Advertisement

ದುಡಿದ ದುಡ್ಡಿನಲ್ಲಿ ಭುವನೇಶ್ವರಿ ದೇವಿ ಮೂರ್ತಿ ನಿರ್ಮಾಣ

11:42 AM Nov 02, 2019 | Suhan S |

ಮುಂಡರಗಿ: ಸಾರಿಗೆ ಸಂಸ್ಥೆ ಬಸ್‌ ಚಾಲಕರೊಬ್ಬರು ಸ್ವಂತ ದುಡಿಮೆ ಹಣದಿಂದ ಲಕ್ಷಾಂತರ ರೂ. ಖರ್ಚು ಮಾಡಿ ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿ ಮೂರ್ತಿ ನಿರ್ಮಿಸಿ ಕನ್ನಡದ ಹಿರಿಮೆ-ಗರಿಮೆ ಎತ್ತಿ ಹಿಡಿದಿದ್ದಾರೆ.

Advertisement

ಇಲ್ಲಿನ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಘಟಕದಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಈರಣ್ಣ ಸಂಗಪ್ಪ ಮೇಟಿ ಮೂಲತಃ ಹಿರೇವಡ್ಡಟ್ಟಿ ಗ್ರಾಮದವರು. ಕನ್ನಡ ನಾಡು-ನುಡಿಯ ಸಲುವಾಗಿ ಏನಾದರೂ ಅಳಿಲು ಸೇವೆ ಸಲ್ಲಿಸುವ ದೃಢ ಸಂಕಲ್ಪ ಮಾಡಿಕೊಂಡಿದ್ದರು. ಹೀಗಾಗಿ ಪ್ರತಿವರ್ಷ ನ. 1ರಂದು ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭ ಸಾರಿಗೆ ಸಂಸ್ಥೆ ಬಸ್‌ನ್ನು ಹೂವುಗಳಿಂದ ಶೃಂಗರಿಸಿ, ಧ್ವನಿವರ್ಧಕ ಹಚ್ಚಿಕೊಂಡು ಕನ್ನಡ ಭಾಷೆಯ ಸ್ವಾಭಿಮಾನ ಎತ್ತಿ ಹಿಡಿಯುವ ಕನ್ನಡದ ಹಾಡುಗಳನ್ನು ಪ್ರಯಾಣಿಕರಿಗೆ ಕೇಳಿಸುತ್ತಿದ್ದರು. ಈ ವರ್ಷ ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿ ಮೂರ್ತಿ ನಿರ್ಮಿಸಿದ್ದಾರೆ.

ತಮ್ಮ ಸ್ವಂತ ದುಡಿಮೆಯ ಹಣ ಕೂಡಿಸಿ ಮೂರ್ತಿಯ ನಿರ್ಮಾಣ ಮಾಡಿದ್ದಾರೆ. ಸ್ಟೀಲ್‌ ಮತ್ತು ಫೈಬರ್‌ ನಿಂದ 1.20 ಲಕ್ಷ ರೂ. ವೆಚ್ಚದಲ್ಲಿ ಕನ್ನಡತಾಯಿ ಭುವನೇಶ್ವರಿ ಮೂರ್ತಿ ತಯಾರಿಸಿದ್ದಾರೆ. ನ. 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ನೂತನವಾಗಿ ನಿರ್ಮಿಸಲಾದ ತಾಯಿ ಭುವನೇಶ್ವರಿ ದೇವಿ ಮೂರ್ತಿಯನ್ನು ಬಸ್‌ ಮುಂಭಾಗದಲ್ಲಿಟ್ಟು ಹೂವುಗಳಿಂದ ಅಲಂಕರಿಸಿ, ಜ| ನಾಡೋಜ ಡಾ| ಅನ್ನದಾನೀಶ್ವರ ಸ್ವಾಮೀಜಿ ಅಮೃತ ಹಸ್ತದಿಂದ ಸಾರಿಗೆ ಘಟಕದಲ್ಲಿ ಸಹದ್ಯೋಗಿಗಳ ಜೊತೆ ಕೂಡಿಕೊಂಡು ಪೂಜಿಸಿ, ಮೆರವಣಿಗೆ ಮಾಡಿದ್ದಾರೆ.

 

-ಹು.ಬಾ. ವಡ್ಡಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next