Advertisement
ದೇಶದ ಜನರ ಆರೋಗ್ಯ ರಕ್ಷಣೆ, ಬದಲಾದ ಜೀವನಶೈಲಿ, ಹವಾಮಾನ ಬದಲಾವಣೆಯಿಂದಾಗಿ ಜನರ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮ, ಯುವಜನತೆಯಲ್ಲಿ ದೇಹದಾರ್ಡ್ಯದ ಬಗೆಗೆ ಹೆಚ್ಚುತ್ತಿರುವ ಕಾಳಜಿ, ಜಂಕ್ ಫುಡ್ ಮೇಲಣ ಅತಿಯಾದ ವ್ಯಾಮೋಹ ಮತ್ತಿತರ ಎಲ್ಲ ವಿಷಯಗಳನ್ನು ಗಮನದಲ್ಲಿರಿಸಿ ಐಸಿಎಂಆರ್ ಈ ಆಹಾರ ಕ್ರಮದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದೇ ವೇಳೆ ಕಳೆದೊಂದು ದಶಕದಿಂದ ದೇಶದಲ್ಲಿ ಹಲವಾರು ಹಳೆಯ ಕಾಯಿಲೆಗಳು ಮರುಕಳಿಸಿರುವುದು, ಹೊಸ ಸಾಂಕ್ರಾಮಿಕ ಕಾಯಿಲೆಗಳು ಜನರನ್ನು ಬಾಧಿಸತೊಡಗಿರುವುದು ಮತ್ತು ಹದಿಹರೆಯದಲ್ಲೇ ಮಧುಮೇಹ, ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಆಹಾರ ಮಾರ್ಗಸೂಚಿ ಹೆಚ್ಚಿನ ಪ್ರಾಮುಖ್ಯವನ್ನು ಪಡೆದುಕೊಂಡಿದೆ. ಆಹಾರ ಕ್ರಮದ ಮಾರ್ಗಸೂಚಿಯಲ್ಲಿ ಆರೋಗ್ಯಕ್ಕೆ ಹಾನಿ ಉಂಟುಮಾಡುವ ಆಹಾರಗಳು ಮತ್ತು ಅವುಗಳ ಸೇವನೆಯಿಂದ ಮಾನವ ದೇಹದ ಅಂಗಾಂಗಗಳಿಗೆ ಎದುರಾಗಬಹುದಾದ ಅಪಾಯಗಳ ಬಗೆಗೂ ಜನರಿಗೆ ತಿಳಿವಳಿಕೆ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಆಹಾರ ಸೇವನೆಯ ಪ್ರಮಾಣ, ಯಾವೆಲ್ಲ ಆಹಾರಗಳನ್ನು ವರ್ಜಿಸಬೇಕು ಎಂಬ ಪಟ್ಟಿಯನ್ನೂ ಈ ಮಾರ್ಗಸೂಚಿ ಒಳಗೊಂಡಿದೆ. ಉಪ್ಪು ಮತ್ತು ಸಕ್ಕರೆಯನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೇವನೆ, ಸಂಸ್ಕರಿತ ಆಹಾರ ಸೇವನೆಗೆ ಕಡಿವಾಣ, ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್ ಇರುವ ಆಹಾರ ವಸ್ತುಗಳ ಸೇವನೆಯಿಂದ ದೂರವುಳಿಯಬೇಕು, ಸಮತೋಲಿತ ಆಹಾರ ಸೇವನೆ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸೂಕ್ತ ಎಂದು ಮಾರ್ಗಸೂಚಿಯಲ್ಲಿ ಜನರಿಗೆ ಕಿವಿಮಾತು ಹೇಳಲಾಗಿದೆ.
Advertisement
Health; ರೋಗಮುಕ್ತ ಸಮಾಜಕ್ಕಾಗಿ ಆರೋಗ್ಯಯುತ ಆಹಾರ ಕ್ರಮ
01:03 AM May 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.