Advertisement
ಆಮೃತ ಬಳ್ಳಿಯ ಔಷಧೀಯ ಗುಣಗಳು:ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಸಂಜೀವಿನಿಗೆ ಸಮನಾದ ಒಂದು ವನಸ್ಪತಿ ಎಂದು ಪರಿಗಣಿಸಿದೆ. ಖಾರ, ಕಹಿ, ಒಗರು ರಸಗಳಿಂದ ಕೂಡಿರುವುದರಿಂದ ಪಾಚನಗುಣವನ್ನು ಹೊಂದಿದೆ.
Related Articles
Advertisement
ಬಾಣಂತಿಯರು ಅಮೃತ ಬಳ್ಳಿ ಹಾಗೂ ಶುಂಠಿಯಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ಎದೆಹಾಲು ಶುದ್ಧಿಯಾಗುತ್ತದೆ.
ಅರ್ಧ ಗ್ರಾಂ ಅಮೃತ ಬಳ್ಳಿಯನ್ನು ನೆಲ್ಲಿ ಕಾಯಿ ಜೊತೆ ಮಿಶ್ರಣ ಮಾಡಿ ಸೇವಿಸಿದರೆ ಹೊಟ್ಟೆಯ ಸಮಸ್ಯೆ ನಿವಾರಣೆಯಾಗಿಉತ್ತದೆ.ಉಸಿರಾಟದದ ತೊಂದರೆ ಸೇರಿದಂತೆ ಅಸ್ತಮಾದಂತಹ ರೋಗಗಳ ಚಿಕಿತ್ಸೆಯಲ್ಲಿ ಅಮೃತ ಬಳ್ಳಿಗೆ ಮಹತ್ವದ ಸ್ಥಾನವಿದೆ. ಅಸ್ತಮಾ ರೋಗಿಗಳು ದಿನನಿತ್ಯ ಅಮೃತ ಬಳ್ಳಿ ಸೇವಿಸುವುದರಿಂದ ರೋಗ ಕಡಿಮೆಯಾಗುತ್ತದೆ. ಅಮೃತ ಬಳ್ಳಿಯ ನಯವಾದ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕದಡಿ ದಿನಕ್ಕೆ ಎರಡು ಬಾರಿಯಂತೆ ಸೇವಿಸುವುದರಿಂದ ಬಹುಮೂತ್ರ ಶಮನವಾಗುತ್ತದೆ. ಸಂಧಿವಾತ ಅಥವಾ ಮಂಡಿ ನೋಮಿನಿಂದ ಬಳಲುವವರಿಗೆ ಕೂಡ ಅಮೃತ ಬಳ್ಳಿ ಸಹಾಯ ಮಾಡುತ್ತದೆ. ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತಿರುವಾಗಲೇ ಇದನ್ನು ಸೇವಿಸಿದರೆ ನೋವು ಶಮನವಾಗುತ್ತದೆ. ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಥೀಯ ಸಸ್ಯಗಳೊಂದಿಗೆ ಬೆರೆಸಿ ಕಷಾಯ ಮಾಡಿ ಕುಡಿಯಬಹುದು. (ಸಂಬಾರ ಬಳ್ಳಿಯ ಎಲೆ, ಮಜ್ಜೆಗೆ ಸೊಪ್ಪು, ತುಳಸಿ, ಲವಂಗ, ಅರಸಿನ ಪುಡಿ, ಕಾಳು ಮೆಣಸು, ಜೇರಿಗೆ, ಶುಂಠಿ) ಈ ಕಷಾಯವನ್ನು ವಾರದಲ್ಲಿ ಒಂದು ಬಾರಿ ಅರ್ಧ ಲೋಟದಂತೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ದೇಹದ ರೋಗ ನಿರೋಧಕ ಶಕ್ತಿ ಜಾಸ್ತಿಯಾಗುತ್ತದೆ. ಇಂತಹ ಮನೆ ಮದ್ದು ಅಮೃತ ಬಳ್ಳಿಯನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಂಡರೆ ಆರೋಗ್ಯ ಸಮಸ್ಯೆಯಿಂದ ದೂರ ಇರುವುದಂತೂ ನಿಚ್ಚಳ.