Advertisement

ದೇಣಿಗೆ ವಿಚಾರವಾಗಿ ಎಚ್‌ಡಿಕೆ ಹೇಳಿಕೆ ಸರಿಯಲ್ಲ: ಡಿಸಿಎಂ ಅಶ್ವಥ್‌ನಾರಾಯಣ

08:35 PM Feb 19, 2021 | Team Udayavani |

ಮಂಡ್ಯ: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವ ವಿಚಾರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್‌ನಾರಾಯಣ್ ಹೇಳಿದರು.

Advertisement

ನಗರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ವರ್ಷಗಳ ಹೋರಾಟದ ಫಲವಾಗಿ ಬಂದಿರುವ ಭಾಗ್ಯವಾಗಿದೆ. ನಮ್ಮ ಸಮಾಜದಲ್ಲಿ ರಾಮನ ಬಗ್ಗೆ ಅಪಾರ ಭಕ್ತಿ, ಗೌರವ ಇದೆ. ಯಾರೇ ಆಗಲೀ ರಾಮ ಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತನ್ನ ಒಂದು ಸಣ್ಣ ಕಾಣಿಕೆ ಅರ್ಪಣೆ ಮಾಡುವ ಭಯಕೆ ಇದೆ. ಸ್ವತಃ ಅವರೇ ನಾನು ದೇವಸ್ಥಾನಕ್ಕೆ ಸಮರ್ಪಣೆ ಮಾಡಿದ್ದೇನೆ ಎಂದು ಹೇಳಿದ್ದಾರೆ ಎಂದರು.

ಇದನ್ನೂ ಓದಿ:  ಕೋಟ ಶ್ರೀನಿವಾಸ ಪೂಜಾರಿ ಕಾರಿಗೆ KSRTC ಬಸ್ ಢಿಕ್ಕಿ: ಅಪಾಯದಿಂದ ಪಾರಾದ ಸಚಿವರು

ಇಲ್ಲಿ ಒತ್ತಾಯ ಮಾಡುವ ಪ್ರಶ್ನೆ ಇಲ್ಲ. ಸ್ವಇಚ್ಛೆಯಿಂದ ದಾನ ಮಾಡುವುದಕ್ಕೆ ಮುಂದೆ ಬರುತ್ತಿದ್ದಾರೆ. ಅವರ ಸಾಮರ್ಥ್ಯಕ್ಕೆ ತಕ್ಕಂತೆ 10 ರೂ. ನಿಂದ ನೀಡುತ್ತಿದ್ದಾರೆ. ಹಾಗಾಗಿ ಇಲ್ಲಿ ಒತ್ತಾಯವಿಲ್ಲ. ಇಡೀ ಸಮಾಜ ರಾಮನ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನನ್ನ ಕಾಣಿಕೆ, ನನ್ನ ಪುಣ್ಯ ಅಂತಾ ಹೇಳುತ್ತಿದ್ದಾರೆ. ಒಂದು ಕಡೆ ಈ ರೀತಿ ಹೇಳಿಕೆ ಕೊಡುವುದು ಸಮಾಜಕ್ಕೆ ಅಗೌರವ ತಂದoತಾಗುತ್ತದೆ. ನಮ್ಮ ದೇಶದ ರಾಮನಲ್ಲಿ ನಂಬಿಕೆ ಇರುವ ಜನರಿಗೆ ಸ್ವಇಚ್ಛೆಯಿಂದ ಕೊಡುತ್ತಿರುವವರಿಗೆ ಆಪಾದನೆ ಮಾಡುತ್ತಿರುವುದು ಶ್ರೇಯಸ್ಸು ಅಲ್ಲ. ಈ ಹೇಳಿಕೆ ಸೂಕ್ತವಲ್ಲ. ಅವರು ಎಲ್ಲಾದ್ರೂ ಒಬ್ಬರನ್ನ ಉದಾಹರಣೆ ಕೊಟ್ಟು ಈ ರೀತಿ ದುರ್ಬಳಕೆ ಆಗಿರುವುದನ್ನ ನೋಡಿದ್ದಾರಾ?. ಬ್ಲಾಂಕೆಟ್ ಸ್ಟೇಟ್ಮೆಂಟ್ ಇದು. ಜನರಲ್ ಆಗಿ ಆಪಾದನೆ ಮಾಡಬೇಕೆಂದು ಮಾಡಿರುವ ಆರೋಪವಿದು. ಇದಕ್ಕೆ ಯಾವ ಆಧಾರವು ಇಲ್ಲ ಎಂದರು.

ಇದನ್ನೂ ಓದಿ:  ಬಿಜೆಪಿಯವರು ಕೂಲಿ ಕಾರ್ಮಿಕರ ವಿರೋಧಿಗಳು: 2 ವರ್ಷದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಸಿದ್ದು

Advertisement

ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಲ್ಲ:

ಬಹಳ ಸ್ಪಷ್ಟವಾಗಿ ಸರ್ಕಾರದಲ್ಲಿ ಮೀಸಲಾತಿ ವಿಚಾರದಲ್ಲಿ ಯಾರೂ ಸಾರ್ವಜನಿಕವಾಗಿ ಮಾತನಾಡಬಾರದು ಎಂದು ತಿರ್ಮಾನ ಮಾಡಲಾಗಿದೆ. ಸರ್ಕಾರ ಇಂಥ ವಿಚಾರಗಳ ಬಗ್ಗೆ ಸೂಕ್ತ ಕ್ರಮ ವಹಿಸುವ ಕೆಲಸ ಮಾಡುತ್ತದೆ. ಸಂಪೂರ್ಣವಾಗಿ ಮೀಸಲಾತಿ ವಿಚಾರದಲ್ಲಿ ಯಾರ ಕೈವಾಡ ಇಲ್ಲ. ಬಹಳ ಸ್ಪಷ್ಟತೆ ಇದೆ. ಈ ವಿಚಾರ ವೈಜ್ಞಾನಿಕವಾಗಿ ಆಗುವ ವಿಚಾರವಾಗಿದ್ದು, ಇದರ ಬಗ್ಗೆ ಹೆಚ್ಚು ಮಾತನಾಡುವುದು ಸೂಕ್ತವಲ್ಲ ಎಂದರು.

ಸಿಎo, ರಾಜ್ಯಾಧ್ಯಕ್ಷರ ತೀರ್ಮಾನ:

ಕಾಂಗ್ರೆಸ್-ಜೆಡಿಎಸ್‌ನಿoದ ಶಾಸಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ಸಿಎಂ ಹಾಗೂ ರಾಜ್ಯಾಧ್ಯಕ್ಷರು ತೀರ್ಮಾನಿಸುತ್ತಾರೆ ಎಂದರು.

ತಾಪo, ಜಿಪಂ ಚುನಾವಣೆ ಮುಂದೂಡಿಕೆ ಪ್ರಶ್ನೆ ಇಲ್ಲ:

ಪ್ರಸ್ತುತ ಯಾವ ಚುನಾವಣೆಯನ್ನು ಮುಂದೂಡುವ ಪ್ರಶ್ನೆ ಇಲ್ಲ. ಸಂವಿಧಾನಾತ್ಮಕವಾಗಿ ಯಾವ ಕಾಲದಲ್ಲಿ ಯಾವ ಚುನಾವಣೆ ನಡೆಯಬೇಕು. ಆ ಕಾಲದಲ್ಲಿ ಚುನಾವಣೆ ನಡೆಯುತ್ತದೆ. ಚುನಾವಣೆ ಮುಂದೂಡುವoಥ ಯಾವುದೇ ಪ್ರಯತ್ನವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:  ಕಾರ್ಕಳ: ಮಾಟ, ಮಂತ್ರ, ದೋಷ ಎಂದೇಳಿ ವ್ಯಕ್ತಿಗೆ 30 ಲಕ್ಷ ವಂಚಿಸಿದ ಮಹಿಳೆ !

Advertisement

Udayavani is now on Telegram. Click here to join our channel and stay updated with the latest news.

Next