Advertisement
ಅಧಿಕಾರಿಗಳ ತರಾಟೆ: ದಕ್ಷಿಣ ಕಾಶಿಯಲ್ಲೊಂದು ಸಸ್ಯ ಕಾಶಿ ನಿರ್ಮಿಸಬೇಕು ಎನ್ನುವ ಸದುದ್ದೇಶದಿಂದ ತಾವು ಕಪಿಲಾ ನದಿಯ ದಡದಲ್ಲಿರುವ ಕಂದಾಯ ಹಾಗೂ ತೋಟಗಾರಿಕಾ ಇಲಾಖೆಯಲ್ಲಿನ 26.5 ಎಕರೆ ಪ್ರದೇಶ ಗುರುತಿಸಿ 10 ಕೋಟಿ ರೂ.. ವೆಚ್ಚದ ನೀಲ ನಕ್ಷೆ ಸಿದ್ಧಪಡಿಸಿ ಆಗಲೇ 3 ಕೋಟಿ ರೂ.. ಹಣ ಬಿಡುಗಡೆ ಮಾಡಿಸಿ ಮುಖ್ಯಮಂತ್ರಿಗಳೇ ಬಂದು ಭೂಮಿ ಪೂಜೆ ನೆರವೇರಿಸಿದ್ದರು, ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಅದು ಸಸ್ಯ ಕಾಶಿಯಾಗದೇ ಮನೆ ಮುಂದಿನ ಕೈ ತೋಟವಾಗಿದೆ ಎಂದು ತೋಟಗಾರಿಕಾ ಅಧಿಕಾರಿಗಳನ್ನು ಪ್ರಸಾದ್ ತರಾಟೆಗೆ ತೆಗೆದುಕೊಂಡರು.
Related Articles
Advertisement
ಆದರ್ಶ ಗ್ರಾಮವಾಗಿ ದೇಬೂರು: ಈ ಬಾರಿ ಸಂಸದರ ಆದರ್ಶ ಗ್ರಾಮಕ್ಕೆ ತಾವು ನಗರದ ಹೊರವಲಯದ ದೇಬೂರು ಗ್ರಾಮವನ್ನು ಆಯ್ಕೆ ಮಾಡಿ ಕೊಂಡಿದ್ದು ಅದರ ಸಮಗ್ರ ಅಭಿವೃದ್ಧಿ ತಮ್ಮದಾಗಿದೆ ಎಂದು ತಿಳಿಸಿದರು
ನಗರ ವಿಸ್ತರಣೆ: ದೇಬೂರು ಹಾಗೂ ದೇವೀರಮ್ಮನಹಳ್ಳಿ ಪಂಚಾಯಿತಿಯ ಹಲವು ಪ್ರದೇಶಗಳು ನಗರಸಭೆಯ ವ್ಯಾಪ್ತಿಗೆ ಸೇರಬೇಕಾಗಿದ್ದು ಬರುವ ಪಂಚಾಯಿತಿ ಚುನಾವಣೆಯಲ್ಲಿ ನಗರಸಭೆಗೆ ಸೇರಲ್ಪಡುವ ಪ್ರದೇಶಗಳನ್ನು ಹೊರಗಿಟ್ಟು ಚುನಾವಣೆ ನಡೆಸಲು ಕ್ರಮ ಜರುಗಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳ ವಿರುದ್ಧ ಅಸಮಾಧಾನ: ಅಧಿಕಾರಿಗಳು ಸರ್ಕಾರದ ಆಸ್ತಿ ಪಾಸ್ತಿಗಳನ್ನು ಕಾಪಾಡಿಕೊಳ್ಳಬೇಕು, ಅಭಿವೃದ್ಧಿ ಕೆಲಸಗಳ ಪಟ್ಟಿ ತಯಾರಿಸಿ ಹಣ ಬಿಡುಗಡೆ ಮಾಡಿಸುವುದು ಜನಪ್ರತಿನಿಧಿಗಳಾದ ನಮ್ಮ ಕೆಲಸ ಆ ಹಣ ಲೂಟಿಯಾದರೆ ಸಾಮಗ್ರಿಗಳು ಕಾಣೆಯಾದರೆ ನಾವೇನು ಮಾಡಲು ಸಾಧ್ಯ ಬೇಲಿಯೇ ಎದ್ದು ಹೊಲ ಮೇಯ್ದರೆ ಏನು ಮಾಡೋಣ ಎಂದ ಅವರು, ಸಭೆಯಲ್ಲಿ ಅಧಿಕಾರಿಗಳ ಕಾರ್ಯ ವೈಖರಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ತಮ್ಮಲ್ಲಿರುವ ಸೋಮಾರಿತನ ಬಿಟ್ಟು ಕೆಲಸದಲ್ಲಿ ತೊಡಗಿಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ತಹಶೀಲ್ದಾರ್ ಮಹೇಶ ಕುಮಾರ್, ಜಿಪಂ ಸದಸ್ಯರಾದ ಮಂಗಳಾ ಸೋಮಶೇಖರ್, ದಯಾನಂದ ಮೂರ್ತಿ, ತಾಪಂ ಅಧ್ಯಕ್ಷ ಬಿ.ಎಸ್.ಮಹದೇವಪ್ಪ ಇತರರು ಇದ್ದರು.
ಮರಗಳ್ಳತನ ಹೊಸತೇನೂ ಅಲ್ಲ: ತಾಲೂಕು ಕ್ರೀಡಾಂಗಣದಲ್ಲಿದ್ದ ನಾಲ್ಕು ಕೊಠಡಿಗಳ 10 ಲಕ್ಷ ರೂ. ಬೆಲೆ ಬಾಳುವ ಸುಮಾರು 139 ತೇಗದ ಮರದ ಜಂತಿಗಳು ಕಾಣೆಯಾದ ವಿಷಯ ಸಭೆಯಲ್ಲಿ ಪ್ರಸ್ತಾಪಿಸಿದಾಗ ಇಲ್ಲಿ ಮರಗಳ್ಳ ತನ ಹೊಸತಲ್ಲ. ದಳವಾಯಿ ಶಾಲೆ ಹಾಗೂ ಪ್ರವಾಸಿ ಮಂದಿರದ ಬೆಲೆ ಬಾಳುವ ಮರಗಳು ಸಹ ಹಿಂದೆ ಕಾಣೆಯಾಗಿದ್ದವು ಈಗ ಕ್ರೀಡಾಂಗಣದ ಮರಗಳ್ಳತನ ನಡೆದಿದೆ ಅಧಿಕಾರಿಗಳ ಪಾತ್ರವಿಲ್ಲದೆ ಇದು ನಡೆಯಲು ಸಾಧ್ಯವೇ ಇಲ್ಲಾ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದು ಸಂಸದ ಪ್ರಸಾದ್ ಹೇಳಿದರು.