Advertisement

‘ಪತ್ನಿ ಪೀಡಿತರ ಸಂಘ’ದ ಮುಖ್ಯಸ್ಥ ಲೋಕಸಭೆಗೆ ಸ್ಪರ್ಧೆ!

09:00 AM Apr 04, 2019 | Team Udayavani |

ಅಹಮ್ಮದಾಬಾದ್‌: ರೈತ ಸಂಘದವರು, ಕಲಾವಿದರು, ಮಾಜೀ ಸೈನಿಕರು, ನಿವೃತ್ತ ಕ್ರೀಡಾಪಟುಗಳು ಹೀಗೆ ಸಮಾಜದ ವಿವಿಧ ವರ್ಗಗಗಳ ಜನರು ಚುನಾವಣೆಗೆ ನಿಲ್ಲುವುದನ್ನು ನೀವು ಕೇಳಿಯೇ ಇರುತ್ತೀರಿ. ಹಾಗೆಯೇ ಇಲ್ಲೊಬ್ಬರು ಪತ್ನಿ ಪೀಡಿತರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತನ್ನ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ!

Advertisement

‘ಆಖಿಲ ಭಾರತೀಯ ಪತ್ನಿ ಅತ್ಯಾಚಾರ ವಿರೋಧಿ ಸಂಘ’ (‘Akhil Bhartiya Patni Atyachar Virodhi Sangh’) ಎಂಬ ಸರಕಾರೇತರ ಸಂಘಟನೆಯನ್ನು (NGO) ನಡೆಸುತ್ತಿರುವ ಧಶರಥ್‌ ದೇವ್ದಾ ಎಂಬ ಮಹಾನುಭಾವನೇ ಚುನಾವಣೆಗೆ ಸ್ಪರ್ಧಿಸುತ್ತಿರುವ ವ್ಯಕ್ತಿ. ಈತ ಮಂಗಳವಾರದಂದು ಅಹಮ್ಮದಾಬಾದ್‌ ಉತ್ತರ ಲೋಕಸಭಾ ಕ್ಷೇತ್ರದಿಂದ ತನ್ನ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಮತ್ತು ತಾನು ಈ ಬಾರಿ ಸಂಸತ್ತಿಗೆ ಆಯ್ಕೆಗೊಂಡರೆ ತಮ್ಮ ತಮ್ಮ ಪತ್ನಿಯರಿಂದ ನೊಂದಿರುವ ಪುರುಷರ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುವುದಾಗಿ ಧಶರಥ್‌ ಭರವಸೆ ನೀಡಿದ್ದಾರೆ. ಸುಳ್ಳು ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿ ತಮ್ಮ ಪತ್ನಿ ಹಾಗೂ ಅವರ ಹೆತ್ತವರ ಕಡೆಯಿಂದ ಹಿಂಸೆ ಅನುಭವಿಸುವ ಪತಿ ಮಹಾಶಯರ ಪರವಾಗಿ ನನ್ನ ಹೋರಾಟ ಎಂದು ದಶರಥ್‌ ಅವರು ನಾಮಪತ್ರ ಸಲ್ಲಿಕೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ದಶರಥ್‌ ದೇವ್ದಾ ಅವರ ಈ ಎನ್‌.ಜಿ.ಒ. 69,000 ಸದಸ್ಯರನ್ನು ಹೊಂದಿದೆಯಂತೆ. ಇದು ದಶರಥ್‌ ಅವರಿಗೆ ಮೂರನೇ ಚುನಾವಣೆ. 2014ರ ಲೋಕಸಭೆ ಹಾಗೂ 2017ರಲ್ಲಿ ಗುಜರಾತ್‌ ವಿಧಾನಸಭೆಗೆ ಸ್ಪರ್ಧಿಸಿ ಸೋಲನುಭವಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕ್ರಮವಾಗಿ 2300 ಮತ್ತು 400 ಮತಗಳಷ್ಟೇ ಲಭಿಸಿದ್ದವು. ಆದರೆ ಛಲ ಬಿಡದ ದಶರಥ್‌ ಈ ಬಾರಿಯೂ ಪ್ರಧಾನಿ ಮೋದಿ ತವರಿನಿಂದ ‘ಹ್ಯಾಟ್ರಿಕ್‌’ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

‘ನನ್ನದು ಮನೆ ಮನೆ ಪ್ರಚಾರ, ನಾನು ಇತರರಂತೆ ಹಣದ ರಾಜಕೀಯ ಮಾಡುವುದಿಲ್ಲ. ಗಂಡಸರಿಗೂ ಸಮಾನ ಹಕ್ಕು ದೊರಕಿಸಿಕೊಡುವ ವಾಗ್ದಾನವನ್ನು ನನ್ನ ಮನೆಮನೆ ಭೇಟಿ ಪ್ರಚಾರ ಸಂದರ್ಭದಲ್ಲಿ ನೀಡುತ್ತಿದ್ದೇನೆ. ಐಪಿಸಿ ಸೆಕ್ಷನ್‌ 498 (ಗೃಹ ಹಿಂಸೆ) ಕಾಯ್ದೆಯನ್ನು ದುರ್ಬಲಕೆ ಮಾಡಿಕೊಂಡು ತಮ್ಮ ಪತ್ನಿ ಹಾಗೂ ಆಕೆಯ ಕುಟುಂಬ ಸದಸ್ಯರಿಂದ ಹಿಂಸೆ ನುಭವಿಸುತ್ತಿರುವ ಗಂಡಂದಿರ ಪರವಾಗಿ ನನ್ನ ಧ್ವನಿ ಇರುತ್ತದೆ ಎಂದು ದಶರಥ್‌ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಗೃಹ ಹಿಂಸೆ ಕಾನೂನನ್ನು ಪರಿಷ್ಕರಿಸಬೇಕಾದ ಅಗತ್ಯತೆಯನ್ನೂ ಸಹ ದಶರಥ್‌ ಅವರು ಒತ್ತಿ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next