ಬೀದರ: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಒತ್ತಾಯಿಸಲು ಫೆ:17ರಂದು ಕರ್ನಾಟಕ ರಾಜ್ಯದ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಜಿಲ್ಲಾ ಮಟ್ಟದ ಸಮ್ಮೇಳನ, ನೌಬಾದನ ಸರಕಾರಿ ಸಮುದಾಯ ಭವನದಲ್ಲಿ ನಡೆಯಲಿದೆ.
ಸಂಘದ ಅಧ್ಯಕ್ಷೆ ಶ್ರೀಮತಿ ಶಕುಂತಲಾ ದಂಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ, ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಮಾಳಗೆ, ಆರೋಗ್ಯ ಸಹಾಯಕ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಹಿರೇಮಠ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೀದರ ಜಿಲ್ಲಾಧ್ಯಕ್ಷ ರಾಜೇಂದ್ರ ಗಂದಗೆ ಅವರು ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವೇತನ ತಾರತಮ್ಯ ಸರಿಪಡಿಸಬೇಕು. ಎಚ್ ಆರ್‌ಎಂಎಸ್ ಸಮಸ್ಯೆ ನಿವಾರಣೆಗಾಗಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳ ನೇಮಕ ಮಾಡಬೇಕು. ಗ್ರಾಮೀಣ ಭತ್ಯೆ, ವಿಶೇಷ ಭತ್ಯೆ ನೀಡುವುದು ಪದನಾಮ ಬದಲಾವಣೆ, ಪ್ರತಿ ತಿಂಗಳ 5ನೇ ತಾರೀಖೀನೊಳಗಾಗಿ ವೇತನ ಬಟವಾಡೆ ಮಾಡಬೇಕು. ಪ್ರವಾಸ ಭತ್ಯೆ 300ರಿಂದ 2000ರ ವರೆಗೆ ನೀಡಬೇಕು. ಕಿರಿಯ ಮಹಿಳೆಯರಿಗೆ ಸಮವಸ್ತ್ರ ಭತ್ಯೆ 250ರಿಂದ 1000ಗೆ ಏರಿಸಬೇಕು.
ಖಾಲಿ ಹುದ್ದೆ ಭರ್ತಿ ಮಾಡಬೇಕು. ನಾಮ್ಸ್ ಪದ್ಧತಿಯನ್ನು ರದ್ದುಗೊಳಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಹಿರಿಯ ಆರೋಗ್ಯ ಸಹಾಯಕ, ಒಂದು ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯ ಹುದ್ದೆ ಸೃಷ್ಟಿಸುವುದು, 3000 ಜನ ಸಂಖ್ಯೆಗೆ ಒಂದು ಉಪಕೇಂದ್ರ ಸ್ಥಾಪಿಸಿ ಸಹಾಯಕರ ನೇಮಕಾತಿ ಮಾಡಬೇಕು. ಬಿಎಚ್‌ಇಒ ಹುದ್ದೆಗೆ ಪದನ್ನೋತ್ತಿ ನೀಡುವಾಗ ನಮ್ಮ ವೃಂದದವರಿಗೆ 100ಕ್ಕೆ 100 ಮೀಸಲಾತಿ ನೀಡಬೇಕು. ಎನ್‌ಪಿಎಸ್ ಯೋಜನೆ ರದ್ದುಪಡಿಸಿ ಹಳೆಯ ಪದ್ಧತಿ ಜಾರಿ ಮಾಡಬೇಕು. ಗುತ್ತಿಗೆ ಆಧಾರಿತವಾಗಿ ಕಾರ್ಯ ನಿರ್ವಹಿಸುತ್ತಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಕಾಯಂಗೊಳಿಸಬೇಕು. ಎಫ್‌ಎಸ್‌ಒ ಹುದ್ದೆಗೆ ಪದನ್ನೋತ್ತಿ ನೀಡುವಾಗ ವೃಂದದವರಿಗೆ ಶೇ.100 ಮೀಸಲಾತಿ ನೀಡಬೇಕು. ಜಿಲ್ಲೆಯಲ್ಲಿ ಸ್ಥಗಿತಗೊಂಡ ಕಿರಿಯ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ ಆರಂಭಿಸಬೇಕು. ಹಬ್ಬದ ಮುಂಗಡ ಹಣ ಇತರ ಭತ್ಯೆಗಳನ್ನು ಸಕಾಲಕ್ಕೆ ನೀಡಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.
ಫೆ:17ರಂದ ಬೆಳಗ್ಗೆ 10:30ಕ್ಕೆ ಸರಕಾರಿ ನೌಕರರ ಸಮುದಾಯ ಭವನದಲ್ಲಿ ನಡೆಯುವ ಜಿಲ್ಲಾಮಟ್ಟದ ಸಮ್ಮೇಳನದಲ್ಲಿ ಉದ್ಘಾಟಕರಾಗಿ ಸಂಘದ ರಾಜ್ಯದ್ಯಕ್ಷ ಕೆ.ಪ್ರಕಾಶ ಆಗಮಿಸುವರು. ಮುಖ್ಯ ಅಥಿತಿಗಳಾಗಿ ಶಾಸಕರ ರಹೀಂ ಖಾನ್, ಡಿಎಚ್‌ಒ ಎಂ.ಜಬ್ಟಾರ್, ಡಿಎಸ್ ಡಾ| ಸಿ.ಎಸ್.ರಗಟೆ, ಸಂಘದ ಗೌರವ ಅಧ್ಯಕ್ಷ ಪರಮರೆಡ್ಡಿ ಕಂದಕೂರ, ಕಾರ್ಯಾಧ್ಯಕ್ಷ ಬಿ.ಎ. ಕುಂಬಾರ, ಪ್ರಧಾನ ಕಾರ್ಯದರ್ಶಿ ಸುಧಾಬಾಯಿ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ನೀಲಾ ಕೆ. ಜಿಪಂ ಅಧ್ಯಕ್ಷತೆ ಭಾರತಬಾಯಿ ಸೇರಿಕಾರ ವೈದ್ಯಾಧಿಕಾರಿ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಡಾ| ಕಿರಣ ಎಂ.ಪಾಟೀಲ ಅವರು ಅತಿಥಿಗಳಾಗಿ ಆಗಮಿಸುವರು. ಎರಡು ಗೋಷ್ಠಿಗಳು ನಡೆಯಲಿವೆ ಎಂದರು
ತಾಲೂಕು ಅಧ್ಯಕ್ಷ ವಿಲ್ಸ್‌ನ್, ಭಾಲ್ಕಿ ಅಧ್ಯಕ್ಷರ ಸೋಮನಾಥ ತರನಳ್ಳಿ, ಹುಮನಾಬಾದ ಅಧ್ಯಕ್ಷ ಬಸಮ್ಮಾ, ಬಸವಕಲ್ಯಾಣ ಅಧ್ಯಕ್ಷ ದಿಲಿಪ್, ಔರಾದ ಅಧ್ಯಕ್ಷ ಸುನೀಲ, ಉಪಾಧ್ಯಕ್ಷ ಕಿಶನ ರಾಠೊಡ್ ಅವರು ಉಪಸ್ಥಿತರಿದ್ದರು.