Advertisement

ಪುಸ್ತಕ ದಿನದಂದು ತನ್ನ ಪುಸ್ತಕ ಪ್ರೇಮದ ಬಗ್ಗೆ ಹೇಳಿಕೊಂಡ ಕುಮಾರಸ್ವಾಮಿ

03:37 PM Apr 23, 2020 | keerthan |

ಬೆಂಗಳೂರು: ಪುಸ್ತಕದ ದಿನದ ಸಂದರ್ಭದಲ್ಲಿ ತನ್ನ ಪುಸ್ತಕ ಪ್ರೇಮದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಎಲ್ಲಾ ಪುಸ್ತಕ ಪ್ರೇಮಿಗಳಿಗೆ ವಿಶ್ವ ಪುಸ್ತಕ ದಿನದ ಶುಭಾಶಯಗಳು. ನನ್ನ ಮನೆಯಲ್ಲಿ ನನ್ನದೇ ಆದ ಪುಟ್ಟ ಖಾಸಗಿ ಲೈಬ್ರರಿ ಇದೆ. ನೂರಾರು ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ಸಂಗ್ರಹವಿದೆ. ಈಗ ನಾನು ಓದುತ್ತಿರುವುದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ A Life of Truth in Politics ಪುಸ್ತಕ ಎಂದಿದ್ದಾರೆ.

ಪುಸ್ತಕ ಮೇಳಗಳಿಗೆ ಹೋಗಿ ನನಗಿಷ್ಟವಾದ ಪುಸ್ತಕಗಳನ್ನು ಖರೀದಿಸುವ ಅಭ್ಯಾಸವೂ ಇದೆ. ಪುಸ್ತಕ ಓದಿದ ನಂತರ ಇಷ್ಟದ ಲೇಖಕರೊಂದಿಗೆ ಚರ್ಚಿಸುವ ಅಭ್ಯಾಸವೂ ಇದೆ. ಬೋಳುವಾರು ಮಹಮದ್ ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿ ಓದಿದ ನಂತರ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ್ದೆ. ಆರಂಭದಲ್ಲಿ ಅವರು ನಂಬಲು ಸಿದ್ಧರಿರಲಿಲ್ಲ. ಪುಸ್ತಕ ದಿನದ ಶುಭಾಶಯಗಳು ಮತ್ತೊಮ್ಮೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next