Advertisement
ಜಯನಗರದ ಆಸ್ಪತ್ರೆಯಿಂದ ಬಿಡುಗಡೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ” ಅಭಿಮಾನಿಗಳು, ಕಾರ್ಯಕರ್ತರು ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ. ದೇವರು, ತಂದೆ, ತಾಯಿ ಆಶೀರ್ವಾದ ಇರುವವರೆಗೆ ನನಗೆ ಯಾವುದೇ ಅಪಾಯ ಆಗಲ್ಲ. ಯಾರು ಆತಂಕ ಪಡುವ ಅಗತ್ಯವಿಲ್ಲ. ಹೃದಯಕ್ಕೆ ಸಂಬಂಧಿಸಿ ಈ ವರೆಗೆ ಮೂರು ಬಾರಿ ವಾಲ್ವ್ ಮರು ಜೋಡಣೆ ಕಾರಣಕ್ಕಾಗಿ ಬ್ಲಡ್ ಥಿನ್ನರ್ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ರಕ್ತ ಹೆಪ್ಪುಗಟ್ಟದಿರಲಿ ಎಂಬ ಕಾರಣಕ್ಕೆ ಆ ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ. ಕೆಲವೊಮ್ಮೆ ವಿಶ್ರಾಂತಿ ರಹಿತ, ಅಧಿಕ ಒತ್ತಡದಿಂದ ಕೆಲಸ ಮಾಡುವಾಗ ಈ ರೀತಿ ಮೂಗಿನಿಂದ ರಕ್ತ ಸೋರಿಕೆಯಾಗುವುದು ಸಹಜವಾಗಿದೆ” ಎಂದರು.
Related Articles
BJP-JDS Meet: ಸುದ್ದಿಗೋಷ್ಠಿ ವೇಳೆಯೇ ಕೇಂದ್ರ ಸಚಿವ ಕುಮಾರಸ್ವಾಮಿ ಮೂಗಿನಲ್ಲಿ ರಕ್ತಸ್ರಾವ !
Advertisement
ಪಾದಯಾತ್ರೆಗೆ ಇನ್ನೂ 1 ವಾರ ಇದೆ:
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಬೆಂಗಳೂರು -ಮೈಸೂರು ಪಾದಯಾತ್ರೆಗೆ ಇನ್ನೂ ಒಂದು ವಾರ ಇದೆ. ವೈದ್ಯರು ವಿಶ್ರಾಂತಿಗೆ ಸೂಚಿಸಿದ್ರೂ ಪಾದಯಾತ್ರೆ ಮಾಡಬೇಕಿದೆ ನನಗೆ ಆರೋಗ್ಯ ಸಂಪೂರ್ಣ ಹದಗೆಟ್ಟಿಲ್ಲ ವಿಶ್ರಾಂತಿ ಸೂಚಿಸಿದರೆ ನಾನು ಗೈರು ಆದರೆ ನಿಖಿಲ್ ಕುಮಾರಸ್ವಾಮಿಯವರು ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳೊಂದಿಗೆ ಎಲ್ಲರ ಜೊತೆಗೂಡಿ ಪಕ್ಷದ ಸಂಘಟನೆಗೆ ಒತ್ತು ನೀಡುತ್ತಾರೆ. ನನಗೆ ವಿಶ್ರಾಂತಿ ಹೇಳಿದ್ರೆ ಅವರು (ನಿಖಿಲ್) ನೇತೃತ್ವದಲ್ಲಿ ಆರಂಭ ಮಾಡುತ್ತಾರೆʼ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಮಾಹಿತಿ ನೀಡಿದರು.