ಮಂಗಳೂರು: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ದೊರೆಯಬೇಕು ಎಂಬ ಆಶಯದಲ್ಲಿ ಶ್ರೀನಿವಾಸ್ ಆಸ್ಪತ್ರೆಯ ಮೂಲಕ ಶ್ರೀನಿವಾಸ್ ಆರೋಗ್ಯ ಕಾರ್ಡನ್ನು ನೀಡುತ್ತಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಕುಲಾಪತಿ ಸಿ.ಎ.ರಾಘವೇಂದ್ರ ರಾವ್ ಹೇಳಿದರು.
ಅವರು ನಗರದ ಶ್ರೀನಿವಾಸ್ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿಭಾಗದ ವೈರಸ್ ರೋಗಗಳ ಕುರಿತ ವೈದ್ಯಕೀಯ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಶ್ರೀನಿವಾಸ್ ಆರೋಗ್ಯ ಕಾರ್ಡನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ಮುಂದುವರಿಕಾ ಶಿಕ್ಷಣಕ್ಕೆ ವಿಚಾರ ಗೋಷ್ಠಿಗಳು ಕಲಿಯುವಿಕೆಯ ಅವಿಭಾಜ್ಯ ಅಂಗವಾಗಿದ್ದು, ವೈದ್ಯರು ಸೇರಿದಂತೆ ಎಲ್ಲ ವೃತ್ತಿಯವರಿಗೆ ಇದು ಅನಿವಾ
ರ್ಯ. ಹಾಗಾಗಿ ಹೆಚ್ಚು ಹೆಚ್ಚು ಇಂತಹ ಗೋಷ್ಠಿಗಳು ಜರಗಿ ಹೆಚ್ಚು ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿ.ವಿ.ಯ ಕುಲಪತಿ ಡಾ| ಎ. ಶ್ರೀನಿವಾಸ್ ರಾವ್ ಮಾತನಾಡಿ, ವೈದ್ಯಕೀಯ ಗೋಷ್ಠಿಗಳನ್ನು ಏರ್ಪಡಿಸಿ ಕಾಯಿಲೆಗಳ ಕುರಿತು ಜನಜಾಗೃತಿ ಮೂಡಿಸಿ ಕಾಯಿಲೆ ಗಳಿಂದಾಗುವ ಪ್ರಾಣಾಪಾಯ ಗಳನ್ನು ತಪ್ಪಿಸುವಲ್ಲಿ ವೈದ್ಯ ಸಮುದಾಯ ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ದಂತ ವೈದ್ಯ ಕೀಯ ಕಾಲೇಜಿನ ಡೀನ್ ಡಾ| ಮನೋಜ್ ವರ್ಮಾ, ಮೆಡಿಕಲ್ ಕಾಲೇಜಿನ ಡೀನ್ ಡಾ| ಉದಯ ಕುಮಾರ ರಾವ್, ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ| ಪ್ರಮೋದ್ ಕುಮಾರ್, ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ| ಪ್ರದೀಪ್ ವರ್ಣೇಕರ್, ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನ ನಿರೀಕ್ಷಕ ಡಾ| ಎಂ. ಅಣ್ಣಯ್ಯ ಕುಲಾಲ್ ಉಳೂ¤ರು ಉಪಸ್ಥಿತರಿದ್ದರು.