Advertisement
ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ನಿಂದ ಡಿ.ಆರ್. ಪಾಟೀಲ, ಬಿಜೆಪಿಯಿಂದ ಶಿವಕುಮಾರ ಉದಾಸಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಬಹುಜನ ಸಮಾಜ ಪಕ್ಷದಿಂದ ಆಯೂಬಖಾನ್ ಪಠಾಣ, ಇಂಡಿಯನ್ ಲೇಬರ್ ಪಾರ್ಟಿಯಿಂದ ಶೈಲೇಶ ನಾಜರೆ ಅಶೋಕ, ಉತ್ತಮ ಪ್ರಜಾಕೀಯಾ ಪಾರ್ಟಿಯಿಂದ ಈಶ್ವರ ಪಾಟೀಲ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರರಾಗಿ ಬಸವರಾಜ ಶಂಕ್ರಪ್ಪ ದೇಸಾಯಿ, ರುದ್ರಯ್ಯ ಅಂದಾನಯ್ಯ ಸಾಲಿಮಠ, ವೀರಭದ್ರಪ್ಪ ವೀರಪ್ಪ ಕಬ್ಬಿಣದ, ಹನುಮಂತಪ್ಪ ದೇವೇಂದ್ರಪ್ಪ ಕಬ್ಟಾರ, ಮಂಜುನಾಥ ಕಲವೀರಪ್ಪ ಪಂಚಾನನ, ಚಂದ್ರಪ್ಪ ಅಡ್ಡಿಕಾರ, ಹಾಶಂಪೀರಾ ಇನಾಂದಾರ, ಮಖೂºಲ್ ಅಹ್ಮದ ಮುಲ್ಲಾ, ನಜೀರ್ ಅಹ್ಮದ್, ರಾಮಮಪ್ಪ ಸಿದ್ದಪ್ಪ ಬೊಮ್ಮಾಜಿ, ವೀರೇಶ ಮಲ್ಲಪ್ಪ ಕಿರವಾಡಿ, ಶಿದ್ದಪ್ಪ ಕಲ್ಲಪ್ಪ ಪೂಜಾರ, ಡಾ| ಟೀಪುಸಾಬ್ಹುಸೇನಸಾಬ್ ಕಲಕೋಟಿ, ಇಸ್ಮಾಯಿಲ್
ಮುತ್ತುಬಾಯಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಪಕ್ಷೇತರರಲ್ಲಿ ಯಾರು ಕಣದಲ್ಲಿ ಉಳಿದರೆ ಯಾರಿಗೆ ತೊಂದರೆಯಾಗುತ್ತದೆ. ಯಾರಿಗೆ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷಗಳು ತೊಡಗಿಕೊಂಡಿವೆ.ಯಾರಿಂದ ತೊಂದರೆಯಾಗುತ್ತದೆಯೋ ಅಂಥ ಅಭ್ಯರ್ಥಿಯನ್ನು ಕಣದಿಂದ ಹಿಂದಕ್ಕೆ ಸರಿಸಲು “ವಿವಿಧ ರೀತಿಯ’ ಪ್ರಯತ್ನವೂ ನಡೆಸಿದೆ. ಕೈಗೆ ತಲೆಬಿಸಿ: ನಾಮಪತ್ರ ಸಲ್ಲಿಸಿದವರಲ್ಲಿ ಆರು ಅಭ್ಯರ್ಥಿಗಳು ಮುಸ್ಲಿಮರಾಗಿರುವುದು ಕಾಂಗ್ರೆಸ್ ಗೆ ತಲೆಬಿಸಿಯಾಗಿದೆ. ಬಹುಜನ ಸಮಾಜ ಪಕ್ಷದಿಂದ ಆಯೂಬಖಾನ್ ಪಠಾಣ, ಪಕ್ಷೇತರರಾಗಿ ಹಾನಗಲ್ಲ ತಾಲೂಕಿನ ದ್ಯಾಮನಕೊಪ್ಪದ ಹಾಶಂಪೀರಾ ಇನಾಂದಾರ್, ರಾಮತೀರ್ಥ ಹೊಸಕೊಪ್ಪದ
ಮಖೂºಲ್ ಅಹ್ಮದ ಮುಲ್ಲಾ, ಸವಣೂರಿನ ನಜೀರ್ ಅಹ್ಮದ್, ರಾಣಿಬೆನ್ನೂರಿನ ಡಾ| ಟೀಪುಸಾಬ್ ಹುಸೇನಸಾಬ್ ಕಲಕೋಟಿ ಹಾಗೂ ಶಿಗ್ಗಾವಿಯ ಇಸ್ಮಾಯಿಲ್ ಮುತ್ತುಭಾಯ್ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಈ ಬಾರಿ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದೆ ಇರುವ ಅಸಮಾಧಾನವೇ ಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಮರು ನಾಮಪತ್ರ ಸಲ್ಲಿಸಲು
ಕಾರಣ ಎನ್ನಲಾಗುತ್ತಿದೆ. ಮುಸ್ಲಿಂ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆ
ಎಂಬ ಕೂಗು ಕಾಂಗ್ರೆಸ್‌ನಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಈ ಅಸಮಾಧಾನ ಶಮನಗೊಳಿಸುವ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅವರಿಗೆ ನೀಡಲಾಗಿದ್ದು, ಅವರು ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೋ ಕಾದು ನೋಡಬೇಕಿದೆ.
Related Articles
ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ ಸವಣೂರಿನ ನಜೀರ್ ಅಹ್ಮದ್ , ವೀರೇಶ ಕಿರವಾಡಿ ಹಾಗೂ ಇಸ್ಮಾಯಿಲ್ ಮುತ್ತಭಾಯ್ ಅವರ ನಾಮಪತ್ರ ತಿರಸ್ಕೃತಗೊಂಡಿವೆ. ಹೀಗಾಗಿ ಈಗ 19 ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳಲ್ಲಿ 16 ಜನರ ನಾಮಪತ್ರ ಕ್ರಮಬದ್ಧವಾಗಿದ್ದು, ಇವರಲ್ಲಿ ಎಷ್ಟು ಜನರು ನಾಮಪತ್ರ ಹಿಂದಕ್ಕೆ ಪಡೆಯುತ್ತಾರೆ ಎಂಬುದು ಏ. 8ರ ವರೆಗೆ ಕಾದುನೋಡಬೇಕಿದೆ.
Advertisement
ಎರಡನೇ ಬಾರಿ ಸ್ಪರ್ಧೆಪಕ್ಷೇತರರಾಗಿ ಈಗ ನಾಮಪತ್ರ ಸಲ್ಲಿಸಿದವರಲ್ಲಿ ಮೂವರು ಈ ಹಿಂದಿನ 2014ರ ಚುನಾವಣೆಯಲ್ಲಿಯೂ ನಾಮಪತ್ರ ಸಲ್ಲಿಸಿ,ಕಣದಲ್ಲಿ ಉಳಿದಿದ್ದರು. ಕಳೆದ ಬಾರಿ ಪಕ್ಷೇತರರಾಗಿ ಆಖಾಡದಲ್ಲಿದ್ದ ವೀರಭದ್ರಪ್ಪ ಕಬ್ಬಿಣದ ಕಳೆದ ಚುನಾವಣೆಯಲ್ಲಿ 1224, ಸಿದ್ದಪ್ಪ ಪೂಜಾರ15,656 ಹಾಗೂ ಹನುಮಂತಪ್ಪ ಕಬ್ಟಾರ 5997 ಮತಗಳನ್ನು ಪಡೆದಿದ್ದರು. ಎಲ್ಲ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದು ಜನರಿಗೆ ಉಚಿತ ಅಕ್ಕಿ, ಸಾಲ
ಮನ್ನಾದಂಥ ಪುಕ್ಕಟೆ ಸೌಲಭ್ಯ ಕೊಟ್ಟು ಜನರನ್ನು ಸೋಮಾರಿಯನ್ನಾಗಿ ಮಾಡುತ್ತಿವೆ. ಈ ಸೌಲಭ್ಯಗಳನ್ನು ಕೊಡುವುದು ಬಿಟ್ಟು ಎಲ್ಲ ಬಡವರಿಗೆ ವಾರ್ಷಿಕ ಒಂದು ಲಕ್ಷ ರೂ. ಆರ್ಥಿಕ ಸಹಾಯ ಮಾಡುವ ಮೂಲಕ ಎಲ್ಲರನ್ನು
ಬಡತನ ರೇಖೆಯಿಂದ ಮೇಲೆತ್ತಬೇಕು. ಎಲ್ಲ ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು ಎಂಬ ಉದ್ದೇಶದೊಂದಿಗೆ ಎರಡನೇ ಬಾರಿ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ ಬಾರಿ 1224 ಮತಗಳು ಬಿದ್ದಿದ್ದವು. ಈ ಬಾರಿ ಇನ್ನೂ ಹೆಚ್ಚು ಮತ ಬೀಳುವ ನಿರೀಕ್ಷೆ ಇದೆ.
ವೀರಭದ್ರಪ್ಪ ಕಬ್ಬಿಣದ, 2ನೇ ಬಾರಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿ