ರಾಮನಗರ: ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಮುಖಕ್ಕೆ ಮಂಗಳಾರತಿ ಆಗಿದೆ. ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಜಯಚಂದ್ರ ಅವರ ತಂದಿದ್ದ ಮತಾಂತರ ನಿಷೇಧ ಕಾನೂ ನಿನ ನೋಟ್‌ಗೆ ಸಹಿ ಹಾಕಿದ್ದಾರೆ.
ಇಂದು ಬಿಜೆಪಿಯವರು ಮಂಡಿಸುತ್ತಿರುವ ಮತಾಂತರ ನಿಷೇಧ ಕಾಯ್ದೆ ಬಿಲ್ ಬಗ್ಗೆ ಅವರು ಯಾವ ಮುಖ ಇಟ್ಟುಕೊಂಡು ಮಾತನಾಡ್ತಾರೆ ಎಂದು ಮಾಜಿ ಸಿಎಂ ಎಚ್. ಡಿ.ಕುಮಾರಸ್ವಾಮಿ ಹರಿಹಾಯ್ದರು. ತಾಲೂಕಿನ ಬಿಡದಿಯಲ್ಲಿ ಪುರಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯ ರ್ಥಿಗಳ ಪರ ಪ್ರಚಾರದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಆಡಳಿತವಿದ್ದಾಗ ಮತಾಂತರ ನಿಷೇಧ ಕಾಯ್ದೆ ವಿಚಾರ ಕ್ಯಾಬಿನೆಟ್ ಮುಂದೆ ಬಂದಿದೆ.
ಅದಿವೇಶನದಲ್ಲೇ ಸಿದ್ದರಾಮಯ್ಯ ಅವರ ನಿಜ ಬಣ್ಣ ಬಯಲಾಗಿದೆ. ಮತಾಂತರ ನಿಷೇಧ ಕಾಯ್ದೆ ಅಸ್ತ್ರವನ್ನು ಬಿಜೆಪಿಗೆ ಕೊಟ್ಟಿದ್ದೇ ಕಾಂಗ್ರೆಸ್‌ನವರು. ಇವರು ಈ ನಾಡಿನ ಜನತೆಗೆ ರಕ್ಷಣೆ ಕೊಡ್ತಾರ ಎಂದು ಪ್ರಶ್ನಿಸಿದರು.
ನೈತಿಕ ಹಕ್ಕು ಇಲ್ಲ: ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕ ಹಕ್ಕು ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಎಚ್ .ಡಿ.ಕುಮಾರಸ್ವಾಮಿ ಹರಿಹಾಯ್ದರು. ಇದೇ ಬಿಜೆಪಿಯವರು ಗೋಹತ್ಯೆ ನಿಷೇಧ ಕಾಯ್ದೆ ತಂದಾಗ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್‌ನವರು ವಾಕ್‌ಔಟ್ ಮಾಡಿ ದ್ದರು. ಕಾಯ್ದೆ ವಿರುದ್ಧ ವೋಟು ಹಾಕಲು ನಿಂತಿದ್ದರಾ ಎಂಬು ಪ್ರಶ್ನಿಸಿದ ಕುಮಾರಸ್ವಾಮಿ, ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ನಾನು ಹೊಡದಂತೆ ಮಾಡ್ತೀನಿ, ನೀನು ಅತ್ತಂಗೆ ಮಾಡು ಎಂಬುದು ಈ ಪಕ್ಷಗಳ ಧೋರಣೆ ಎಂದು ಜರಿದರು.
ಭ್ರಮಾಲೋಕದಲ್ಲಿ ಕಾಂಗ್ರೆಸ್ ನಾಯಕರು: ಕಾಂಗ್ರೆಸ್ ನಾಯಕರು ಈಗಾಗಲೇ ಅಧಿಕಾರ ಹಿಡಿದೆ ಬಿಟ್ಟೆವು ಎಂಬ ಭ್ರಮಾಲೋಕದಲ್ಲಿ ಇದ್ದಾರೆ. ಆಕಾಶದೆತ್ತ ರಕ್ಕೆ ಹೋಗಿಬಿಟ್ಟಿದ್ದಾರೆ. ಆದರೆ ಜನರೇ ಇವರನ್ನು ಇಳಿಸುತ್ತಾರೆ ಎಂದರು. ಸಮುದಾಯಗಳಿಗೆ ರಕ್ಷಣೆ ಕೊಡುವ ವಿಚಾರದಲ್ಲಿ ತಾವು ಈ ಕಾಂಗ್ರೆಸ್ ಮಹಾನ್ ನಾಯಕರಿಂದ ಕಲಿಯಬೇಕಾಗಿಲ್ಲ. 2023 ರಕ್ಕೆ ಜೆಡಿಎಸ್ ಶಕ್ತಿ ಏನೆಂದು ಜನ ತೋರಿಸುತ್ತಾರೆ ಎಂದರು.
ನಮ್ಮ ವಿರೋಧವಿದೆ: ಮತಾಂತರ ನಿಷೇಧ ಕಾಯ್ದೆ ಬಗ್ಗೆ ಜೆಡಿಎಸ್ ನಿಲುವೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮತಾಂತರ ನಿಷೇಧ ಕಾಯ್ದೆ ಬಗ್ಗೆ ತಮ್ಮ ವಿರೋಧವಿದೆ. ನಮ್ಮ ಶಾಸಕರು ಕಾಯ್ದೆ ಜಾರಿ ವಿರುದ್ದವಾಗಿ ಮತ ಹಾಕ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.