Advertisement

ಹೆಲ್ತ್‌ ಕೇರ್‌ ಈಸ್‌ ವೆಲ್ತ್‌

07:42 PM Apr 22, 2019 | mahesh |

ಆಸ್ಪತ್ರೆ ಮತ್ತು ಕ್ಲಿನಿಕ್‌ಗಳು ಎಂದರೆ ಕೇವಲ ವೈದ್ಯರು ಮತ್ತು ದಾದಿಯರು ಮಾತ್ರ ಎಂಬ ಭಾವ ಹೋಗಿ ಯಾವುದೋ ಕಾಲವಾಗಿದೆ. ಇಂದು ಆಸ್ಪತ್ರೆಗಳು ಯಶಸ್ವಿಯಾಗಿ ನಡೆಯಲು ಸಮರ್ಥ ಆಡಳಿತ ಮಂಡಳಿ ಮತ್ತು ನಿರ್ವಾಹಕರ ಅಗತ್ಯ ಬಹಳವಿದೆ. ಇಂದು ಸಣ್ಣ ಕ್ಲಿನಿಕ್‌ಗಳು ಆಸ್ಪತ್ರೆಗಳಾಗಿ, ಆಸ್ಪತ್ರೆಗಳು ಸ್ಪೆಷಾಲಿಟಿ ಆಸ್ಪತ್ರೆಗಳಾಗಿ, ಸ್ಪೆಷಾಲಿಟಿ ಆಸ್ಪತ್ರೆಗಳು ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗಳಾಗಿ ರೂಪಾಂತರ ಹೊಂದುತ್ತಿರುವ ದಿನಮಾನದಲ್ಲಿ ಈ ಆರೋಗ್ಯ ಉದ್ದಿಮೆಯ ನಿರ್ವಹಣೆಗೆ ಸಮರ್ಥ ವೈದ್ಯಕೀಯೇತರ ಸಿಬ್ಬಂದಿಗಳ ಅಗತ್ಯ ಅಗಾಧವಾಗಿದೆ.

Advertisement

ಬಹಳಷ್ಟು ಸ್ಪೆಷಾಲಿಟಿ ಆಸ್ಪತ್ರೆಗಳು ವಿದೇಶಿ ಕಂಪನಿಗಳೊಂದಿಗೆ ವಿಲೀನ ಮತ್ತು ಸಹಭಾಗಿತ್ವಕ್ಕೆ ಒಳಗಾಗುತ್ತಿರುವುದು ಆರೋಗ್ಯವಲಯದ ವಿಸ್ತರಣೆಗೆ ಕಾರಣವಾಗಿವೆ. ಇದರಿಂದಾಗಿ ವೃತ್ತಿಕ್ಷೇತ್ರವಾಗಿ ಹೆಲ್ತ್‌ಕೇರ್‌ ಮ್ಯಾನೇಜ್‌ಮೆಂಟ್‌ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಗಳಿಕೆಗೂ ಇಲ್ಲಿ ಅವಕಾಶಗಳನ್ನು ಒದಗಿಸುತ್ತಿದೆ.

ಹೆಲ್ತ್‌ಕೇರ್‌ ಮ್ಯಾನೇಜ್‌ಮೆಂಟ್‌ ಎಂದರೇನು?
ಒಂದು ವೈದ್ಯಕೀಯ ಸಂಸ್ಥೆಯ ಎಲ್ಲ ಆಡಳಿತಾತ್ಮಕ ಅವಶ್ಯಕತೆಗಳನ್ನು ಹೆಲ್ತ್‌ಕೇರ್‌ ಮ್ಯಾನೇಜ್‌ಮೆಂಟ್‌ ಒಳಗೊಳ್ಳುತ್ತದೆ. ಇದರಲ್ಲಿ ಅನೇಕ ಪಾತ್ರಗಳಿರುತ್ತವೆ ಸಿಬ್ಬಂದಿಯನ್ನು ನೇಮಿಸುವುದು, ಲೆಕ್ಕಪತ್ರ, ಯೋಜನೆ, ಮಾರುಕಟ್ಟೆಯ ನಿರ್ವಹಣೆ, ಸಾರ್ವಜನಿಕ ಸಂಪರ್ಕ, ಮಾನವ ಸಂಪನ್ಮೂಲ ನಿರ್ವಹಣೆ ಇತ್ಯಾದಿ.

ಶೈಕ್ಷಣಿಕ ಅರ್ಹತೆ
ಆಸ್ಪತ್ರೆ ಆಡಳಿತ ನಿರ್ವಹಣೆಗೆ ಸೇರಲು ಅರ್ಹತೆ ಮತ್ತು ಪ್ರವೇಶಪರೀಕ್ಷೆಗಳ ವಿವರ ಇಲ್ಲಿದೆ:
ಡಿಪ್ಲೊಮಾ: ಪಿಯೂಸಿ (ಅಥವಾ 10+2) ಅಥವಾ ತತ್ಸಮಾನ ಪರೀಕ್ಷೆಯನ್ನು ಶೇ. 50ರಷ್ಟು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಇವರು ಡಿಪ್ಲೊಮಾ ತರಬೇತಿಗೆ ಅರ್ಹರು.
ಪದವಿ: ಪದವಿ ತರಗತಿಗಳಿಗೆ ಪ್ರವೇಶ ಪಡೆಯಲು ಕನಿಷ್ಟ ಶೇ 50ರಷ್ಟು ಅಂಕಗಳನ್ನು ಪಿಯೂಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಡೆದಿದ್ದು ವಿಜ್ಞಾನದ ಹಿನ್ನೆಲೆಯಿದ್ದವರು ಇದಕ್ಕೆ ಅರ್ಜಿ ಸಲ್ಲಿಸಬಹುದು.
ಸ್ನಾತಕೋತ್ತರ ಪದವಿ: ಎಂಬಿಎ/ಎಂಎಸ್ಸಿ ಓದಿದವರು ಎಂ.ಬಿ.ಬಿ.ಎಸ್‌ ಪಡೆದಿರಬೇಕು ಅಥವಾ ಬಿಎಸ್ಸಿ ಪದವಿಯನ್ನು ಆಸ್ಪತ್ರೆ ನಿರ್ವಹಣೆ ವಿಷಯದಲ್ಲಿ ಪಡೆದಿರಬೇಕು.

ಹೆಲ್ತ್‌ಕೇರ್‌ ಮ್ಯಾನೇಜ್‌ಮೆಂಟ್‌ ತರಗತಿ ಪಠ್ಯಕ್ರಮ
ಆಸ್ಪತ್ರೆ ನಿರ್ವಹಣಾ ಕೋರ್ಸಿನಲ್ಲಿ ವಿದ್ಯಾರ್ಥಿಗಳು ಕಲಿಯುವ ಪಠ್ಯಕ್ರಮವನ್ನು ಇಲ್ಲಿ ಪಟ್ಟಿಮಾಡಲಾಗಿದೆ.

Advertisement

ಆರೋಗ್ಯ ರಕ್ಷಣೆ ಕಾನೂನು
ರೋಗಿಗಳ ಹಕ್ಕನ್ನು ಕುರಿತ ತರಬೇತಿಯನ್ನು ಆಕಾಂಕ್ಷಿಗಳಿಗೆ ನೀಡಲಾಗುತ್ತದೆ. ನಿರ್ಲಕ್ಷ್ಯದ ಪ್ರಕರಣಗಳು ಮತ್ತು ಗೌಪ್ಯತೆ ಇತ್ಯಾದಿ ವಿಷಯಗಳನ್ನು ಇಲ್ಲಿ ಕಲಿಸಲಾಗುತ್ತದೆ.

ಆರ್ಥಿಕತೆ
ಆರೋಗ್ಯ ರಕ್ಷಣಾ ವ್ಯವಸ್ಥೆಯ ಆರ್ಥಿಕ ಸಾಧನೆ, ಬಜೆಟ್‌ ಬಂಡವಾಳ ಇತ್ಯಾದಿಗಳ ಮೌಲ್ಯಮಾಪನ ಮಾಡುತ್ತಾರೆ.

ಮಾನವ ಸಂಪನ್ಮೂಲ ನಿರ್ವಹಣೆ
ಆಸ್ಪತ್ರೆಯ ಯಾವುದೇ ವಿಭಾಗದ ಸಿಬ್ಬಂದಿಯ ನೇಮಕಾತಿ, ತರಬೇತಿ ಮತ್ತು ಕೌಶಲವಿರುವ ಸಿಬ್ಬಂದಿಯನ್ನು ಉಳಿಸಿಕೊಳ್ಳುವುದು ಈ ಎಲ್ಲವನ್ನೂ ಈ ವಿಷಯ ಒಳಗೊಂಡಿದೆ.

ಕಾರ್ಯಾಚರಣೆಯ ನಿರ್ವಹಣೆ
ಆಸ್ಪತ್ರೆ ಸಿಬ್ಬಂದಿಯ ದೈನಂದಿನ ಕಾರ್ಯಗಳ ವೇಳಾಪಟ್ಟಿ ತಯಾರಿಕೆ ಮತ್ತು ಎಲ್ಲಾ ಕೆಲಸಗಳು ನಿರಾಂತಕವಾಗಿ ಸಾಗುತವಂತೆ ಮಾಡುವ ಜಾಣ್ಮೆಯನ್ನು ವಿದ್ಯಾರ್ಥಿಗಳು ಈ ವಿಷಯದಲ್ಲಿ ಕಲಿಯುತ್ತಾರೆ.

ವೈದ್ಯಕೀಯ ಕಾನೂನು
ವೈದ್ಯಕೀಯ ನಿರ್ಲಕ್ಷ್ಯ, ಗ್ರಾಹಕ ಸಂರಕ್ಷಣೆ, ಇಚ್ಛಾಮರಣ, ದೇಹ ಮತ್ತು ಅಂಗಾಂಗದಾನ, ಬಯೋಟೆಕ್ನಾಲಜಿಯಲ್ಲಿನ ಹೊಸ ಆವಿಷ್ಕಾರಗಳು, ಬಾಡಿಗೆ ತಾಯ್ತನ, ಭ್ರೂಣಲಿಂಗ ಪತ್ತೆಯಂತಹ ಕಾನೂನಿನ ಚೌಕಟ್ಟಿನಲ್ಲಿ ಬರುವ ವಿಚಾರಗಳ ಕುರಿತ ಅಧ್ಯಯನವನ್ನು ಈ ವಿಷಯ ಒಳಗೊಂಡಿರುತ್ತದೆ.

ನಿರ್ವಹಿಸಬಹುದಾದ ಹುದ್ದೆಗಳು
ಕೋರ್ಸಏನ್ನು ಯಶಸ್ವಿಯಾಗಿ ಪೂರೈಸಿದವರು ಕೆಳಕಂಡ ಹು¨ªೆಗಳಿಗೆ ಪ್ರಯತ್ನಿಸಬಹುದಾಗಿದೆ
ಆಸ್ಪತ್ರೆ ವ್ಯವಹಾರ ನಿರ್ವಾಹಕ
ಆಹಾರ ಮತ್ತು ಪಾನೀಯ ನಿರ್ವಾಹಕ
ಅತಿಥಿ ಸಂಪರ್ಕ ನಿರ್ವಾಹಕ
ಆಸ್ಪತ್ರೆ ಆಡಳಿತಾಧಿಕಾರಿ
ಕ್ಷೇತ್ರಾಧಿಕಾರಿ
ಕೇಂದ್ರದ ಅಧಿಕಾರಿ
ರೋಗಿ ಸಂಪರ್ಕ ಕಾರ್ಯನಿರ್ವಾಹಕ
ಫ್ರಂಟ್‌ ಡೆಸ್ಕ್ ಆಡಳಿತಾಧಿಕಾರಿ
ಸಹಾಯಕ ನಿರ್ವಾಹಕ/ ನಿರ್ವಾಹಕ
ಕಾರ್ಯಾಚರಣೆ ಕಾರ್ಯನಿರ್ವಾಹಕ

ಇಲ್ಲೆಲ್ಲಾ ಉದ್ಯೋಗಾವಕಾಶಗಳು
ರಿಲಯನ್ಸ್‌ ಲೈಫ್ ಸೈನ್ಸಸ್‌ (ಆರ್‌.ಎಲ….ಎಸ್‌)
ಎಸ್‌.ಆರ್‌.ಎಲ್‌ ಡಯಾಗ್ನಾಸ್ಟಿಕ್ಸ್‌ (ಎಸ್‌ಆರ್‌ಎಲ…)
ಫೋರ್ಟಿಸ್‌ ಹೆಲ್ತ್‌ಕೇರ್‌ ಲಿಮಿಟೆಡ್‌
ಮ್ಯಾಕ್ಸ್‌ ಹೆಲ್ತ… ಕೇರ್‌
ಅಪೋಲೋ ಆಸ್ಪತ್ರೆಗಳು
ಕೇರ್‌ ಆಸ್ಪತ್ರೆ ಸಮೂಹ
ಫಿಲಿಪ್ಸ್‌ ಹೆಲ್ತ್‌ ಕೇರ್‌
ಡಾ. ಲಾಲ್‌ ಫ್ಯಾಥ್‌ ಲ್ಯಾಬ್ಸ್ ಮುಂತಾದವು…

ಕಲ್ಗುಂಡಿ ನವೀನ್‌

Advertisement

Udayavani is now on Telegram. Click here to join our channel and stay updated with the latest news.

Next