Advertisement

“ಈ ತರಕಾರಿ ಸೊಪ್ಪು”ಗಳ ಔಷಧೀಯ ಗುಣಗಳ ಬಗ್ಗೆ ಗೊತ್ತಾ…

02:36 PM Oct 06, 2018 | Sharanya Alva |

ಹಿಂದೆ ಜನರು ತಮಗೆ ಅಗತ್ಯವಿರುವ ಔಷಧಿಗಳನ್ನು ತಮ್ಮ,-ತಮ್ಮ ಮನೆಗಳಲ್ಲಿಯೇ ತಯಾರಿಸುತ್ತಿದ್ದರು. ಆದರೆ ಇಂದಿನ ಪೀಳಿಗೆಯವರಿಗೆ ಔಷಧದ ಬಗ್ಗೆ ಅಷ್ಟೊಂದು ತಿಳಿದಿರಲಿಕ್ಕಿಲ್ಲ. ಹಾಗಾಗಿ ನಾವು ಮನೆಯಲ್ಲಿ ಸೇವಿಸುವ ಕೆಲವೊಂದು ಸೊಪ್ಪುಗಳಲ್ಲಿ ಏನೇನು ಅಡಗಿದೆ ಔಷಧೀಯ ಗುಣಗಳು ಎಂಬುದು ತಿಳಿದುಕೊಳ್ಳೋಣ.

Advertisement

1. ಮೆಂತೆ ಸೊಪ್ಪು:

– ಮೆಂತೆ ಸೊಪ್ಪನ್ನು ಚೆನ್ನಾಗಿ ಅರೆದು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಸೊಂಪಾಗಿ ಇರುತ್ತದೆ.

– ಮಧುಮೇಹಿಗಳಿಗೂ ಇದು ಉತ್ತಮ ಔಷಧಿ.

– ಮೆಂತೆ ಸೊಪ್ಪಿನಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧಿಯನ್ನಾಗಿ ಉಪಯೋಗಿಸುತ್ತಾರೆ.

Advertisement

– ಮೆಂತೆ ಸೊಪ್ಪಿನ ಗಂಜಿ ತಯಾರಿಸಿ ಸೇವಿಸಿದಲ್ಲಿ ದೇಹದ ಉಷ್ಣತೆ ಕಡಿಮೆಯಾಗುವುದಲ್ಲದೆ ಪಿತ್ತ ಶಮನವಾಗುವುದು.

2.ಕೊತ್ತಂಬರಿ ಸೊಪ್ಪು:

– ಒಂದು ಲೋಟ ಮಜ್ಜಿಗೆಗೆ 2 ಚಮಚ ಇದರ ರಸವನ್ನು ಬೆರೆಸಿ, ಪ್ರತಿ ದಿನ ಕುಡಿಯುತ್ತಾ ಬಂದರೆ ಅಜೀರ್ಣ, ವಾಂತಿ ಹಾಗೂ ಬಾಯಿಯಲ್ಲಿರುವ ಹುಣ್ಣು ಸಹ ನಿವಾರಣೆಯಾಗುತ್ತದೆ.

– ಒಂದು ಚಮಚ ಕೊತ್ತಂಬರಿ ರಸಕ್ಕೆ 1 ಚಮಚ ಜೇನು ಬೆರೆಸಿ ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ.

– ಮಧುಮೇಹಿಗಳ ಶರೀರದಲ್ಲಿ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಇನ್ಸುಲಿನ್‌ ಉತ್ಪತ್ತಿಯಾಗುವುದಿಲ್ಲ. ಕೊತ್ತಂಬರಿಯಲ್ಲಿರುವ ಪೋಷಕಾಂಶಗಳು ಇನ್ಸುಲಿನ್‌ ಉತ್ಪತ್ತಿಯನ್ನು ಉತ್ತೇಜಿಸಿ ಮಧುಮೇಹವನ್ನು ಕಡಿಮೆಗೊಳಿಸುತ್ತವೆ.

3.ಪುದೀನಾ ಸೊಪ್ಪು:

– ಪುದೀನಾ ರಸದಿಂದ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ವಾಸನೆ ಹಾಗೂ ಹಲ್ಲು ನೋವು ಕಡಿಮೆಯಾಗುವುದು.

– ಪುದೀನಾ ಸೊಪ್ಪಿನ ಸೇವನೆಯಿಂದ ಹಸಿವೆ ಹೆಚ್ಚಾಗುವುದು.

– ಮಕ್ಕಳ ಹೊಟ್ಟೆಯಲ್ಲಿ ಜಂತು ಹುಳುಗಳ ಸಮಸ್ಯೆ ಇದ್ದರೆ ಈ ರಸವನ್ನು ಸೇವಿಸುವುದರಿಂದ ನಿವಾರಣೆಯಾಗುತ್ತದೆ.

– ಒಂದು ಹಿಡಿ ಪುದೀನಾ ಎಲೆಯನ್ನು ರುಬ್ಬಿ ಸೋಸಿಕೊಂಡು ಅದಕ್ಕೆ ಸ್ವಲ್ಪ ಜೀರಿಗೆ, ನಿಂಬೆ ರಸ, ಜೇನು ತುಪ್ಪ ಸೇರಿಸಿ ಪ್ರತಿದಿನ 3 ರಿಂದ 4 ಕಪ್‌ ಕುಡಿಯುವುದರಿಂದ ರಕ್ತವನ್ನು ಶುದ್ಧೀಕರಿಸಿ ದೇಹವನ್ನು ಆರೋಗ್ಯಯುತವಾಗಿರುತ್ತದೆ.

4. ಕರಿಬೇವಿನ ಸೊಪ್ಪು:

-ಮಧುಮೇಹ ರೋಗಿಗಳು ಪ್ರತಿದಿನ ರಾತ್ರಿ ಮಲಗುವ ಮುನ್ನ 6-7 ಎಲೆಗಳನ್ನು ಅಗಿದು ತಿಂದರೆ ಬೇಗನೆ ನಿಯಂತ್ರಣಕ್ಕೆ ಬರುವುದು.

– ಕರಿಬೇವಿನ ರಸವನ್ನು ಕಣ್ಣಿಗೆ ಹಾಕಿದರೆ ಪೊರೆ ಬರುವುದಿಲ್ಲ.

– ಕರಿಬೇವಿನ ಚಿಗುರುಗಳನ್ನು ಜೇನಿನೊಂದಿಗೆ ಬೆರೆಸಿ ತಿಂದರೆ ಮೂಲವ್ಯಾಧಿಯ ಉರಿ ಹಾಗೂ ನೋವು ಕಡಿಮೆಯಾಗುವುದು.

5. ಮೂಲಂಗಿ ಸೊಪ್ಪು:

– ಮೂಲಂಗಿ ಸೊಪ್ಪಿನ ರಸವನ್ನು ಸೇವಿಸಿದರೆ ಮೂತ್ರಕೋಶದಲ್ಲಿನ ಕಲ್ಲು ಹೊರ ಬರುವುದು.

– ಮೂಲಂಗಿ ಅಧಿಕ ಬಳಕೆಯಿಂದ ಕಣ್ಣಿನ ಕಾಂತಿ ಹೆಚ್ಚುವುದು.

– ಮೂಲಂಗಿ ಸೇವಿಸುವುದರಿಂದ ರಕ್ತ ಸಂಚಾರ ಸುಗಮವಾಗುವುದು.

– ರಕ್ತದ ಒತ್ತಡ ಇರುವವರು ಮೂಲಂಗಿ ಹೆಚ್ಚಾಗಿ ಸೇವಿಸುವುದರಿಂದ ನಿಯಂತ್ರಣಕ್ಕೆ ಬರುವುದು.

6. ಪಾಲಕ್‌ ಸೊಪ್ಪು:

– ಪಾಲಕ್‌ ಸೊಪ್ಪನ್ನು  ಅರೆದು ಪೇಸ್ಟ್‌ನಂತೆ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ಕಡಿಮೆಯಾಗುವುದು.

– ಪಾಲಕ್‌ಸೊಪ್ಪು ಕಬ್ಬಿಣದ ಅಂಶವನ್ನು ಹೊಂದಿದ್ದು ಇದನ್ನು ಹೇರಳವಾಗಿ ಸೇವಿಸುವುದರಿಂದ ಕ್ಯಾಲ್ಸಿಯಂ ಕೊರತೆ ನೀಗುವುದು.

7. ನುಗ್ಗೆ ಸೊಪ್ಪು:

-ನುಗ್ಗೆ ಸೊಪ್ಪನ್ನು ಸೇವನೆಯಿಂದ ಶ್ವಾಸಕೋಶವು ಸ್ವಚ್ಛವಾಗುವುದು.

-ಸಕ್ಕರೆ ಕಾಯಿಲೆಗೆ  ನುಗ್ಗೆ ಸೊಪ್ಪು ರಾಮಬಾಣ.

– ನುಗ್ಗೆ ಸೊಪ್ಪಿನ ರಸ ಹಾಗೂ ಜೇನು ತುಪ್ಪ ಬೆರೆಸಿ ಸೇವಿಸಿದರೆ ಕೆಮ್ಮು ಗುಣವಾಗುವುದು.

8. ಸಬ್ಬಸಿಗೆ ಸೊಪ್ಪು:

– ಸಬ್ಬಸಿಗೆ ಸೊಪ್ಪು ರಕ್ತದ ಕೊಲೆಸ್ಟರಾಲ್‌ ಮಟ್ಟವನ್ನು ನಿಯಂತ್ರಿಸುವಲ್ಲಿ  ಸಹಾಯ ಮಾಡುತ್ತದೆ.

– ಮೂಳೆಗಳ ಸರಿಯಾದ ಬೆಳವಣಿಗೆಗೆ ಮತ್ತು ಅಭಿವೃದ್ಧಿಗೆ ಉಪಯುಕ್ತ.

– ಪ್ರಕೃತಿಯ ರೋಗಾಣುಕಾರಕ ಅಥವಾ ಬ್ಯಾಕ್ಟೀರಿಯಾಗಳನ್ನು ಕಡಿಮೆಗೊಳಿಸಿ ಅತಿಸಾರ ನಿವಾರಿಸುತ್ತವೆ.

9. ಬಸಳೆ ಸೊಪ್ಪು: 

– ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ ಒದಗಿಸುವಲ್ಲಿ ಬಸಳೆ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ.

– ಬಸಳೆ ಸೊಪ್ಪನ್ನು ಬಾಯಿಗೆ ಹಾಕಿ ನಿಧಾನವಾಗಿ ಅಗೆಯುತ್ತಿದ್ದರೆ ಬಾಯಿಹುಣ್ಣು ಗು ಣವಾಗುತ್ತದೆ.

– ಬಸಳೆ ಎಲೆಯ ಕಷಾಯವನ್ನು ನಿಯಮಿತವಾಗಿ ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

– ಬಸಳೆ ಸೊಪ್ಪಿನ ರಸಕ್ಕೆ ಬೆಣ್ಣೆ ಸೇರಿಸಿ ಸುಟ್ಟಗಾಯಕ್ಕೆ ಹಚ್ಚಿದರೆ ಉರಿ ಕಡಿಮೆಯಾಗಿ ಗಾಯ ವಾಸಿಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next