Advertisement
ಜೇನುಹುಳುಗಳು ಹೂವಿನ ಮಕರಂದ ಹೀರುವ ಮೂಲಕ ಜೇನುತುಪ್ಪ ಉತ್ಪತ್ತಿ ಮಾಡುತ್ತವೆ. ಇದನ್ನು ಸೌಂದರ್ಯವರ್ಧಕ, ಔಷಧಿಗಳು ಹಾಗೂ ಪೋಷಕಾಂಶವರ್ಧಕ ಉತ್ಪನ್ನಗಳ ತಯಾರಿಕೆಯಲ್ಲಿ ಹೆಚ್ಚು ಬಳಸುತ್ತಾರೆ.
Related Articles
Advertisement
ರೋಗನಿರೋಧಕ ಶಕ್ತಿ ಹೆಚ್ಚಳ:
ಪ್ರತಿದಿನ ಜೇನುತುಪ್ಪ ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಕೊರತೆ ನೀಗಿಸಿಕೊಳ್ಳಬಹುದು. ಇದರಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಗುಣವಿದ್ದು, ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಟೈಪ್ 2 ಡಯಾಬಿಟಿಸ್, ಹೃದಯದ ಸಮಸ್ಯೆ, ಬಾಲನೆರೆ ಮುಂತಾದ ಸಮಸ್ಯೆಗೂ ಜೇನುತುಪ್ಪ ಸೇವನೆ ಉತ್ತಮ ಪರಿಹಾರ.
ಹೃದಯದ ಸಮಸ್ಯೆ:
ಹೃದಯದ ಸಮಸ್ಯೆಗಳಿಗೆ ಜೇನುತುಪ್ಪ ಪರಿಹಾರ. ಅಧ್ಯಯನವೊಂದರ ಪ್ರಕಾರ ಇದು ಹೃದಯ ಬಡಿತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ. ರಕ್ತದಲ್ಲಿ ಕೊಬ್ಬಿನಂಶ ಹೆಚ್ಚು ಮಾಡುವುದು ಮಾತ್ರವಲ್ಲ, ಉತ್ತಮ ರಕ್ತನಾಳಗಳ ಪುರ್ನಚೇತನಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಸಂಪೂರ್ಣ ದೇಹದ ಆರೋಗ್ಯ ಸುಧಾರಿಸುವ ಜೊತೆಗೆ ಹೃದಯದ ಕಾರ್ಯಚಟುವಟಿಕೆಯೂ ಸುಧಾರಿಸುತ್ತದೆ.
ವಸಡಿನ ಸಮಸ್ಯೆಗೆ
ಜೇನುತುಪ್ಪದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಹಾಗೂ ನಂಜು ನಿವಾರಕ ಗುಣ ಹಲವು ಚಿಕಿತ್ಸೆಗಳಿಗೆ ಉಪಯೋಗವಾಗಲಿದೆ. ಇದು ಗಾಯಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ. ವಸಡಿನಲ್ಲಿ ಕೀವು, ರಕ್ತ ಸೋರುವುದು ಮುಂತಾದ ಹಲ್ಲು ಹಾಗೂ ವಸಡಿನ ಸಮಸ್ಯೆಗೆ ಪರಿಹಾರ ಜೇನುತುಪ್ಪ. ಇದನ್ನು ಪ್ರತಿನಿತ್ಯ ಬಳಸುವುದರಿಂದ ವಸಡಿನ ಹಲವು ಸಮಸ್ಯೆ ನಿವಾರಿಸುತ್ತದೆ.
ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ
ಹಲವು ಔಷಧೀಯ ಗುಣಗಳನ್ನು ಹೊಂದಿರುವ ಜೇನುತುಪ್ಪ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಗಮನಶಕ್ತಿ ಹೆಚ್ಚಾಗಲು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಮೆದುಳಿನ ಆರೋಗ್ಯ ಸುಧಾರಿಸುವುದು ಮಾತ್ರವಲ್ಲ, ಆರೋಗ್ಯ ಸುಧಾರಣೆಗೆ ಇದನ್ನು ಸೇವಿಸಬಹುದು. ಇದು ಚಯಾಪಚಯ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚರ್ಮದ ಆರೋಗ್ಯಕ್ಕೆ
ಜೇನುತುಪ್ಪದಲ್ಲಿನ ಮಾಯಿಶ್ಚರೈಸರ್ ಹಾಗೂ ಪೋಷಣೆಯ ಗುಣದ ಕಾರಣದಿಂದ ಪ್ರತಿನಿತ್ಯ ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಹಲವು ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಒಣಚರ್ಮದ ಸಮಸ್ಯೆ ಹೊಂದಿರುವವರಿಗೆ ಇದು ಉತ್ತಮ ಮಾಯಿಶ್ಚರೈಸರ್ ರೂಪದಲ್ಲಿ ಕೆಲಸ ಮಾಡುತ್ತದೆ. ಕಚ್ಚಾ ಜೇನುತುಪ್ಪುವು ಚರ್ಮದ ರಂಧ್ರಗಳನ್ನು ತೆರವು ಮಾಡಲು ಸಹಾಯ ಮಾಡುತ್ತದೆ. ಒಡೆದ ಹಿಮ್ಮಡಿ ಹಾಗೂ ತುಟಿಗಳಿಗೂ ಇದನ್ನು ಹಚ್ಚಬಹುದು. ಯಾವುದೇ ರೀತಿಯ ಗಾಯ, ಸುಟ್ಟ ಗಾಯದ ಉರಿ ಕಡಿಮೆ ಮಾಡಲು, ಸುಟ್ಟ ಗಾಯ ಗುಣಪಡಿಸಲು ಹಾಗೂ ಸೋಂಕುಗಳನ್ನು ನೈಸರ್ಗಿಕವಾಗಿ ಗುಣಪಡಿಸುವ ಅಂಶ ಇದರಲ್ಲಿದೆ.
ಜೇನುತುಪ್ಪವನ್ನು ಸೇವಿಸುವಾಗ ಮಿತವಾದ ಅಭ್ಯಾಸ ಮಾಡುವುದು ಮುಖ್ಯ. ಪ್ರತಿದಿನ ಸುಮಾರು 50 ಮಿಲಿ ಜೇನುತುಪ್ಪ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು.
-ಕಾವ್ಯಶ್ರೀ