Advertisement

ಶಾಲಾಯಲ್ಲೇ ಶಿಕ್ಷಕಿ ಜೊತೆ ಮುಖ್ಯ ಶಿಕ್ಷಕನ ರೋಮ್ಯಾನ್ಸ್ : ಗ್ರಾಮಸ್ಥರಿಂದಲೇ ಪ್ರಕರಣ ಬಯಲು

04:30 PM Apr 25, 2022 | Team Udayavani |

ಛತ್ತೀಸ್‍ಗಢ: ಶಾಲೆಯ ಕೊಠಡಿಯಲ್ಲೇ ಶಿಕ್ಷಕಿ ಜೊತೆ ಶಾಲಾ ಮುಖ್ಯ ಶಿಕ್ಷಕ ರಾಸಲೀಲೆಯಲ್ಲಿ ತೊಡಗಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದರ ಪರಿಣಾಮ ಶಾಲಾ ಮುಖ್ಯ ಶಿಕ್ಷಕನನ್ನು ಕರ್ತವ್ಯದಿಂದ ಅಮಾನತುಗೊಳಿಸಿರುವ ಘಟನೆ ನಡೆದಿದೆ.

Advertisement

ಛತ್ತೀಸ್‍ಗಢ ದ ಕಂಕೇರ್ ಜಿಲ್ಲೆಯ ಇಂದ್ರಪ್ರಸ್ಥ ಗ್ರಾಮದಲ್ಲಿರುವ ಸರಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ಮುಖ್ಯ ಶಿಕ್ಷಕನಿಗೆ ಈಗಾಗಲೇ ಮದುವೆಯಾಗಿದ್ದರೂ ತನ್ನ ಲೈಂಗಿಕ ಅಸೆ ಈಡೆರಿಸಿಕೊಳ್ಳಲು ಶಾಲೆಯಲ್ಲಿದ ಇತರ ಶಿಕ್ಷಕಿಯರನ್ನು ಬಳಸಿಕೊಳ್ಳುತ್ತಿದ್ದ, ಅಲ್ಲದೆ ತನ್ನ ಕಾಮಚೇಷ್ಟೆ ನಡೆಸಲು ಶಾಲೆಯ ಕೊಠಡಿಯನ್ನೆ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ, ಈ ವಿಚಾರ ಗ್ರಾಮಸ್ಥರ ಕಿವಿಗೂ ಬಿದ್ದಿದೆ. ಇದರಿಂದ ಕೆರಳಿದ ಗ್ರಾಮಸ್ಥರು ಶಾಲಾ ಮುಖ್ಯ ಶಿಕ್ಷಕನ ಅಕ್ರಮವನ್ನು ಬಯಲಿಗೆಳೆಯಬೇಕೆಂದು ನಿರ್ಧರಿಸಿ ಶಿಕ್ಷಕಿ ಜೊತೆ ರಾಸಲೀಲೆಯಲ್ಲಿ ತೊಡಗಿದ್ದಾಗ ಗೊತ್ತಾಗದಂತೆ ವಿಡಿಯೋ ಚಿತ್ರೀಕರಿಸಿದ್ದಾರೆ ಬಳಿಕ ಅದನ್ನು ಶಾಲಾ ಆಡಳಿತ ಮಂಡಳಿಗೆ ತೋರಿಸಿದ್ದಾರೆ. ಜೊತೆಗೆ ಮುಖ್ಯ ಶಿಕ್ಷಕನ ರಾಸಲೀಲೆಯ ವಿಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿದ್ದಾರೆ.

ಅತ್ತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ ಮುಖ್ಯ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿ ಸದ್ಯ ಪ್ರಕರಣ ತನಿಖೆ ಹಂತದಲ್ಲಿರುವ ಕಾರಣ ಶಾಲಾ ಮುಖ್ಯ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಹೇಳಿದೆ.

ಇದನ್ನೂ ಓದಿ :ಮಸೀದಿ ಬಳಿ ಕಚ್ಚಾ ಬಾಂಬ್ ಸ್ಫೋಟ : ಪಶ್ಚಿಮ ಬಂಗಾಳದಲ್ಲಿ ಐವರ ಬಂಧನ

ಗ್ರಾಮಸ್ಥರು ವಿಡಿಯೋ ಚಿತ್ರೀಕರಿಸಿದ ವಿಚಾರ ಗೊತ್ತಾಗುತ್ತಿದ್ದಂತೆ ಮುಖ್ಯ ಶಿಕ್ಷಕ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಗೆ ಹಣದ ಆಮಿಷವೊಡ್ಡಿರುವ ಸಂಗತಿಯೂ ಬೆಳಕಿಗೆ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next