Advertisement

ಭಾರೀ ಮಳೆಯಲ್ಲೇ ಮಗನ ಶವವಿಟ್ಟು ರಾತ್ರಿ ಕಳೆದ ತಂದೆ

11:41 AM May 29, 2017 | Team Udayavani |

ಮೈಸೂರು: ಮನೆಯಲ್ಲಿ ಮೃತದೇಹವನ್ನು ಇಡದಿರುವಂತೆ ಮನೆ ಮಾಲಕಿ ತಗಾದೆ ತೆಗೆದಿದ್ದಕ್ಕೆ ಮಗನ ಕಳೆಬರವನ್ನು ಮಳೆಯ ನಡುವೆಯೇ ಸಾರ್ವಜನಿಕ ಸ್ಥಳದಲ್ಲಿರಿಸಿಕೊಂಡು ತಂದೆ ಕಣ್ಣೀರು ಹಾಕಿದ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.

Advertisement

“ಜೀವ ಇರುವವರು ವಾಸಿಸಲಷ್ಟೇ ಮನೆ ಕೊಟ್ಟಿರುವುದು, ಹೆಣ ಇಡುವುದಕ್ಕೆಲ್ಲ ಅವಕಾಶ ನೀಡುವುದಿಲ್ಲ, ಎತ್ತಿಕೊಂಡು ಹೋಗಿ’ ಎಂದು ಹೇಳಿದ ಮನೆ ಒಡತಿಯ ಮುಂದೆ ಪರಿಪರಿಯಾಗಿ ಅಂಗಲಾಚಿದರೂ ಆಕೆಯ ಕಲ್ಲು ಹೃದಯ ಕರಗಲೇ ಇಲ್ಲ. ಇದರ ಪರಿಣಾಮ ಎಡೆಬಿಡದೆ ಸುರಿಯುತ್ತಿದ್ದ ಮಳೆ ನಡುವೆಯೂ ಮೃತ ದೇಹವನ್ನು ಸಾರ್ವಜನಿಕ ಸ್ಥಳದಲ್ಲಿರಿಸಿಕೊಂಡು ಕುಟುಂಬಸ್ಥರು ರಾತ್ರಿ ಕಳೆದಿದ್ದಾರೆ. ಕನಕಗಿರಿಯ ಮುನೇಶ್ವರ ನಗರದ ದಾûಾಯಿಣಿ ಎಂಬುವರ ಮನೆಯನ್ನು ವೀರ ಭದ್ರಪ್ಪ ಎಂಬುವರು 3 ಲಕ್ಷಕ್ಕೆ ಭೋಗ್ಯಕ್ಕೆ ಪಡೆದು ವಾಸಿಸುತ್ತಿದ್ದರು.

ವೀರಭದ್ರಪ್ಪಅವರ ಮಗ ಮಹೇಶ್‌ (40) ಅನಾರೋಗ್ಯಕ್ಕೀಡಾಗಿ ಶನಿವಾರ ಮೃತಪಟ್ಟಿದ್ದ,ಸಂಜೆಯಾಗಿದ್ದರಿಂದ ಭಾನುವಾರ ಅಂತ್ಯಸಂಸ್ಕಾರ ನೆರವೇರಿಸುವ ಸಲುವಾಗಿ ಮೃತದೇಹವನ್ನು ಮನೆಯ ಮುಂದೆ ಇರಿಸಲು ಕುಟುಂಬದವರು ಮುಂದಾದಾಗ ಮನೆ ಮಾಲಕಿ ಆಕ್ಷೇಪ ವ್ಯಕ್ತಪಡಿಸಿ ರಂಪಾಟ ನಡೆಸಿದಳು. ಇದರಿಂದ ವಿಧಿ ಇಲ್ಲದೆ ವೀರಭದ್ರಪ್ಪ ಕುಟುಂಬದವರು ಮೃತದೇಹವನ್ನು ಮನೆಗೆ ಅನತಿ ದೂರದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿರಿಸಿ ಕೊಂಡು ರಾತ್ರಿ ಕಳೆದಿದ್ದಾರೆ. ಭಾನುವಾರ ಬೆಳಗ್ಗೆ ಅಂತ್ಯಸಂಸ್ಕಾರ ನಡೆಸಲಾಗಿದೆ. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next