ಕಿನ್ನಿಗೋಳಿ: 50 ವರ್ಷಗಳಿಂದ ನಿರಂತರ ಯಕ್ಷಗಾನ ಬಯಲಾಟ ಸಮಿತಿಯ ಮೂಲಕ ಯಕ್ಷರಾಧನೆಯ ಉತ್ಸವ ನಡೆದಿದೆ. ಇದು ಭಕ್ತಿ ಹಾಗೂ ಕಲೆಯ ಸಮ್ಮಿಲನವಾಗಿದೆ ಇದು ಮುಂದಿನ ಪರಂಪರೆಗೂ ತಲುಪಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಗುರುವಾರ ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ 50ನೇ ವರ್ಷದ ಬಯಲಾಟದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತಾನಾಡಿ, ಕಟೀಲು ತಾಯಿಯ ಸೇವೆಯಲ್ಲಿ ಬಯಲಾಟ ಆಡಿಸಿಸುವುದು ಇಂದು ಮಹತ್ತರ ಸೇವೆಯಾಗಿದೆ. ಹತ್ತು ಸಮಸ್ತರು ಆಟ ಆಡಿಸುವುದು ಪರಂಪರೆಯ ಪ್ರತೀಕವಾಗಿದೆ. ಇನ್ನೂ ಮುಂದಕ್ಕೂ ಬೆಳಯಲಿ ಎಂದು ಶುಭ ಹಾರೈಸಿದರು.
ಕಳೆದ 50 ವರ್ಷದಿಂದ ಬಯಲಾಟ ಸಮಿತಿಯನ್ನು ಮುನ್ನಡೆಸಿದ ಶ್ರೀಧರ ಸುವರ್ಣ ಅವರನ್ನು ಗೌರವಿಸಲಾಯಿತು. ಶ್ರೀ ಕೇತ್ರ ಕಟೀಲಿನ ಆಡಳಿತ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಫಿಲೋಮಿನಾ ಸಿಕ್ವೇರ, ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಶಂಕರ ಬಿ. ಕೋಟ್ಯಾನ್, ದುರ್ಗಾ ಪ್ರಸಾದ್ ಹೆಗ್ಡೆ, ಜೊಸ್ಸಿ ಪಿಂಟೋ, ಅಶೋಕ ದೇವಾಡಿಗ, ಕುಶಲ ಪೂಜಾರಿ, ಸುನಿಲ್ ಭಟ್, ತಾರಾನಾಥ ಶೆಟ್ಟಿ , ಕೇಶವ ಕೋಟ್ಯಾನ್, ಸುಕುಮಾರ್, ರಾಮಣ್ಣ ಕುಲಾಲ್, ಮತ್ತಿತತರು ಉಪಸ್ಥಿತರಿದ್ದರು. ಭುವನಾಭಿರಾಮ ಉಡುಪ ಸ್ವಾಗತಿಸಿದರು. ಕೆ. ಬಿ. ಸುರೇಶ್ ಸಮ್ಮಾನಿತರ ಬಗ್ಗೆ
ಮಾತನಾಡಿದರು. ಶರತ್ ಕಾರ್ಯಕ್ರಮ ನಿರೂಪಿಸಿದರು.