Advertisement
ಸಂಸತ್ ಸಮಿತಿ ವಿಚಾರಣೆ: ಒಬ್ಬ ಕಪ್ಪು ವರ್ಣೀಯ ಸಮು ದಾಯದ ವ್ಯಕ್ತಿಯ ಪ್ರಾಣದ ಬೆಲೆ ಎಷ್ಟು? ಕೇವಲ 20 ಡಾಲರ್ ಅಲ್ಲವೇ? ಇದು ಪೊಲೀಸರ ದೌರ್ಜನ್ಯಕ್ಕೆ ಬಲಿ ಯಾದ ಜಾರ್ಜ್ ಫ್ಲಾಯ್ಡರ ಸಹೋದರ ಫಿಲೋನಿಸ್ ಫ್ಲಾಯ್ಡ ಅಮೆರಿಕದ ಕಾಂಗ್ರೆಸ್‌ಗೆ ಕೇಳಿದ ಪ್ರಶ್ನೆ. ಫ್ಲಾಯ್ಡ ಹತ್ಯೆ ಕುರಿತು ಜನಪ್ರತಿನಿಧಿಗಳ ನ್ಯಾಯಾಂಗ ಸಮಿತಿ ಮೊದಲ ವಿಚಾರಣೆ ನಡೆಸಿದ ವೇಳೆ ಸಭಾಂಗಣದಲ್ಲಿ ಹಾಜ ರಿದ್ದ ಫಿಲೋನಿಸ್, ನನ್ನ ಅಣ್ಣನದ್ದು ಒಂದು ಹತ್ಯೆ ಮಾತ್ರವಲ್ಲ. ಆತನನ್ನು ಅಕ್ಷರಶಃ ನೇಣಿಗೆ ಹಾಕಲಾಗಿದೆ. ಆತನ ಸಾವು ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಸಮಿತಿ ಸದಸ್ಯರಿಗೆ ತಿಳಿಸಿದರು.
ಕೋಲ್ಕತಾ: ಪಶ್ಚಿಮ ಬಂಗಾಲದ ಬುದ್ವಾನ್ ಜಿಲ್ಲೆಯಲ್ಲಿ ಕಪ್ಪು ವರ್ಣೀಯರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಶಾಲೆಯೊಂದರ ಪೂರ್ವ ಪ್ರಾಥಮಿಕ ತರಗತಿಯ ಇಂಗ್ಲಿಷ್ ಪಠ್ಯ ಪುಸ್ತಕದಲ್ಲಿ “ಯು’ ಫಾರ್ ‘ಅಗ್ಲಿ’ ಎಂದು ನಮೂದಿಸಲಾಗಿದೆ. ಅದರ ಪಕ್ಕದಲ್ಲಿ ಕಪ್ಪು ವರ್ಣೀಯ ಸಮುದಾಯದ ವ್ಯಕ್ತಿಯ ಚಿತ್ರ ಮುದ್ರಿಸಿರುವುದಕ್ಕೆ ವಿದ್ಯಾರ್ಥಿಗಳ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಮ್ಮ ಮಕ್ಕಳ ಪಠ್ಯ ಪುಸ್ತಕದಲ್ಲಿ ಅಗ್ಲಿ ಪದದೊಂದಿಗೆ ಕಪ್ಪು ವ್ಯಕ್ತಿಯ ಚಿತ್ರ ಹಾಕಿರುವುದನ್ನು ಕಂಡ ಪೋಷಕರು, ಬುದ್ವಾನ್ ಶಾಲೆಯ ಆವರಣದಲ್ಲಿ ಬುಧವಾರ ಪ್ರತಿ ಭಟನೆ ನಡೆಸಿದರು. ಜೊತೆಗೆ ಸಂಪೂರ್ಣ ಪಠ್ಯಪುಸ್ತಕ ವನ್ನೇ ರದ್ದು ಮಾಡಿ, ಬೇರೊಂದು ಪಠ್ಯ ರಚಿಸುವಂತೆ ಆಗ್ರಹಿಸಿದರು. ಮಕ್ಕಳಲ್ಲಿ ವರ್ಣಭೇದ ಬೆಳೆಸುವ ಶಿಕ್ಷಣ ಇಲಾಖೆ ಕ್ರಮವನ್ನು ಖಂಡಿಸಿದರು.