Advertisement

ಧೋನಿ ಆಧಾರ್‌ ಟ್ವೀಟ್‌ ಮಾಡಿದ ನೋಂದಣಿ ಸಂಸ್ಥೆ!

08:22 AM Mar 31, 2017 | |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿಯವರ ಆಧಾರ್‌ ಸಂಖ್ಯೆಯನ್ನು ರಾಂಚಿಯಲ್ಲಿನ ನೋಂದಣಿ ಸಂಸ್ಥೆಯೊಂದರ ಸಿಬ್ಬಂದಿ ಟ್ವೀಟ್‌ ಮೂಲಕ ಬಹಿರಂಗಪಡಿಸಿದ್ದಾರೆ. ಇದು ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಸಿದೆ. ಧೋನಿಯನ್ನು ನೋಂದಣಿ ಸಂದರ್ಭದಲ್ಲಿ ನೋಡಿದ ಉತ್ಸಾಹದಲ್ಲಿ ಸಿಬ್ಬಂದಿ ಧೋನಿ ಚಿತ್ರದ ಸಮೇತ ಅವರ ಆಧಾರ್‌ ಸಂಖ್ಯೆಯನ್ನು ಟ್ವೀಟ್‌ ಮಾಡಿದ್ದಾರೆ. 

Advertisement

ಇದನ್ನು ಧೋನಿ ಪತ್ನಿ ಸಾಕ್ಷಿ ಸಿಂಗ್‌ ಕಟುವಾಗಿ ಪ್ರಶ್ನಿಸಿದ್ದಾರೆ. ಖಾಸಗಿ ಮಾಹಿತಿಯ ಸುರಕ್ಷತೆ ಸಾಧ್ಯವೇ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ರವರಿಗೇ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರವಿಶಂಕರ್‌ ಪ್ರಸಾದ್‌, ರಾಂಚಿಯಲ್ಲಿನ ಸಿಬ್ಬಂದಿ ಧೋನಿಯನ್ನು ನೋಡಿದ ಉತ್ಸಾಹದಲ್ಲಿ ಈ ಕೃತ್ಯ ಮಾಡಿದ್ದಾರೆ. ಆದರೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇದಕ್ಕೆ ಕಾರಣವಾದ ಏಜೆನ್ಸಿಯನ್ನು 10 ವರ್ಷಗಳ ಮಟ್ಟಿಗೆ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಕೋಲಾಹಲ: ಈ ಘಟನೆ ರಾಜ್ಯಸಭೆಯಲ್ಲಿ ಚರ್ಚೆಗೆ  ಕಾರಣವಾಯಿತು. “ಪ್ರತಿಷ್ಠಿತ ಕ್ರಿಕೆಟಿಗ ಧೋನಿ ಆಧಾರ್‌ ಸಂಖ್ಯೆಯನ್ನು ಆಧಾರ್‌ ನೋಂದಣಿ ಏಜೆನ್ಸಿಯೇ ಬಹಿರಂಗ ಪಡಿಸಿದೆ. ಹೀಗಿರುವಾಗ ಸಾರ್ವಜನಿಕರ ಆಧಾರ್‌ ಮಾಹಿತಿ
ಯನ್ನು ಸರ್ಕಾರ ಕಾಪಾಡುತ್ತದೆ ಎಂದು ನಂಬಲು ಹೇಗೆ ಸಾಧ್ಯ’ ಇದು ವಿತ್ತಸಚಿವ ಅರುಣ್‌ ಜೇಟ್ಲಿ ಅವರಿಗೆ ಮಾಜಿ ವಿತ್ತ ಸಚಿವ ಚಿದಂಬರಂ ಅವರು ಪ್ರಶ್ನಿಸಿದರು.  ಇದಕ್ಕೆ ಪ್ರತಿ ಕ್ರಿಯಿಸಿದ ಸಚಿವ ಅರುಣ್‌ ಜೇಟ್ಲಿ, “ಜಗತ್ತಿನಲ್ಲಿ ಏನನ್ನೂ ಹ್ಯಾಕ್‌ ಮಾಡಬಹುದು. ತಂತ್ರಜ್ಞಾನದಿಂದ ಮಾಹಿತಿ ಸುರಕ್ಷಿತವಾಗಿರಿಸಬಹುದು ಎಂಬ ಭ್ರಮೆ ಬೇಡ’ ಎಂದು ತಿರುಗೇಟು ನೀಡಿದರು.

ಆಗಿದ್ದೇನು?
* ರಾಂಚಿಯಲ್ಲಿನ ಆಧಾರ್‌ ನೋಂದಣಿ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಿದ್ದ ಧೋನಿ
* ಧೋನಿಯೊಂದಿಗಿನ ಚಿತ್ರ ಮತ್ತು ಆಧಾರ್‌ ಪುಟ ಟ್ವೀಟ್‌ ಮಾಡಿದ ಸಿಬ್ಬಂದಿ
* ಘಟನೆಯಿಂದ ಸಿಟ್ಟಾದ ಧೋನಿ ಪತ್ನಿ ಸಾಕ್ಷಿ ಘಟನೆಗೆ ಕಾರಣವಾದ ನೋಂದಣಿ
* ಸಂಸ್ಥೆಗೆ 10 ವರ್ಷ ನಿಷೇಧ

Advertisement

Udayavani is now on Telegram. Click here to join our channel and stay updated with the latest news.

Next