Advertisement
ಕೊಡಾ¾ಣ್‌ಗುತ್ತು ಅಮರನಾಥ ಶೆಟ್ಟಿ ಅವರು ಮೊದಲ ಬಾರಿ ಸ್ಪರ್ಧಿಸಿದ್ದು 1972ರಲ್ಲಿ. ಆಗ ಸಂಸ್ಥಾಕಾಂಗ್ರೆಸ್ ಅಭ್ಯರ್ಥಿ. ಮುಂದೆ ಇದೇ ಪಕ್ಷ “ಜನತಾಪಕ್ಷ’ದಲ್ಲಿ ಮುಖ್ಯ ಘಟಕ ಪಕ್ಷವಾಯಿತು.
Related Articles
Advertisement
ಗೆದ್ದ ಮೂರು ಬಾರಿಯೂ ಸಚಿವರಾಗಿದ್ದರು.”ಪ್ರಥಮ ಚುನಾವಣೆಯಿಂದ ಈಗಿನ ಚುನಾವಣೆ ವರೆಗೆ ನೀವು ಗಮನಿಸಿರುವ ಮಹತ್ವದ ಬದಲಾವಣೆಗಳೇನು ?’ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು- “ಮೌಲ್ಯಗಳ ಪತನವಾಗುತ್ತಿರುವುದನ್ನು ಕಂಡಾಗ ದುಃಖ ವಾಗುತ್ತದೆ. ಆರಂಭಿಕ ದಿನಗಳಲ್ಲಿ ಚುನಾವಣಾ ಪ್ರಕ್ರಿಯೆಗಳು ಪವಿತ್ರ ಎಂಬಷ್ಟು ಬದ್ಧತೆಯನ್ನು ಹೊಂದಿದ್ದವು. ಪ್ರಾಮಾಣಿಕತೆ, ಸತ್ಯಸಂಧತೆ, ಪಾರದರ್ಶಕತೆ ಚುನಾವಣೆಗೆ ಹಬ್ಬದ ಸ್ವರೂಪ ಕೊಡುತ್ತಿದ್ದವು. ಆದರೆ ಈ ರೀತಿಯ ವಾತಾರಣ ಮರೆಯಾಗುತ್ತಿರುವುದು ಬೇಸರದ ಸಂಗತಿ’.
ಅಂದ ಹಾಗೆ …ಎಚ್.ಡಿ. ದೇವೇಗೌಡ ಅವರ ನೇತೃತ್ವದ ಜೆಡಿಎಸ್ ಪಕ್ಷವು ಈ ಬಾರಿಯೂ (2018)ಅಮರನಾಥ ಶೆಟ್ಟಿ ಅವರಿಗೆ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ಇದು 11ನೇ ಸ್ಪರ್ಧೆಯ ಇನ್ನೊಂದು ದಾಖಲೆಯೂ ಆಗಬಹುದಿತ್ತು. ಆದರೆ, ಶೆಟ್ಟಿ ಅವರು ಈ ಬಾರಿ ಸ್ಪರ್ಧಿಸಲು ಮುಂದಾಗಲಿಲ್ಲ. ಹೊಸಬರಿಗೆ ಅವಕಾಶ, ಆರೋಗ್ಯ ಮುಂತಾದ ಕಾರಣಗಳನ್ನು ಅವರು ನೀಡಿದ್ದಾರೆ. ಆದರೆ ಪಕ್ಷದ ಪರವಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. – ಮನೋಹರ ಪ್ರಸಾದ್