Advertisement

ಬದುಕಿನ ಉನ್ನತಿಗೆ ದಾರಿ ತೋರಿ ಗುರುವಾದರು

12:31 PM Sep 03, 2018 | |

ಒಬ್ಬ ಉತ್ತಮ ಶಿಕ್ಷಕ ಮೋಂಬತ್ತಿ ಇದ್ದಂತೆ. ಇದು ಇನ್ನೊಬ್ಬರಿಗೆ ಬೆಳಕು ಕೊಡುವುದಕ್ಕಾಗಿ ತನ್ನನ್ನು ತಾನೇ ಸುಟ್ಟುಕೊಳ್ಳುತ್ತೆ ಎನ್ನುವ ಮಾತಿದೆ. ಬದುಕಿಗೆ ದಾರಿ ತೋರುವ ಗುರುಗಳೆಂದರೆ ಎಲ್ಲರೂ ಗೌರವಿಸುತ್ತಾರೆ. ಜಗತ್ತಿನ ಗೌರವಾನ್ವಿತ ವೃತ್ತಿಗಳಲ್ಲಿ ಇದನ್ನೂ ಒಂದಾಗಿ ಪರಿಗಣಿಸಲಾಗಿದೆ. ಪ್ರತಿಯೊಬ್ಬರ ಸಾಧನೆಯ ಗುರುಗಳ ಮಾರ್ಗದರ್ಶನ, ಸ್ಫೂರ್ತಿಯ ಮಾತುಗಳು ಖಂಡಿತಾ ಇರುತ್ತದೆ. ನಮ್ಮ ದೇಶ ಕಂಡ ಉತ್ತಮ ಶಿಕ್ಷಕರು ಅನೇಕರಿದ್ದಾರೆ. ಅವರಲ್ಲಿ ಸರ್ವ ಶ್ರೇಷ್ಠರಿನಿಸಿಕೊಂಡವರು ಕೆಲವರು.

Advertisement

ಕಲಿಕೆ ನಿರಂತರವಾಗಿರಲಿ: ಡಾ| ಸರ್ವಪಲ್ಲಿ ರಾಧಾಕೃಷ್ಣನ್‌
‘ಯಾವಾಗ ನಾವು ನಮಗೆ ತಿಳಿದಿದೆ ಎಂದು ಭಾವಿಸುತ್ತೇವೋ ಆಗ ನಾವು ಕಲಿಯುವುದನ್ನು ನಿಲ್ಲಿಸುತ್ತೇವೆ’ ಎಂದವರು ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾದ ಡಾ| ಸರ್ವೆಪಲ್ಲಿ ರಾಧಾಕೃಷ್ಣನ್‌. ತತ್ವಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು, ಶಿಕ್ಷಣ ಕ್ಷೇತ್ರದಲ್ಲಿಯೂ ಅನೇಕ ಸುಧಾರಣೆಗಳನ್ನು ತಂದವರು. ‘ಪುಸ್ತಕಗಳು ಭವಿಷ್ಯಕ್ಕೆ ಸೇತುವೆ ನಿರ್ಮಿಸುವ ಸಾಧನಗಳು’ ಎಂದರು. ಬದುಕು ಉತ್ತಮವಾಗಲು ಜ್ಞಾನ  ಅತ್ಯವಶ್ಯಕ. ಕಲಿಕೆ ನಿರಂತರ. ಕಲಿಕೆ ನಿಂತಾಗ ಬೆಳವಣಿಗೆಯೂ ನಿಲ್ಲುತ್ತದೆ. ಅದಕ್ಕಾಗಿಯೇ, ನಮಗೆಲ್ಲ ತಿಳಿದಿದೆ ಎಂದುಕೊಳ್ಳದೆ, ನಿತ್ಯಕಲಿಕಾರ್ಥಿಯಾಗಿ ಉಳಿಯ ಬೇಕು. ಪುಸ್ತಕಗಳು ಜ್ಞಾನವನ್ನು ಒದಗಿಸುತ್ತವೆ. ಅವುಗಳ ಅಧ್ಯಯನ ಮಾಡಬೇಕು ಎಂಬುದು ಅವರ ಸಲಹೆಯಾಗಿದೆ. 
`A life of Joy and happiness
is possible only on the basis of
knowledge and science’  
ಎನ್ನುವ ಅವರ ಮಾತಿನಲ್ಲಿ ಜ್ಞಾನದ ಜತೆಗೆ ವಿಜ್ಞಾನಕ್ಕೂ ಮಹತ್ವ ಕಂಡು ಬರುತ್ತದೆ. ಜ್ಞಾನ ಇದ್ದಾಗ ಸಂತೋಷದ ಬದುಕು ನಮ್ಮದಾಗುತ್ತದೆ ಏಕೆಂದರೆ ಜ್ಞಾನವನ್ನು ಹಿಂಬಾಲಿಸಿ ಕೀರ್ತಿ, ಧನ, ಸ್ಥಾನಮಾನ, ಸಂತೋಷ ಇತ್ಯಾದಿ ಲಭಿಸುತ್ತವೆ. ಬದುಕಿನ ಕುರಿತ ಜ್ಞಾನ- ಅಂದರೆ ಅನುಭವ, ಓದಿನಿಂದ ಬರುವ ತಿಳಿವಳಿಕೆ ಜತೆಗೆ ಅರಿವು, ತಿಳಿವಿನ ಮಿತಿಯನ್ನು ವಿಸ್ತಾರಗೊಳಿಸುವ ವಿಜ್ಞಾನ ಸದಾ ಮಹತ್ತರವಾ ದುದನ್ನು ಸಾಧಿಸಲು ನೆರವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next