Advertisement
ಈ ಗಿಡಮೂಲಿಕೆಯ ಹೆಸರೇ ಸೂಚಿಸುವಂತೆ ಅಮೃತದಷ್ಟು ಶಕ್ತಿಯನ್ನು ಹೊಂದಿರುವ ಈ ಬಳ್ಳಿ ವಿವಿಧ ರೀತಿಯ ಸಮಸ್ಯೆಗಳಿಗೆ ಬಹುಬೇಗ ಪರಿಹಾರವನ್ನು ನೀಡುತ್ತದೆ. ಇದರ ಎಲೆಗಳು ಹೃದಯಾಕಾರವನ್ನು ಹೊಂದಿದ್ದು, ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿವೆ.
Advertisement
-ಅಮೃತಬಳ್ಳಿಯ ಪುಡಿ ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ಕಷಾಯ ತಯಾರಿಸಿ ದಿನಕ್ಕೆರಡು ಬಾರಿ ಕುಡಿದರೆ ಬೆನ್ನು ನೋವು ನಿವಾರಣೆಯಾಗುತ್ತದೆ.
-ಒಂದು ಹಿಡಿಯಷ್ಟು ಅಮೃತಬಳ್ಳಿಯ ಕಾಂಡ ಮತ್ತು ಎಲೆಗಳನ್ನು ಅರ್ಧ ಹಿಡಿಯಷ್ಟು ಒಂದೆಲಗದ ಸೊಪ್ಪಿನೊಂದಿಗೆ ಜಜ್ಜಬೇಕು ಇದಕ್ಕೆ ಒಂದು ಸಣ್ಣ ತುಂಡು ಅರಿಶಿಣವನ್ನು ಕುಟ್ಟಿ ಸೇರಿಸಬೇಕು ಇದನ್ನು ನಾಲ್ಕು ಲೋಟ ನೀರಿನೊಂದಿಗೆ ಬೆರೆಸಿ ಒಲೆಯ ಮೇಲಿಡಬೇಕು ಇದಕ್ಕೆ ಕಾಳುಮೆಣಸಿನಪುಡಿ, ಜೇಷ್ಠ ಮದ್ದಿನ ಪುಡಿ, ಶುಂಠಿಪುಡಿ, ಹಿಪ್ಪಲಿ ಪುಡಿಯನ್ನು ಅರ್ಧ ಚಮಚದಷ್ಟು ಹಾಕಿ ಕುದಿಸಿ ಕಾಲುಭಾಗ ಕ್ಕೆ ಇಳಿದ ಮೇಲೆ ದಿನಕ್ಕೆರಡು ಸಲದಂತೆ ಒಂದು ವಾರ ಸೇವಿಸಿದರೆ ಅಲರ್ಜಿ ತೊಂದರೆಗಳು ನಿವಾರಣೆಯಾಗುತ್ತದೆ.
-ಎರಡು ಚಮಚ ಅಮೃತಬಳ್ಳಿಯ ಚೂರ್ಣಕ್ಕೆ ಅರ್ಧ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ ಕಷಾಯ ತಯಾರಿಸಿ ಪ್ರತಿದಿನ ಎರಡು ಹೊತ್ತು ಕುಡಿದರೆ ಕೀಲು ನೋವು ಕಡಿಮೆಯಾಗುತ್ತದೆ.
-ಅಮೃತಬಳ್ಳಿ ಮತ್ತು ಹಸಿ ಶುಂಠಿಯನ್ನು ಜಜ್ಜಿ ನೀರಿನಲ್ಲಿ ಹಾಕಿ ಕುದಿಸಿ ಅರ್ಧಕ್ಕೆ ಇಳಿದ ಮೇಲೆ ಅದನ್ನು ಶೋಧಿಸಿ ಕುಡಿದರೆ ಸಂಧಿವಾತ ಮತ್ತು ಕಾಲು ನೋವು ಗುಣವಾಗುತ್ತದೆ. ಈ ಔಷಧಿಯನ್ನು ಒಂದು ತಿಂಗಳ ಕಾಲ ಸೇವನೆ ಮಾಡಬೇಕು.
-ಅಮೃತಬಳ್ಳಿಯನ್ನು ಜಜ್ಜಿ ಎರಡು ಲೋಟ ನೀರಿನಲ್ಲಿ ಹಾಕಿ ಕುದಿಸಿ ಅದು ಅರ್ಧ ಲೋಟಕ್ಕೆ ಇಳಿದ ಮೇಲೆ ಅದಕ್ಕೆ ಅರ್ಧ ಚಮಚ ಹರಳೆಣ್ಣೆಯನ್ನು ಬೆರೆಸಿ ದಿನಕ್ಕೆರಡು ಬಾರಿ ಕುಡಿದರೆ ಸಂಧಿವಾತ, ಕಾಲು ಬೆರಳುಗಳಲ್ಲಿ ನೋವುಂಟಾಗುವ ಕೆರೆತ ನಿವಾರಣೆಯಾಗುತ್ತದೆ.
-3 ಚಮಚ ಅಮೃತಬಳ್ಳಿ ರಸಕ್ಕೆ ಒಂದು ಚಮಚ ತುಪ್ಪ ಸೇರಿಸಿ ಸೇವಿಸಿದರೆ ಸಂಧಿವಾತ ದೂರವಾಗುತ್ತದೆ.
-ಒಂದೆರಡು ಹನಿ ಅಮೃತಬಳ್ಳಿಯ ರಸವನ್ನು ಕಿವಿಗೆ ಬಿಟ್ಟರೆ ಕಿವಿಯಲ್ಲಿರುವ ಗುಗ್ಗೆ ಈಚೆಗೆ ಬಂದು ಕಿವಿನೋವು ಕಡಿಮೆಯಾಗುತ್ತದೆ. ಹಾಗೂ ಕಿವಿ ಕೇಳದಿರುವಿಕೆ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.
-ಅಮೃತಬಳ್ಳಿಯ ,ಪುಡಿ ಒಣ ಶುಂಠಿಪುಡಿ ಮತ್ತು ಹಿಪ್ಪಲಿ ಪುಡಿಯನ್ನು ಬೆರೆಸಿ ಕಷಾಯ ತಯಾರಿಸಿ ಅದು ಅರ್ಧಕ್ಕೆ ಇಳಿದ ಮೇಲೆ ಜೇನುತುಪ್ಪ ಬೆರೆಸಿ ದಿನಕ್ಕೆ 2 ಬಾರಿ ಕುಡಿದರೆ ಅಗ್ನಿಮಾಂದ್ಯ ಸಮಸ್ಯೆ ನಿವಾರಣೆಯಾಗುತ್ತದೆ.
-ಅಮೃತಬಳ್ಳಿ ಶುಂಠಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಜಜ್ಜಿ ನಾಲ್ಕು ಲೋಟ ನೀರಿನಲ್ಲಿ ಹಾಕಿ ಕುದಿಸಿ ಅದು ಅರ್ಧಕ್ಕೆ ಇಳಿದಾಗ ದಿನಕ್ಕೆರಡು ಬಾರಿಯಂತೆ ಒಂದು ವಾರದ ಕಾಲ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
-ಅಮೃತಬಳ್ಳಿಯ ಕಷಾಯವನ್ನು ಬಾಣಂತಿಯರು ಸೇವಿಸುವುದರಿಂದ ಎದೆಹಾಲು ವೃದ್ಧಿಯಾಗುತ್ತದೆ.
-ಒಂದು ಚಮಚ ಅಮೃತಬಳ್ಳಿಯ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಒಂದು ವಾರಗಳ ಕಾಲ ಸೇವಿಸಿದರೆ ಆಮ್ಲೀಯತೆ ,ಹೊಟ್ಟೆ ಉಬ್ಬರ ಮೊದಲಾದ ಉದರ ಸಂಬಂದಿ ತೊಂದರೆಗಳು ನಿವಾರಣೆಯಾಗುತ್ತದೆ
-ಅಮೃತಬಳ್ಳಿಯ ಕಷಾಯಕ್ಕೆ ಬೆಲ್ಲ ಸೇರಿಸಿ ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
-ಒಂದು ಚಿಟಿಕೆ ಅಮೃತ ಸತ್ವ ಒಂದು ಚಿಟಿಕೆ ಸೈಂಧವ ಲವಣ ಒಂದು ಚಿಟಿಕೆ ಓಮದ ಪುಡಿ-ಅರ್ಧ ಚಿಟಿಕೆ ಇಂಗಿನ ಪುಡಿ ಸೇರಿಸಿ ಸೇವಿಸಿದರೆ ಹಸಿವಿಲ್ಲದಿರುವಿಕೆ, ಗ್ಯಾಸ್ಟ್ರಿಕ್ ನಿವಾರಣೆಯಾಗುತ್ತದೆ
-ಮಧುಮೇಹ ರೋಗಗಳು ಅಮೃತಬಳ್ಳಿಯ ಚೂರ್ಣವನ್ನು ನೀರಿನಲ್ಲಿ ಬೆರೆಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ
-ಅಮೃತಬಳ್ಳಿಯ ಒಂದು ತುಂಡನ್ನು ಬಾಯಿಯಲ್ಲಿ ಹಾಕಿಕೊಂಡು ಆಗಿದು ರಸವನ್ನು ನುಂಗುತ್ತಿದ್ದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
-ಒಂದು ಹೊತ್ತಿಗೆ ಮೂರು ಚಮಚೆ ಅಮೃತಬಳ್ಳಿ ರಸವನ್ನು ದಿನ ನಿತ್ಯ ಸೇವಿಸುತ್ತಾ ಬಂದರೆ ಕುಷ್ಟ ರೋಗ ನಿಯಂತ್ರಣಕ್ಕೆ ಬರುತ್ತದೆ.
-ಅಮೃತ ಬಳ್ಳಿಯ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ತಲೆನೋವು ನಿವಾರಣೆಯಾಗುತ್ತದೆ.
-ಅರ್ಧ ಚಮಚ ಅಮೃತಬಳ್ಳಿ ಸತ್ವವನ್ನು ಅರ್ಧ ಬಟ್ಟಲು ಹಾಲಿಗೆ ಸೇರಿಸಿ ಅದಕ್ಕೆ ಜೇನುತುಪ್ಪ ಅಥವಾ ಬೆಲ್ಲ ಬೆರೆಸಿ ಕುಡಿದರೆ ತಲೆನೋವು ವಾಸಿಯಾಗುತ್ತದೆ.
-ಅಮೃತಬಳ್ಳಿ ಚೂರ್ಣ ಮತ್ತು ಒಂದೆಲಗದ ಚೂರುಗಳನ್ನು ಎರಡು ಲೋಟ ನೀರಿಗೆ ಹಾಕಿ ಕುದಿಸಿ ಅರ್ಧಕ್ಕೆ ಇಳಿದ ಮೇಲೆ ದಿನಕ್ಕೆರಡು ಸಾಲದಂತೆ ಒಂದು ತಿಂಗಳ ಕಾಲ ಕುಡಿದರೆ ಮಾನಸಿಕ ಉದ್ವೇಗ ದೂರವಾಗುತ್ತದೆ
-ಅಮೃತಬಳ್ಳಿಯ ರಸ, ತುಳಸಿ ಎಲೆ ರಸ, ಬೇವಿನ ಎಲೆ ರಸವನ್ನು ಸೇರಿಸಿ ದಿನಕ್ಕೆ ಮೂರು ಸಲದಂತೆ ಒಂದು ತಿಂಗಳು ಕಾಲ ಸೇವಿಸಿದರೆ ಕ್ಯಾನ್ಸರ್ ರೋಗ ನಿಯಂತ್ರಣಕ್ಕೆ ಬರುತ್ತದೆ.
-ಅರ್ಧ ಬಟ್ಟಲು ಹಾಲಿಗೆ ಅರ್ಧ ಚಮಚ ಅಮೃತಬಳ್ಳಿ ಸತ್ವ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಿದರೆ ಕಣ್ಣುರಿ ಹೊರಟುಹೋಗುತ್ತದೆ
-ಒಂದು ಚಮಚ ಅಮೃತಬಳ್ಳಿ ರಸಕ್ಕೆ ಅರ್ಧ ಚಮಚ ಹಸುವಿನ ತುಪ್ಪ ಬೆರೆಸಿ ದಿನಕ್ಕೆರಡು ಬಾರಿ ಕುಡಿದರೆ ಅತಿ ಮೂತ್ರ ಸಮಸ್ಯೆ ನಿವಾರಣೆಯಾಗುತ್ತದೆ.
-ಮೂತ್ರ ಕಟ್ಟಿರುವವರು ಒಂದು ಲೋಟ ಎಳನೀರಿಗೆ 2 ಚಮಚ ಅಮೃತಬಳ್ಳಿ ರಸ, ಅರ್ಧ ಚಮಚ ಕಲ್ಲುಸಕ್ಕರೆ ಪುಡಿ, ಒಂದು ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ಕುಡಿದರೆ ಸಲಿಲವಾಗಿ ಮೂತ್ರ ವಿಸರ್ಜನೆಯಾಗುತ್ತದೆ
-ಜಜ್ಜಿದ ಅಮೃತಬಳ್ಳಿ ಮತ್ತು ಒಣದ್ರಾಕ್ಷಿಯನ್ನು ಎರಡು ಲೋಟ ನೀರಿಗೆ ಹಾಕಿ ಕುದಿಸಿ ಅರ್ಧಕ್ಕೆ ಇಳಿದ ಮೇಲೆ ದಿನಕ್ಕೆ ಎರಡು ಸಲದಂತೆ ಎರಡು ವಾರಗಳ ಕಾಲ ಸೇವಿಸಿದರೆ ಕಾಮಾಲೆ ಮತ್ತು ಪಿತ್ತಾಶಯದ ತೊಂದರೆಗಳು ನಿವಾರಣೆಯಾಗುತ್ತದೆ.
-ಅಮೃತಬಳ್ಳಿಯ ರಸಕ್ಕೆ ಜೇನುತುಪ್ಪ ಬೆರೆಸಿ ಖಾಲಿ ಹೊಟ್ಟೆಯಲ್ಲಿ 12 ದಿನಗಳ ಕಾಲ ಕುಡಿದರೆ ಕಾಮಾಲೆ ರೋಗ ವಾಸಿಯಾಗುತ್ತದೆ.
– ಅಮೃತಬಳ್ಳಿಯನ್ನು ಅರೆದು ಮೂಳೆಮುರಿತ ಜಾಗದಲ್ಲಿ ಪಟ್ಟು ಹಾಕಿದರೆ ಮೂಳೆ ಕೂಡಿಕೊಳ್ಳುತ್ತದೆ
ಆದರ್ಶ ಕೆ.ಜಿ