Advertisement

ಆರೋಗ್ಯ,ಪೌಷ್ಟಿಕ ಸಮೀಕ್ಷೆಗೆ ಜನರ ನಕಾರ

02:32 PM Jun 17, 2023 | Team Udayavani |

ದೇವನಹಳ್ಳಿ: ಜೂನ್‌ ಒಂದರಿಂದ ರಾಜ್ಯದಲ್ಲಿ ಸರ್ಕಾರ ಜಾರಿ ಮಾಡಿರುವ ಆರೋಗ್ಯ ಮತ್ತು ಪೌಷ್ಟಿಕ ಸಮಸ್ಯೆ ಗ್ಯಾರಂಟಿ ಯೋಜನೆಗಳೇ ತೊಡಕುಂಟು ಮಾಡುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅವರ ಜಂಟಿ ಸಹಯೋಗದಲ್ಲಿ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆಗಳನ್ನು ಮಾಡಲಾಗುತ್ತಿದೆ.

Advertisement

ವಿವಿಧ ದಾಖಲಾತಿ ಮಾಡಿಸುವುದರಲ್ಲಿ ಮಗ್ನ: ಹೊಸದಾಗಿ ಬಂದಿರುವ ಕಾಂಗ್ರೆಸ್‌ ಸರ್ಕಾರ ಚುನಾ ವಣೆ ಪೂರ್ವದಲ್ಲಿ ಐದು ಗ್ಯಾರಂಟಿ ಯೋಜನೆ ಗಳನ್ನು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದರು. ಅದರಂತೆ ಒಂದೊಂದೇ ಗ್ಯಾರಂಟಿಗಳನ್ನು ಜಾರಿಗೊಳಿ ಸಲು ಸರ್ಕಾರ ಹೊರಟಿದೆ. ಒಂದೊಂದು ಗ್ಯಾರಂಟಿಗಳಿಗೂ ನಿಯಮಗಳನ್ನು ಮಾರ್ಪಾಡು ಮಾಡಿ ಜಾರಿಗೊಳಿ ಸಲು ಸರ್ಕಾರ ಹೊರಟಿದೆ. ಯಾವ ಗ್ಯಾರಂಟಿ ಗಳಲ್ಲಿ ತಮಗೆ ಕೈ ತಪ್ಪುತ್ತದೆ ಎಂಬ ಭಾವನೆಯಿಂದ ಜನರು ತಮಗೆ ಬೇಕಾಗುವ ದಾಖಲಾತಿಗಳನ್ನು ಒದಗಿಸಿಕೊಳ್ಳುವ ಕೆಲಸ ವನ್ನು ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ದಾಖಲಾತಿ ಮಾಡಿಸಲು ಜನ ವಿವಿಧ ಇಲಾಖೆ ಮತ್ತು ಆಧಾರ್‌ ಕಾರ್ಡ್‌ ವಿವಿಧ ದಾಖಲಾತಿ ಮಾಡಿಸು ವುದರಲ್ಲಿ ಮಗ್ನರಾಗಿದ್ದಾರೆ.

ಜನರ ಆರೋಗ್ಯ ಸುಧಾರಣೆ: ರಾಜ್ಯದಲ್ಲಿ ಜನರ ಆರೋಗ್ಯ ಸುಧಾರಣೆ ಹಿನ್ನೆಲೆಯಲ್ಲಿ ಇದೊಂದು ಪ್ರಮುಖ ಸಮೀಕ್ಷೆಯಾಗಿದೆ, ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಆರೋಗ್ಯ ಮತ್ತು ಮಹಿಳಾ ಇಲಾಖೆಗಳಿಗೆ ಸಹಕಾರಿಯಾಗುತ್ತದೆ. ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹಣೆಯಿಂದ ಗರ್ಭಿಣಿಯಲ್ಲಿ ರಕ್ತ ಹೀನತೆ, ಗರ್ಭಧಾರಣೆ ವೇಳೆ ಆರೋಗ್ಯ ಸಮಸ್ಯೆ, ಮಾನಸಿಕ ಅನಾರೋಗ್ಯ ಹಾಗೂ ಕುಟುಂಬಗಳಲ್ಲಿನ ಅನುವಂಶಿಕ ಕಾಯಿಲೆಗಳ ಪತ್ತೆಗೆ ಸಹಕಾರಿ ಯಾಗುತ್ತದೆ, ರಾಜ್ಯದ ಜನರ ಆರೋಗ್ಯ ಸ್ಥಿತಿಗತಿ ಯನ್ನು ಗುರುತಿ ವಿವಿಧ ಆರೋಗ್ಯ ಯೋಜನೆಗಳ ಜಾರಿಯಲ್ಲಿ ಈ ಸಮೀಕ್ಷೆ ಪ್ರಮುಖ ಪಾತ್ರ ವಹಿಸಲಿದೆ.

ಮಾಹಿತಿ ನೀಡಲು ಮಹಿಳೆಯರ ನಿರಾಕರಣೆ: ರಾಜ್ಯ ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳ ಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯಡಿ ಫ‌ಲಾನು ಭವಿಗಳಾಗಲು ಉತ್ಸುಕರಾಗಿರುವ ಮಹಿಳೆಯರು ಆರೋಗ್ಯ ಕಾರ್ಯಕರ್ತೆಯರು ಕೇಳುವ ರೇಷನ್‌ ಕಾರ್ಡ್‌, ಆಧಾರ್‌ ಮತ್ತಿತರ ಮಾಹಿತಿ ನೀಡಲು ನಿರಾ ಕರಿಸುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆ ಫ‌ಲಾನುಭವಿಗಳಾಗಲು ಸರ್ಕಾರ ಕೆಲವೊಂದು ಷರತ್ತು ಗಳನ್ನು ವಿಧಿಸಿರುವುದರಿಂದ ಆರೋಗ್ಯ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿದರೆ ಎಲ್ಲಿ ಗೃಹಲಕ್ಷ್ಮೀ ಯೋಜನೆ ಕೈ ತಪ್ಪು ವುದೋ ಎಂಬ ಆತಂಕ ಜನರದ್ದಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಮಾಹಿತಿ ನೀಡಲು ಸಾರ್ವ ಜನಿಕರು ಹಿಂದೇಟು ಹಾಕುತ್ತಿದ್ದು ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ ನಡೆಸುವುದು ಕಷ್ಟಸಾಧ್ಯ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಮನೆ ಯಜಮಾನಿಯೇ ಫ‌ಲಾನುಭವಿ: ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಫ‌ಲಾನುಭವಿ ಯಾಗುತ್ತಾರೆ ಎಂಬ ಷರತ್ತಿನ ಹಿನ್ನೆಲೆಯಲ್ಲಿ ಹಲವು ಮನೆಗಳಲ್ಲಿ ಅತ್ತೆ-ಸೊಸೆ ನಡುವೆ ಪೈಪೋಟಿ ಕಂಡು ಬರುತ್ತಿದೆ. ಮೊಬೈಲ್‌ ಆ್ಯಪ್‌ನಲ್ಲಿ ಡೇಟಾ ನಮೂದಿ ಸುವ ವೇಳೆ ನನ್ನನ್ನು ಯಜಮಾನಿ ಎಂದು ಬರೆದುಕೊಳ್ಳಿ ಎಂದು ಅತ್ತೆ-ಹಾಗೂ ಸೊಸೆ ಇಬ್ಬರೂ ಒತ್ತಡ ಹಾಕು ತ್ತಿರುವ ದೃಶ್ಯಗಳು ಸಾಮಾನ್ಯ ಎನ್ನು ವಂತಾಗಿದೆ. ರೇಷನ್‌ ಕಾರ್ಡ್‌ ಮಾಹಿತಿಯಂತೆ ಆ್ಯಪ್‌ ನಲ್ಲಿ ಡೇಟಾ ಎಂಟ್ರಿ ಮಾಡುತ್ತೇವೆ ಎಂದರೆ ಅದಕ್ಕೆ ಇಬ್ಬರೂ ಒಪ್ಪು ತ್ತಿಲ್ಲ. ಇದರಿಂದ ಅಂಥಹ ಮನೆಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವುದು ಸಾಧ್ಯವಿಲ್ಲ ಎಂಬು ದು ಆರೋಗ್ಯ ಕಾರ್ಯಕರ್ತೆಯರ ಅಳಲಾಗಿದೆ.

Advertisement

ಸಮೀಕ್ಷೆ ಆರಂಭದಲ್ಲೇ ವಿಘ್ನ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ (ಕೊಳಚೆ ಪ್ರದೇಶ)ಆಶಾ ಮತ್ತು ಅಂಗನಾಡಿ ಕಾರ್ಯಕರ್ತೆಯರು ಮೊಬೈಲ್‌ ಆ್ಯಪ್‌ ಮೂಲಕ ಸಮೀಕ್ಷೆ ನಡೆಸುವಂತೆ ಸರ್ಕಾರ ಹೊರಡಿ ಸಿರುವ ಸುತ್ತೋಲೆಯಂತೆ ಈಗಾಗಲೇ ಆರೋಗ್ಯ ಕಾರ್ಯಕರ್ತೆಯರು ಸಮೀಕ್ಷೆ ಆರಂಭಿಸಿದ್ದು, ಆರಂಭದಲ್ಲೇ ವಿಘ್ನ ಎದುರಾಗಿದೆ. ಮನೆ ಮನೆಗೆ ತೆರಳಿ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ ದಾಖಲು ಮಾಡಿ ಕೊಳ್ಳಲು ಮುಂದಾಗುವ ಕಾರ್ಯಕರ್ತೆ ಯರಿಗೆ ಜನ ರಿಂದ ತೀವ್ರ ವಿರೋಧ ವ್ಯಕ್ತ ವಾಗುತ್ತಿದೆ.

ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ ಬಗ್ಗೆ ಅನುಮಾನ : 2019ರಲ್ಲೇ ರಾಜ್ಯಾದ್ಯಂತ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ ನಡೆಸುವಂತೆ ಸರ್ಕಾರ ಆದೇಶಿಸಿತ್ತು. ಆದರೆ ಕೊರೊನಾ ಕಾರಣದಿಂದ ಯೋಜನೆ ಮುಂದೂಡಲ್ಪಟ್ಟಿತು. ನಂತರದಲ್ಲಿ ಎರಡನೇ ಬಾರಿ ಹೊಸದಾಗಿ ಚಾಲನೆಗೆ ಆದೇಶ ಬಂದಿತಾದರೂ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ಸ್ಥಗಿತಗೊಂಡಿತು. ಇದೀಗ 2023ನೇ ಸಾಲಿನಲ್ಲಿ ಆರೋಗ್ಯ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಜೂ.1ರಿಂದ ಸಮೀಕ್ಷೆ ಆರಂಭಿಸಿ ಮಾಸಾಂತ್ಯಕ್ಕೆ ಪೂರ್ಣ ಗೊಳಿಸುವಂತೆ ಆದೇಶಿಸಲಾಗಿದೆ. ಆದರೆ ಈ ಬಗ್ಗೆ ಎಲ್ಲಿಯೂ ವ್ಯಾಪಕ ಪ್ರಚಾರ ಮಾಡಿಲ್ಲ. ಇದರಿಂದ ಜನರಿಗೂ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇದರ ನಡುವೆ ಪ್ರಸ್ತುತ ಸನ್ನಿವೇಶದಲ್ಲಿ ನಡೆಯುತ್ತಿರುವ ಗ್ಯಾರಂಟಿ ಯೋಜನೆಗಳ ಗದ್ದಲದಿಂದ ಜನತೆ ಆರೋಗ್ಯ ಮತ್ತು ಪೌಷ್ಟಿಕ ಸಮೀಕ್ಷೆ ಬಗ್ಗೆ ಅನುಮಾನದ ನೋಟ ಬೀರುತ್ತಿದ್ದಾರೆ.

ಜನರಲ್ಲಿ ಈ ಸಮೀಕ್ಷೆ ಬಗ್ಗೆ ಸಾಕಷ್ಟು ಆತಂಕ, ಅನುಮಾನಗಳಿವೆ. ಸುಮಾರು 130 ಪ್ರಶ್ನೆಗಳಿಗೆ ಜನರಿಂದ ಉತ್ತರ ಪಡೆಯಬೇಕಿದೆ. ಕುಟುಂಬದ ಪ್ರಮುಖ ದಾಖಲೆಗಳನ್ನು ಆ್ಯಪ್‌ನಲ್ಲಿ ನಮೂದಿಸಬೇಕಿದೆ. ಆದರೆ ಜನರಿಂದ ಸ್ಪಂದನೆ ವ್ಯಕ್ತವಾಗುತ್ತಿಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೂ ತಂದಿದ್ದೇವೆ. – ನಾಗಲಕ್ಷ್ಮೀ, ರಾಜ್ಯ ಆಶಾ ಕಾರ್ಯ ಕರ್ತೆಯರ ಸಂಘದ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next