Advertisement

ಒತ್ತುವರಿ ಜಾಗದಲ್ಲಿ ಎಚ್‌ಡಿಕೆ ತೋಟದ ಮನೆ

11:07 PM Nov 16, 2023 | Team Udayavani |

ಬೆಂಗಳೂರು: ಒತ್ತುವರಿ ಜಾಗದಲ್ಲಿ ಬಿಡದಿ ತೋಟದ ಮನೆ ನಿರ್ಮಾಣ ಪ್ರಕರಣ ಸಂಬಂಧ ಮಾಜಿ ಸಿಎಂ ಎಂಬ ಯಾವ ಮುಲಾಜನ್ನೂ ಕುಮಾರಸ್ವಾಮಿ ಅವರಿಗೆ ತೋರಿಸುವು ದಿಲ್ಲ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

Advertisement

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಡದಿ ಜಮೀನಿನ ವಿಚಾರದಲ್ಲಿ ನ್ಯಾಯಾಲಯದ ಆದೇಶ ಇದೆ. ಅದನ್ನು ನಮ್ಮ ಸರಕಾರ ಪಾಲಿಸಲಿದೆ. ಏನು ಮಾಡಬೇಕೋ ಅದನ್ನು ಮಾಡುತ್ತದೆ ಎಂದು ಹೇಳಿದರು.

ಅಕ್ರಮ ವಿದ್ಯುತ್‌ ಸಂಪರ್ಕದ ವಿಷಯಕ್ಕೂ ಆಸ್ತಿ ಏರಿಕೆ ವಿಷಯಕ್ಕೂ ಸಂಬಂಧವಿರಲಿಲ್ಲ. ಆಸ್ತಿ ತನಿಖೆಗೆ ಯಾರ ವಿರೋಧವೂ ಇಲ್ಲ. ವಿಷಯಾಂತರ ಮಾಡಲು ಆಸ್ತಿ ವಿಷಯವನ್ನು ಮುಂದಿಟ್ಟಿದ್ದಾರೆ. ಯಾರ ಆಸ್ತಿ ಅವೈಜ್ಞಾನಿಕವಾಗಿ ಏರಿಕೆಯಾಗಿದೆಯೋ ತನಿಖೆ ಆಗಲಿ. ಕೇಂದ್ರದ ಬಳಿ ದೊಡ್ಡ ತನಿಖಾ ಸಂಸ್ಥೆಗಳಿವೆ. ಪ್ರಧಾನಿಗಳು ನಮಗೇನೂ ಹತ್ತಿರದಲ್ಲಿಲ್ಲ ಎಂದು ಪರೋಕ್ಷವಾಗಿ ಟಾಂಗ್‌ ನೀಡಿದರು.

ದಾಸನಪುರ ಹೋಬಳಿಯಲ್ಲಿ ಮಾಕಳಿ ಕೆರೆ ನುಂಗಿರುವ ಸಚಿವರು
ಕೃಷಿ ಸಚಿವ ಚಲುವರಾಯಸ್ವಾಮಿ ತಮ್ಮ ವಿರುದ್ಧ ಮಾಡಿದ ಆರೋಪಕ್ಕೆ ತಿರುಗೇಟು ನೀಡಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ನನ್ನ ಆಸ್ತಿ ಬಗ್ಗೆ ತನಿಖೆ ಮಾಡಬೇಕು ಎಂದು ಒಬ್ಬ ಸಚಿವರು ಅಪ್ಪಣೆ ಕೊಡಿಸಿದ್ದಾರೆ. ಆದರೆ ಅವರು ಒಂದು ಕೆರೆಯನ್ನೇ ನುಂಗಿ ನೀರು ಕುಡಿದಿದ್ದಾರೆ. ಅದಕ್ಕೆ ಯಾವ ತನಿಖೆ ನಡೆಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಮಂಡ್ಯ ಜಿಲ್ಲೆಯ ಮಹಾ ನಾಯಕರೊಬ್ಬರು ದಾಸನಪುರ ಹೋಬಳಿಯ ಸರ್ವೇ ನಂಬರ್‌ 13ರಲ್ಲಿರುವ ಮಾಕಳಿ ಕೆರೆಯನ್ನೇ ಸ್ವಾಹ ಮಾಡಿ¨ªಾರೆ. ಅವರ ಬಗ್ಗೆಯೂ ತನಿಖೆ ಮಾಡಿಸಬೇಕು ಅಲ್ಲವೇ ಎಂದು ಪ್ರಶ್ನಿಸಿದರು.

ನಾನು ಹೇಗೆ ರಾಜಕೀಯ ಮಾಡಿದೆ, ಯಾವ ರೀತಿ ನಡೆದುಕೊಂಡಿದ್ದೇನೆ ಎನ್ನುವುದನ್ನು ರಾಜ್ಯದ ಜನರು ನೋಡಿದ್ದಾರೆ. ಇವರು ಏನು ಎನ್ನುವುದು ನಾಡಿನ ಜನರಿಗೆ ಗೊತ್ತಿದೆ. ಮಾಕಳಿ ಗ್ರಾಮದ ಆ ಮೂರು ಎಕರೆ ಮೂವತ್ತು ಗುಂಟೆ ನುಂಗಿದ್ದು ಯಾರು? ನಾನು ಕೆರೆ ನುಂಗುವ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next