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದಸ್ವಾಗತಿಸಿ, ಚನ್ನಯ್ಯ ಬೊಮ್ಮನಹಳ್ಳಿ ನಿರೂಪಿಸಿ, ಮಂಜುನಾಥ ಚನ್ನಪ್ಪನವರ ವಂದಿಸಿದರು.

ಪೋಷಣೆಯಲ್ಲಿ ಸಮರ್ಪಣಾ ಮನೋಭಾವದಿಂದ ತಮ್ಮನ್ನುತೊಡಗಿಸಿಕೊಂಡಿರುವ ಆಯಾಗಳುಈ ಮಕ್ಕಳಿಗೆ ತಾಯಿಯ ಸ್ವರೂಪದಲ್ಲಿ ಪ್ರೀತಿ, ಮಮತೆ, ಕಕ್ಕುಲತೆಯಿಂದ ಕಾಳಜಿ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.  –ಡಾ|ಶಿವನಗೌಡ ಜೋಳದರಾಶಿ, ಜಿಮ್ಸ್‌ ಆಸ್ಪತ್ರೆ ಮಕ್ಕಳ ತಜ್ಞ

Advertisement

Udayavani is now on Telegram. Click here to join our channel and stay updated with the latest news.

Next