Advertisement

ಸುಧಾಕರ್‌ ವಿರುದ್ಧ ಎಚ್‌ಡಿಕೆ ವಾಗ್ಯುದ್ಧ

09:33 PM Nov 18, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ರೈತರ ಮಕ್ಕಳಿಗೆ, ಕೂಲಿ ಕಾರ್ಮಿಕರ ಮಕ್ಕಳಿಗೆ ಮೆಡಿಕಲ್‌ ಸೀಟು ಸಿಗಲಿ ಎನ್ನುವುದರ ಬದಲು ಕಮೀಷನ್‌ ಹೊಡೆಯಲು ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್‌ ಕಾಲೇಜ್‌ ಸ್ಥಾಪನೆಗೆ ಮಾಡಲಾಗುತ್ತಿದೆಯೆಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

Advertisement

ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಜೆಡಿಎಸ್‌ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಪರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದರಿಂದ ಹೊರ ರಾಜ್ಯದ ಮಕ್ಕಳಿಗೆ ಅನುಕೂಲವಾಗುತ್ತದೆ. ನೀಟ್‌ ಪರೀಕ್ಷೆಯಲ್ಲಿ ಯಾರು ಹೆಚ್ಚು ಅಂಕ ಗಳಿಸುತ್ತಾರೆ ಅವರಿಗೆ ಮೆಡಿಕಲ್‌ ಕಾಲೆಜಿನಲ್ಲಿ ಸೀಟ್‌ ಸಿಗುತ್ತದೆ. ಆದರೆ ಇವರು ಮಕ್ಕಳಿಗೆ ಅನುಕೂಲವಾಗಲಿ ಎಂದು ಮೆಡಿಕಲ್‌ ಕಾಲೇಜು ಕಟ್ಟುತ್ತಿಲ್ಲ ಕಮೀಷನ್‌ ಹೊಡೆಯಲು ಮೆಡಿಕಲ್‌ ಕಾಲೇಜು ಕಟ್ಟುತ್ತಿದ್ದಾರೆ ಎಂದು ಆರೋಪಿಸಿದರು.

ಅನರ್ಹ ಶಾಸಕ ಬಿಜೆಪಿ ಅಭ್ಯರ್ಥಿ ನಮಗೆಲ್ಲಾ ಬೆನ್ನಿಗೆ ಚೂರಿ ಹಾಕಿದ್ದಾರೆ ಹಾಗೂ ಅಕ್ರಮ ಹಣದ ದುರಹಂಕಾರದಿಂದ ಚಿಕ್ಕಬಳ್ಳಾಪುರ ವಿಧಾನಸಭೆಯ ಜನರನ್ನು ಹಣದಿಂದ ಕೊಂಡುಕೊಳ್ಳಬಹುದೆಂಬ ದುರ್ಬುದ್ಧಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದರು.

ಚಿಕ್ಕಬಳ್ಳಾಪುರದಲ್ಲಿ ಗಂಡಸರು ಇರಲಿಲ್ವಾ ಎಂದು ಭಾಷಣ ಮಾಡಿದ್ದಾರೆ ಚಿಕ್ಕಬಳ್ಳಾಪುರದಲ್ಲಿ ಗಂಡಸು ಅಭ್ಯರ್ಥಿ ಇರುವುದನ್ನು ಚಿಕ್ಕಬಳ್ಳಾಪುರದ ಜನತೆ ಹಲವಾರು ಬಾರಿ ಈ ಹಿಂದೆ ತೋರಿಸಿದ್ದಾರೆ. ಅನರ್ಹ ಶಾಸಕ ನಾನು ಮುಖ್ಯ ಮಂತ್ರಿಯಾಗಿದ್ದನ್ನು ಸಹಿಸಲಿಲ್ಲ. ನಾನು ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್‌ ಮನೆ ಬಾಗಿಲಿಗೆ ಹೋಗಲಿಲ್ಲ ಅವರೇ ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಎಂದರು.

ಈ ಅನರ್ಹ ಶಾಸಕ ನಮ್ಮ ಮನೆಗೆ ಬಂದು ಆಯ್ಯೋ ಅಣ್ಣಾ ನಾನು ನಿಮ್ಮ ನೆಂಟ ಅಂತಾನೆ ಇನ್ನೊಂದು ಕಡೆ ನೆಂಟನಿಗೆ ವಿಷ ಹಾಕುತ್ತಾನೆ. ಇವನು ಈ ಭೂಮಿ ಮೇಲೆ ನಾನು ಒಬ್ಬನೇ ಬುದ್ಧಿವಂತ ಎಂದು ತಿಳಿದುಕೊಂಡಿದ್ದಾನೆ ಯಾವ್ಯಾವ ಸಂದರ್ಭದಲ್ಲಿ ಯಾರ್ಯಾರಿಗೆ ಟೋಪಿ ಹಾಕಿದ್ದಾನೆ ಎಂಬುದು ಗೊತ್ತಿದೆ. ನಮ್ಮ ತಂದೆ ಕಾಲದಿಂದ ಚಿಕ್ಕಬಳ್ಳಾಪುರದಲ್ಲಿ ಕೆ. ಬಿ. ಪಿಳ್ಳಪ್ಪನವರ ಕುಟುಂಬ ನಮ್ಮ ತಂದೆಗೆ ಹಾಗೂ ನನಗೆ ಹೆಗಲಿಗೆ ಹೆಗಲು ಕೊಟ್ಟು ರಾಜಕೀಯ ಮಾಡಿದ್ದಾರೆ ಆದರೆ ಇವರು ಯಾವುದೇ ಹಣ ಮಾಡಿಲ್ಲ ಜನರ ವಿಶ್ವಾಸ ಗಳಿಸಿ ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂದು ತಿಳಿಸಿದರು.

Advertisement

ಪ್ರತಿ ಮನೆ ಯಜಮಾನ್ರ ಪೋನ್‌ ನಂಬರ್‌ ತೆಗೆದುಕೊಳ್ಳಿ ಪ್ರತಿ ಮನೆಗೆ ಉಡುಗೊರೆ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ ಇದು ಎಲ್ಲರಿಗೂ ಗೊತ್ತು. ಅವನ ಹಣಕ್ಕೆ ಮಾರು ಹೋಗಬೇಡಿ ಅವನು ಏನು ಸ್ವಂತ ಸಂಪಾದನೆ ಮಾಡಿ ಹಣ ಹಂಚುತಿಲ್ಲ ನಿಮ್ಮ ಹಣವನ್ನು ಲೂಟಿ ಮಾಡಿ ಈ ಉಪ ಚುನಾವಣೆಯಲ್ಲಿ ಖರ್ಚು ಮಾಡುತ್ತಿದ್ದಾನೆ ಎಂದು ಎಕವಚನದಲ್ಲಿ ಮಾತನಾಡಿದರು.

ಅನರ್ಹ ಶಾಸಕ ಸುಧಾಕರ್‌, ನನಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿ. ನಾನು ನಿಮ್ಮ ಪಕ್ಷಕ್ಕೆ ಬಂದು ಬಿಡುತ್ತೇನೆ. ಚಿಕ್ಕಬಳ್ಳಾಪುರ ನಾನೇ ಉಸ್ತುವಾರಿ ತೆಗೆದುಕೊಂಡು ನೋಡಿಕೊಳ್ಳುತ್ತೇನೆ ಎಂದು ಕತೆ ಕಟ್ಟಿದ ಮಾತಿಗೆ ನಾನು ಮರಳಾಗಲಿಲ್ಲ. ಇಲ್ಲಿನ ಜನರಿಗೆ ಮೆಡಿಕಲ್‌ ಕಾಲೇಜು ಮುಖ್ಯ ಅಲ್ಲ ಉತ್ತಮ ಆಸ್ಪತ್ರೆಗಳ ಅವಶ್ಯಕತೆ ಇದೆ. ಪರಿಸರ ಮಂಡಳಿಗೆ ಅಧ್ಯಕ್ಷನಾಗಿ ಮಾಡಿ ಎಂದು ಪತ್ರ ಕೊಟ್ಟಿದ್ದು, ಬಿಟ್ಟರೆ ಕ್ಷೇತ್ರದ ಅಭಿವೃದ್ಧಿಗೆ ಒಂದು ಪತ್ರವು ನನಗೆ ಕೊಟ್ಟಿಲ್ಲ.
-ಎಚ್‌.ಡಿ.ಕುಮಾರಸ್ವಾಮಿ. ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next