Advertisement

ಗ್ರಾಮೀಣ ಜನರಿಗೆ ಆರೋಗ್ಯ ಶಿಬಿರ ಸಹಕಾರಿ: ಡಾ|ಸವಡಿ

10:28 AM Jun 15, 2019 | Suhan S |

ಮುಳಗುಂದ: ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಗ್ರಾಮಗಳಲ್ಲಿ ಆಯೋಜಿಸುವ ಇಂತಹ ಶಿಬಿರಗಳು ಪ್ರಯೋಜನವನ್ನು ಪ್ರತಿಯೊಬ್ಬ ಕೂಲಿ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಚಿಂಚಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಎ.ಎಸ್‌. ಸವಡಿ ಹೇಳಿದರು.

Advertisement

ಸಮೀಪದ ನೀಲಗುಂದ ಗ್ರಾಮದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಬದುವು ನಿರ್ಮಾಣ ಮಾಡುತ್ತಿರುವ 400 ಕೂಲಿ ಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಿಸಿ ಮಾತನಾಡಿ, ಕೆಲವೊಂದು ಕಾಯಿಲೆಗಳು ಮಾನವನಿಗೆ ಮಾರಕವಾಗಿದ್ದು, ಈಗಿನ ಪರಿಸ್ಥಿತಿಯಲ್ಲಿ ಸಣ್ಣ ಜ್ವರವನ್ನು ನಿರ್ಲಕ್ಷ್ಯ ಮಾಡಬಾರದು. ಪ್ರತಿಯೊಬ್ಬರೂ ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಎಂದರು. ಮುಳಗುಂದ ಕೃಷಿ ಸಹಾಯಕ ಅಧಿಕಾರಿ ಎಂ.ಎಸ್‌. ಸುಂಕಾಪುರ ಮಾತನಾಡಿ, ಇಂತಹ ಶಿಬಿರ ಬಹಳ ಸಹಕಾರಿಯಾಗಿದ್ದು, ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ರವಿ ವಗ್ಗನವರ ಮಾತನಾಡಿ, ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಬಡ ಜನರ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದರು.

ಚಿಂಚಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಎಕನಾಥ ಪಾಟೀಲ, ಲಕ್ಷ್ಮೀ ಎಸ್‌, ಕಮಲಾಕ್ಷಿ ಹಳ್ಳಿ, ಲಲಿತಾ ತಿರ್ಲಾಪುರ, ನೀಲಮ್ಮಾ ಕಾಳೆ, ಪ್ರತಿಭಾ ಬಾಲರೆಡ್ಡಿ, ಯಮನೂರಪ್ಪ ನದಾಫ್‌, ಈ ವೇಳೆ ನರೇಗಾ ಯೋಜನೆಯಲ್ಲಿ ಪಾಲ್ಗೊಂಡ ಸುಮಾರು 400 ಕೂಲಿ ಕಾರ್ಮಿಕರು ಈ ಶಿಬಿರದಲ್ಲಿ ಆರೋಗ್ಯ ತಪಾಸಣಾ ಜತೆಗೆ ಔಷಧಿ ವಿತರಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next