Advertisement
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬದಲಾವಣೆ ಆಗಲಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಅವರು ಗುರುವಾರ ‘ಉದಯವಾಣಿ’ ಜೊತೆ ತಮ್ಮ ಮನದಾಳದ ಮಾತು ಹಂಚಿಕೊಂಡರು.
Related Articles
Advertisement
ಪಕ್ಷದ ಬೆಳವಣಿಗೆಗೆ ಕಾರ್ಯಕರ್ತರ ಪ್ರಶ್ನೆಗೆ ಉತ್ತರ ಕೊಡುವಂತಿದ್ದರೆ ಎಲ್ಲರೂ ಕೈ ಜೋಡಿಸುತ್ತಾರೆ. ಜಿಲ್ಲೆಯಲ್ಲಿ ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರಾಗಿದ್ದವರು, ವಿವಿಧ ಹಂತದ ಜನಪ್ರತಿನಿ ಧಿಗಳೂ ಇದ್ದಾರೆ. ಎಲ್ಲರ ವಿಶ್ವಾಸ ಪಡೆದು ನೇಮಕಾತಿ ಆದರೆ ಪಕ್ಷದ ಬಲವರ್ಧನೆ ಹೆಚ್ಚು ಆಗುತ್ತದೆ ಎಂದರು.
ನನಗೆ ಹುದ್ದೆ ಕೊಡದಿದ್ದರೂ ಕೆಲಸ ಮಾಡುವೆ. ಪಕ್ಷಕ್ಕಾಗಿ ದುಡಿದು ಅವಕಾಶ ಸಿಗದೇ ಇರುವವರಿಗೆ ಆದ್ಯತೆ ಮೇಲೆ ಹುದ್ದೆ ಕೊಡಬೇಕು. -ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಬದಲಾವಣೆ ಅಥವಾ ಮುಂದುವರಿಕೆ!
ಜಿಲ್ಲಾ ಕಾಂಗ್ರೆಸ್‌ನ್ನು ಕಳೆದ ಮೂರು ಅವಧಿಗೂ ಹೆಚ್ಚುಕಾಲ ಸಕ್ರಿಯವಾಗಿ ಮುನ್ನಡೆಸಿಕೊಂಡು ಬಂದ ಜಿಲ್ಲಾ ಅಧ್ಯಕ್ಷ ಭೀಮಣ್ಣ ಅವರ ಬದಲಿಸಿ ಆ ಸ್ಥಾನಕ್ಕೆ ವೆಂಕಟೇಶ ಹೆಗಡೆ ಹೊಸಬಾಳೆ, ಸಾಯಿ ಗಾಂವಕರ್, ಶಿವಾನಂದ ಕಡತೋಕ, ರವೀಂದ್ರ ನಾಯ್ಕ ಹೆಸರು ಪ್ರಸ್ತಾಪ ಇದೆ. ಇನ್ನೊಂದು ಮೂಲದ ಪ್ರಕಾರ ಬರಲಿರುವದು ತಾ.ಪಂ., ಜಿ.ಪಂ, ವಿಧಾನಸಭೆ ಚುನಾವಣೆ ಆಗಿರುವದರಿಂದ ಅನುಭವಿ ಭೀಮಣ್ಣ ಅವರನ್ನೇ ಮುಂದುವರಿಸುತ್ತಾರೆ ಎಂಬ ಮಾಹಿತಿ ಕೂಡ ಇದೆ. ಆದರೆ, ರಾಜ್ಯ ಕಾರ್ಯದರ್ಶಿ ನೀಡಿದ್ದೇ ಬದಲಾಯಿಸಲು ಎಂಬ ಮಾತೂ ಕೇಳಿ ಬಂದಿದೆ.