Advertisement
ಇಂಪಾಲ್ ನ ಉರಿಪೋಕ್ ಖೈಡೆಮ್ ಲೈಕೈ ಪ್ರದೇಶದ ಲೋಯಿಯಾ ತನ್ನ ಕೈಯಲ್ಲಿದ್ದ ಕೆಲಸವನ್ನು ಬಿಟ್ಟು, 300 ಎಕರೆಯ ಜಾಗದಲ್ಲಿ ಗಿಡಗಳನ್ನು ನೆಡುವ ಕಾಯಕವನ್ನು ಕಳೆದ 18 ವರ್ಷಗಳಿಂದ ಮಾಡುತ್ತಿದ್ದಾರೆ. ಮಣಿಪುರದ ಲಂಗೋಲ್ ಬೆಟ್ಟ-ಶ್ರೇಣಿಯಲ್ಲಿ ಇವರು ಬೆಳೆದ ಗಿಡಗಳು ಇಂದು ಬೃಹತ್ ಕಾಡಾಗಿ ಬೆಳೆದಿದೆ. ಈಗ ಲೋಯಿಯಾ ಬೆಳೆಸಿದ ಕಾಡನ್ನು ಪುನ್‌ಶಿಲೋಕ್ ಅರಣ್ಯ ಎಂದು ಗುರುತಿಸಲಾಗುತ್ತದೆ. ಈ ಅರಣ್ಯದಲ್ಲಿ ಸುಮಾರು 250ಕ್ಕೂ ಹೆಚ್ಚು ಜಾತಿಯ ಗಿಡ ಮರಗಳಿದ್ದು,25 ಕ್ಕೂ ಹೆಚ್ಚು ಬಗೆಯ ಬಿದಿರಿನ ಮರಗಳು ಬೆಳೆದು ನಿಂತಿವೆ. ತಾನು ಬೆಳೆಸಿದ ಗಿಡ ಮರಗಳ ಸೌಂದರ್ಯವನ್ನು ಹೆಚ್ಚಿಸಲು ಪ್ರಾಣಿ- ಪಕ್ಷಿಗಳ ಪ್ರಭೇದ ಹಾಗೂ ವಿವಿಧ ಹಾವುಗಳು ಬರುತ್ತವೆ ಎನ್ನುತ್ತಾರೆ ಲೋಯಿಯಾ.
Advertisement
ಕೆಲಸ ಬಿಟ್ಟು 18 ವರ್ಷಗಳಿಂದ ಗಿಡ-ಮರಗಳನ್ನು ನೆಟ್ಟು ಬೃಹತ್ ಕಾಡು ಬೆಳೆಸಿದ
10:02 AM Sep 01, 2019 | Suhan S |
Advertisement
Udayavani is now on Telegram. Click here to join our channel and stay updated with the latest news.