ನವದಹೆಲಿ: ಇತ್ತೀಚಿಗಷ್ಟೆ ದೆಹಲಿಯಲ್ಲಿ 32 ವರ್ಷದ ಹುಡುಗನೊಬ್ಬ 80 ವರ್ಷದ ವರ್ಷದ ಮುದಕನ ವೇಷ ಹಾಕಿಕೊಂಡು ಪ್ರಯಾಣ ಮಾಡುವಾಗ ನಕಲಿ ಪಾಸ್ ಪೋರ್ಟ್ ನಿಂದಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ.
ಈಗ ಮತ್ತೆ ಅಂಥದ್ದೇ ನಕಲಿ ಪಾಸ್ ಪೋರ್ಟ್ ಸೃಷ್ಟಿಸಿಕೊಂಡು ಕಳೆದ ಹತ್ತು ವರ್ಷದಿಂದ ಹಾಂಗ್ ಕಾಂಗ್ ದೇಶಕ್ಕೆ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್ ಪ್ರಾಂತ್ಯದ ಮೋಗ ಜಿಲ್ಲೆಯ ಗುರುದೀಪ್ ಸಿಂಗ್ ಎನ್ನುವ ವ್ಯಕ್ತಿ ವಿಮಾನ ನಿಲ್ದಾಣದಲ್ಲಿ ತನಿಖಾಧಾರಿ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಪಾಸ್ ಪೋರ್ಟ್ ಹಾಗೂ ಸುಳ್ಳು ದಾಖಲೆಗಳನ್ನು ಹೊಂದಿರುವುದು ತಿಳಿದು ಬಂದಿದೆ. ಕರ್ನೈಲ್ ಸಿಂಗ್ ಹೆಸರಿನಲ್ಲಿ ಪಾಸ್ ಪೋರ್ಟ್ ಹೊಂದಿರುವ ಗುರುದೀಪ್ ಸಿಂಗ್ ಬಗ್ಗೆ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.ಈ ವೇಳೆಯಲ್ಲಿ ಗುರುದೀಪ್ ಸುಳ್ಳು ದಾಖಲೆ ಹೊಂದಿರುವುದು ತಿಳಿದು ಬಂದಿದೆ. ಆ ಕೊಡಲೇ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆಯಲ್ಲಿ ಗುರುದೀಪ್ ಸಿಂಗ್ ತನ್ನ ಅಸಲಿಯತ್ತನ್ನು ಬಾಯಿ ಬಿಟ್ಟಿದ್ದಾನೆ. ತಾನು ಮೊದಲ ಬಾರಿಗೆ 1995 ರಲ್ಲಿ ಹಾಂಗ್ ಕಾಂಗ್ ಭೇಟಿ ನೀಡಿದ್ದೆ ಅದು ನನ್ನ ಅಸಲಿ ಪಾಸ್ ಪೋರ್ಟ್ ನಿಂದ , ನಂತರ ಅಲ್ಲಿಗೆ ಸಾಮಾನ್ಯವಾಗಿ ಪ್ರಯಾಣ ಬೆಳೆಸುತ್ತಿದ್ದೆ. ಆದರೆ ಆ ಸಮಯದಲ್ಲಿ ತನಗೆ ಅಲ್ಲಿನ ಶಾಶ್ವತ ಗುರುತಿನ ಚೀಟಿಯನ್ನು ಪಡೆಯಲು ಆಗಿಲ್ಲ. 2006 ರಲ್ಲಿ ಏಜೆಂಟ್ ವೊಬ್ಬ ಮಾಡಿ ಕರ್ನೈಲ್ ಸಿಂಗ್ ಎಂದು ಹೆಸರಿನ ನಕಲಿ ಪಾಸ್ ಪೋರ್ಟ್ ಮಾಡಿಕೊಟ್ಟ, ನಕಲಿ ಹೆಸರು ಹಾಗೂ ನಕಲಿ ಪಾಸ್ ಪೋರ್ಟ್ ಮೂಲಕ ನಾನು ಹಾಂಗ್ ಕಾಂಗ್ ದೇಶಕ್ಕೆ 2008 ರಿಂದ ಭೇಟಿ ನೀಡುತ್ತಿದ್ದೇನೆ ಅನ್ನುವ ಸತ್ಯವನ್ನು ವಿಚಾರಣೆಯ ವೇಳೆಯಲ್ಲಿ ಪೊಲೀಸರ ಎದುರು ಗುರುದೀಪ್ ಸಿಂಗ್ ಹೇಳಿದ್ದಾರೆ.